ಬೆಳ್ಳಾರೆ: ಸುನ್ನೀ ಜಂಇಯ್ಯತುಲ್ ಮುಅಲ್ಲೀಮೀನ್ ರಾಜ್ಯ ಸಮಿತಿ ಆಯೋಜಿಸಿದ್ದ ಮದ್ರಸಾ ಮಟ್ಟದ ತ್ರಿದಿನ “ಬಿ ಫ್ರೆಂಡ್” ವೇಕೇಶನ್ ಕ್ಯಾಂಪ್ ಮೇ 15, 16 ಹಾಗೂ 17ರಂದು ಬೆಳ್ಳಾರೆ ದಾರುಲ್ ಹಿಕ್ಮಾ ಮದ್ರಸದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ದಾರುಲ್ ಹಿಕ್ಮಾ ಕೇಂದ್ರ ಸಮಿತಿ ಉಪಾಧ್ಯಕ್ಷ ಮಹ್ಮೂದ್ ಹಾಜಿ ಧ್ವಜಾರೋಹಣ ನೆರವೇರಿಸಿ ಕ್ಯಾಂಪಿಗೆ ಚಾಲನೆ ನೀಡಿದರು. ಬಳಿಕ ಸ್ಥಳೀಯ ಹಿಫ್ಜುಲ್ ಕುರ್ಆನ್ ಮುದರಿಸ್ ಹಾಫಿಳ್ ಶಿಹಾಬುದ್ದೀನ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಮೀದ್ ಅಲ್ಫಾ ವಹಿಸಿ ಶುಭ ಹಾರೈಸಿದರು. ಸದರ್ ಮುಅಲ್ಲಿಂ ನಿಸಾರ್ ಸಖಾಫಿ ಕ್ಯಾಂಪಿನ ರೂಪುರೇಷೆಗಳನ್ನು ಸಭೆಗೆ ವಿವರಿಸಿದರು.
ಕ್ಯಾಂಪ್ನಲ್ಲಿ ವಿದ್ಯಾರ್ಥಿಗಳಿಗಾಗಿ ಮಾದರಿ ದರ್ಸ್, ಹದೀಸ್ ತರಗತಿ, ವ್ಯಾಯಾಮ, ಖಿದ್ಮತ್ ಚಟುವಟಿಕೆಗಳು ಹಾಗೂ ವಿವಿಧ ಪ್ರತಿಭಾ ಸ್ಪರ್ಧೆಗಳು ಆಯೋಜಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಂಸ್ಥೆಯ ಸಾರಥಿಗಳಾದ ಮುಸ್ತಫ ಮಾಸ್ತಿಕಟ್ಟೆ ಹಾಗೂ ಹನೀಫ್ ಹಾಜಿ ಇಂದ್ರಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್ಬಿಎಸ್ ಮುದಬ್ಬಿರ್ ತಾಜುದ್ದೀನ್ ಸಖಾಫಿ ಸ್ವಾಗತಿಸಿ, ವಂದಿಸಿದರು.






m
