Featured, ಇತರೆ, ಸ್ಥಳೀಯ

ಸುಳ್ಯ : ಅರಂಬೂರು AYFA ವತಿಯಿಂದ ಇಡ್ಯಡ್ಕ ಸ.ಹಿ.ಪ್ರಾ ಶಾಲೆಯ ಮಕ್ಕಳಿಗೆ ಸಂಭ್ರಮದ ‘ಚಿಣ್ಣರ ಚಿತ್ತಾರ’ ಕಾರ್ಯಕ್ರಮ

ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿ ಕಲಿಕೆಗೆ ಉತ್ತೇಜನ ನೀಡುತ್ತವೆ : ವಿಜಯಲಕ್ಷ್ಮಿ

ಸುಳ್ಯ: ಫೆ.28, ಸುಳ್ಯದ ಅರಂಬೂರು ಇಡ್ಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸ್ಥಳೀಯ ಯುವಕರ ಸಂಘಟನೆಯಾದ ‘ಅಲ್ ಅಮೀನ್ ಯೂತ್ ಫೆಡರೇಶನ್ ಅರಂಬೂರು’ ಇದರ ಸ್ಫಟಿಕ ಮಹೋತ್ಸವದ ಸವಿ ನೆನಪುಗಾಗಿ “ಚಿಣ್ಣರ ಚಿತ್ತಾರ” ಎಂಬ ವಿನೂತನ ರೀತಿಯ ಕಾರ್ಯಕ್ರಮವನ್ನು ನಡೆಸಲಾಯಿತು.

ಸಭಾ ಕಾರ್ಯಕ್ರಮವನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜಗದೀಶ್ ಸರಳಿಕುಂಜ ಉದ್ಘಾಟಿಸಿದರು. ಬದ್ರ್ ಜುಮಾ ಮಸೀದಿ ಅರಂಬೂರು ಇದರ ಅಧ್ಯಕ್ಷರಾದ ಹಾಜಿ ಭಾಷಾ ಸಾಹೇಬ್ ಅರಂಬೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಯೂಸುಫ್ ಅಂಜಿಕ್ಕಾರ್, ಉದ್ಯಮಿ ಗಳಾದ ಒಮರ್ ಫಾರೂಕ್ TOK LV Pvt Ltd. , ಮೂಕಾಂಬಿಕಾ ಭಜನಾ ಮಂದಿರ ಅಧ್ಯಕ್ಷರಾದ ಪರಮೇಶ್ವರ ನೆಡ್ಚಿಲು, SDMC ಸಮಿತಿ ಉಪಾಧ್ಯಕ್ಷರಾದ ಪ್ರೇಮಲತಾ ರವರು ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರಾದ ವಿಜಯಲಕ್ಷ್ಮಿಯವರು
ಶಾಲಾ ಮಕ್ಕಳಿಗೆ ನಡೆಸುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉತ್ತೇಜನ ನೀಡುತ್ತವೆ . ಇಂತಹ ಸಮಾಜಮುಖಿ ಕೆಲಸಗಳನ್ನು ನಡೆಸುವ ಅಲ್ ಅಮೀನ್ ಸಂಸ್ಥೆಯಿಂದ ಶೈಕ್ಷಣಿಕ ಸೇವೆಗಳು ಮುಂದೆ ಬರಲಿ ಎಂದು ಶುಭ ಹಾರೈಸಿದರು.
ಬಳಿಕ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರು, ಸುಮಾರು ಹದಿನೈದು ವರ್ಷಗಳಿಂದ ಊರಿನಾದ್ಯಂತ ಅತ್ಯುನ್ನತ ಸಮಾಜಮುಖಿ ಕೆಲಸಗಳನ್ನು ನಡೆಸುತ್ತಿರುವ ಅಲ್ ಅಮೀನ್ ಸಂಘಟನೆಯು , ತನ್ನ ಬಹುತೇಕ ಸದಸ್ಯರು ಕಲಿತ ಇಡ್ಯಡ್ಕ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಸಂಘಟಕರಾದ ಅಲ್ ಅಮೀನ್ ಯೂತ್ ಫೆಡರೇಶನ್ ಅರಂಬೂರು ಇದರ ಅಧ್ಯಕ್ಷರಾದ ಆಸೀಫ್ ಪನ್ನೆ ಶೈಕ್ಷಣಿಕ ಅಭ್ಯುದಯದ ಬಗ್ಗೆ ಮಾತನಾಡಿದರು
ಸಂಘಟನೆಯ ಈ ಕಾರ್ಯಕ್ರಮದಡಿಯಲ್ಲಿ ಪೂರ್ವಭಾವಿಯಾಗಿ,ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ವಿವಿಧ ರೀತಿಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳನ್ನು ಸಂಘಟನೆಯ ವತಿಯಿಂದ ಅರಂಬೂರು ಶಾಲೆಯ ಸಭಾಂಗಣದಲ್ಲಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಶಿಕ್ಷಕರು, ಪೋಷಕರು, ಸಾರ್ವಜನಿಕರು ಹಾಗೂ ಸಂಘಟನೆಯ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಗೆ ಮೆರುಗು ನೀಡಿದರು.
ಸಂಘಟನೆಯ ಕಾರ್ಯದರ್ಶಿ ನಿಸಾರ್ ಶೈನ್ ಪಾಲಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮಕ್ಕಳಿಗೆ ಸಿಹಿ ತಿಂಡಿಗಳ ಪೊಟ್ಟಣಗಳನ್ನು ನೀಡುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.

Related Posts