Featured, ಇತರೆ, ಸ್ಥಳೀಯ

ಕೇರಳಂ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಟಿ.ಎಂ. ಶಾಹಿದ್ ತೆಕ್ಕಿಲ್ ಅಭಿನಂದನೆ

ತಿರುವನಂತಪುರಂ, ಮೇ 19 : ಕೇರಳಂ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ.ಡಿ. ಸತೀಶನ್ ಅವರನ್ನು ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಭೇಟಿಯಾಗಿ ಅಭಿನಂದಿಸಿದರು.
ತಿರುವನಂತಪುರಂ ಸೆಕ್ರಟ್ರಿಯೇಟ್‌ನಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಡೆದ ಈ ಭೇಟಿ ವೇಳೆ, ವಿ.ಡಿ. ಸತೀಶನ್ ಅವರು ಹಾಗೂ ಟಿ.ಎಂ. ಶಾಹಿದ್ ತೆಕ್ಕಿಲ್ ಪರಸ್ಪರ ಆತ್ಮೀಯವಾಗಿ ಮಾತುಕತೆ ನಡೆಸಿದರು.

ಇದೇ ವೇಳೆ, ನಿನ್ನೆ ನಡೆದ ಕೇರಳಂ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಿ.ಎಂ.ಪಿ ಧುರೀಣ ಅಬ್ದುಲ್ ಹಮೀದ್ ಬಾಪೂಟಿ, ಟಿ.ಎಂ. ಶಾಜ್ ತೆಕ್ಕಿಲ್, ಟಿ.ಎಂ. ಶೈನ್ ತೆಕ್ಕಿಲ್, ಟಿ.ಎಂ. ಶಯಾನ್ ತೆಕ್ಕಿಲ್ ಹಾಗೂ ಎಂ.ಎ. ಅಫ್ತಾಬ್ ಮುನಂಬತ್ ಮೊದಲಾದವರು ಉಪಸ್ಥಿತರಿದ್ದರು.
m

Related Posts