ಸುಳ್ಯ, ಏಪ್ರಿಲ್ 23:
ಸುಳ್ಯದ ಕುಂಭಕೋಡು ನಿವಾಸಿ ಹಾಗೂ ಕುಂಭಕೋಡು ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದ ಮೊಯ್ದು ಕುಂಞಿ ಹಾಜಿ ಅವರು ಏಪ್ರಿಲ್ 22ರಂದು ತಡರಾತ್ರಿ ನಿಧನ ಹೊಂದಿದರು. ಅವರು ಸರಳ ವ್ಯಕ್ತಿತ್ವ ಹೊಂದಿದವರಾಗಿದ್ದು, ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು.
ಮೃತರು ಪುತ್ರರಾದ ಮಹಮ್ಮದ್ ಕುಂಞಿ, ಮುನೀರ್, SYS ಕುಂಭಕೋಡು ಯುನಿಟ್ ಅಧ್ಯಕ್ಷ ಲತೀಫ್ ಸಹದಿ, ಮಗಳು ನಸೀಮ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಜನಾಝಾ ನಮಾಝ್ ಏಪ್ರಿಲ್ 23ರಂದು ಬೆಳಿಗ್ಗೆ 8:30ಕ್ಕೆ ಕುಂಭಕೋಡು ಜುಮಾ ಮಸೀದಿಯಲ್ಲಿ ನೆರವೇರಲಿದ್ದು, ಬಳಿಕ ದಫನ ಕಾರ್ಯ ನಡೆಯಲಿದೆ.






m
