ಐದು ಮತ್ತು ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ – ಹಲವು ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್
ಸುಳ್ಯ ಸಮೀಪದ ಜಟ್ಟಿಪಳ್ಳದಲ್ಲಿರುವ ಹಯಾತುಲ್ ಇಸ್ಲಾಂ ಕಮಿಟಿ (ರಿ) ಜಟ್ಟಿಪಳ್ಳ ಇದರ ಅಧೀನದಲ್ಲಿ ಇರುವ ಬುಸ್ತಾನುಲ್ ಉಲೂಂ ಮದ್ರಸದ ವಿದ್ಯಾರ್ಥಿಗಳು ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇತ್ತೀಚೆಗೆ ನಡೆಸಿದ ಮದ್ರಸ ಐದನೇ ಮತ್ತು ಏಳನೇ ತರಗತಿಗಳ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ತೇರ್ಗಡೆಯಾಗಿದ್ದಾರೆ.
ಐದನೇ ತರಗತಿಯ ಮುಹಮ್ಮದ್ ಸಅದ್ ಎಸ್ ಹಾಗೂ ಮುಹಮ್ಮದ್ ಸರ್ಫರಾಝ್ ಎಸ್.ಎ. ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಏಳನೇ ತರಗತಿಯ ಮುಹಮ್ಮದ್ ಸಹಲ್ ಜೆ, ಮುಹಮ್ಮದ್ ಅಯಾನ್ ಮತ್ತು ಆಯಿಷತ್ ಶಮ ಪಿ.ಹೆಚ್ ಡಿಸ್ಟಿಂಕ್ಷನ್ ಪಡೆದು ತೇರ್ಗಡೆಯಾಗಿದ್ದಾರೆ.
ಮದ್ರಸ ಜನರಲ್ ಪರೀಕ್ಷೆಗಳಲ್ಲಿ ಭಾಗವಹಿಸಿದ ಇತರ ಎಲ್ಲಾ ತರಗತಿಗಳ ವಿದ್ಯಾರ್ಥಿಗಳೂ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಮದ್ರಸವು ಶೇಕಡಾ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಈ ಮದ್ರಸದಲ್ಲಿ ಸದರ್ ಉಸ್ತಾದರಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಹಾಗೂ ಮುಅಲ್ಲಿಂ ಸಿರಾಜ್ ಸಅದಿ ಅಲೆಕ್ಕಾಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹಯಾತುಲ್ ಇಸ್ಲಾಂ ಕಮಿಟಿ (ರಿ) ಜಟ್ಟಿಪಳ್ಳದಿಂದ ಮದ್ರಸಕ್ಕೆ ಉತ್ತಮ ಪ್ರೋತ್ಸಾಹ ದೊರಕುತ್ತಿದ್ದು, ರಕ್ಷಕ-ಪೋಷಕರ ಸಹಕಾರವೂ ಮಹತ್ತರವಾಗಿದೆ


