Featured, ಇತರೆ, ಸ್ಥಳೀಯ

ಅಜ್ಜಾವರ : ಝೈನಿಯ್ಯ ಮಜ್ಲಿಸುನ್ನೂರ್/ ಎಸ್ ಕೆ ಎಸ್ ಎಸ್ ಎಫ್ ವತಿಯಿಂದ ಕತ್ತರ್ ಇಬ್ರಾಹಿಂ ಹಾಜಿ ರವರೆಗೆ ಸನ್ಮಾನ

ಯಾರಿಗೂ ತಿಳಿಯದೇ ಮಾಡುವ ದಾನ ಧರ್ಮ  ಅಲ್ಲಾಹನು ಅತ್ಯಂತ ಪ್ರತಿಫಲ ನೀಡುವ ಸತ್ಕಾರ್ಯವಾಗಿದೆ : ಶಂಸುದ್ದೀನ್ ಹನೀಫಿ

ಅಜ್ಜಾವರ: ಮಾ 26 ರಂದು ಮಾರ್ಚ್ ತಿಂಗಳ ಝೈನಿಯಾ ಮಜ್ಲಿಸುನ್ನೂರ್ ಝೈನಿಯ್ಯ ಎಸ್ ಎನ್ ಇ ಸಿ ಚಯರ್ಮೆನ್ ಸಯ್ಯಿದ್ ಅಕ್ರಂ ಅಲೀ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದ ಖ್ಯಾತ ವಾಗ್ಮಿ ಶಂಸುದ್ದೀನ್ ಹನೀಫಿ ನಾವು ನಮ್ಮ ಜೀವನದಲ್ಲಿ ಬಯಪಡಬೇಕಾದ 4 ಕಾರ್ಯಗಳೆಂದರೆ , ಆಲ್ಲಾಹನಲ್ಲಿರುವ ವಿಶ್ವಾಸ ಕಳೆದು ಹೊಗುವುದರ ಕುರಿತು, ನಮ್ಮ ಒಳಿತು ಕೆಡುಕಗಳನ್ನು ಬರೆಯಲು ಬಲ ಮತ್ತು ಎಡ ಬಾಗದಲ್ಲಿ ಕುಳಿತಿರುವ ದೇವ ದೂತರ ಬಗ್ಗೆ, ಸತ್ಕಾರ್ಯದಲ್ಲಿ ಜೊತೆ ಸೇರುವ ಶೈತಾನನ ಕುರಿತು, ಇದನ್ನು ವಿವರಿಸುತ್ತಾ ನಾವು ಉತ್ತಮ ಕೆಲಸ ಮಾಡಿದ್ದೇವೆ ಇದು ಇನ್ನೊಬ್ಬರಿಗೆ ತಿಳಿಯಲು ವೈಯುಕ್ತಿಕ ದಾನ ಧರ್ಮಗಳನ್ನು ಪ್ರಚಾರ ಮಾಡಲು ನಾವು ತೋರಿಸುವ ಮನಸ್ಸು ಅದು ಶೈತಾನನ ಜೊತೆ ಸೇರುವಿಕೆಯಾಗಿದೆ. ಅಲ್ಲಾಹನ ಇಷ್ಟ ಬಯಸಿ ಯಾರಿಗೂ ತಿಳಿಯದೆ ಮಾಡುವ ದಾನಧರ್ಮಗಳು ಅತ್ಯಂತ ಪ್ರತಿಫಲ ನೀಡುವ ಸತ್ಕಾರ್ಯವಾಗಿದೆ ಎಂದು ಹೇಳಿದ ಅವರು ನಾಲ್ಕನೆಯದಾಗಿ ನಮ್ಮ ಅಂತ್ಯ ಕೆಟ್ಟದಾಗುವುದರ ಕುರಿತು ಭಯಪಡಬೇಕಾಗಿದೆ ಎಂದೇಳಿದರು.
ಕಾರ್ಯಕ್ರಮದಲ್ಲಿ ಮಜ್ಲಿಸುನ್ನೂರ್ ನೇತೃತ್ವನ್ನು ಮಹಮ್ಮದ್ ರಫೀಕ್ ಹನೀಫಿ , ಶಾಫಿ ದಾರಿಮಿ, ಮೊಹಿಯದ್ದೀನ್ ಅನ್ಸಾರಿ, ಕೆ ಎಚ್ ಅಬ್ದುಲ್ ರಝಾಕ್ ಮುಸ್ಲಿಯಾರ್, ಲತೀಫ್ ಅರ್ಶದಿ, ಅಬೂಬಕ್ಕರ್ ಅಝ್ ಅರಿ ವಹಿಸಿ ಅತ್ಯಂತ ಸುಂದರವಾಗಿ ಆಲಾಪಿಸಿದರು.
ಕಾರ್ಯಕ್ರಮದಲ್ಲಿ ಝೈನಿಯಾ ಟ್ರಸ್ಟ್ ಸಮಿತಿ ಅಧ್ಯಕ್ಷರಾದ ಖತ್ತರ್ ಇಬ್ರಾಹಿಂ ಹಾಜಿ ಮಂಡೆಕೋಲು ರವರನ್ನು ಎಸ್ ಕೆ ಎಸ್ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖಾ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಶಾಖಾ ಅಧ್ಯಕ್ಷರಾದ ಆರಿಸ್ ಕಲ್ತಡ್ಕ, ಪ್ರ ಕಾರ್ಯದರ್ಶಿ ಸಿದ್ದೀಕ್ ಬೊವಿಕ್ಕಾನ, ಕೋಶಾಧಿಕಾರಿ ಸಲೀಂ ಅಡ್ಕ, ಹಾಗೂ ಸದಸ್ಯರಾದ ಖಾದರ್ ತುಪ್ಪಕಲ್,ಮಹಮ್ಮದ್ ಶರೀಫ್ ಜಿ ಎಚ್, ಖಾದರ್ ಕೆ ಎಂ, ಉಮ್ಮರ್ ಬಯಂಬು, ಶಾಫಿ ಕರಾವಳಿ, ಅಬ್ದುಲ್ಲಾ ಕೆ ಎಂ , ಹಾಜರಿದ್ದರು
ಮುಖ್ಯ ಅಥಿತಿಯಾಗಿ ಝೈನಿಯ್ಯ ದಮಾಂ ಕೋಬರ್ ಸಮಿತಿ ಖಜಾಂಜಿ ಸಿಯಾಬ್ ಮಂಡೆಕೋಲು ಭಾಗವಹಿಸಿದರು.
m

Related Posts