Featured, ಇತರೆ, ಸ್ಥಳೀಯ

ಕುಕ್ಕುಜಡ್ಕದಲ್ಲಿ ಸ್ಕೂಟಿ–ರಿಕ್ಷಾ ಅಪಘಾತ : ಚಾಲಕನಿಗೆ ಗಾಯ

ಸುಳ್ಯ, ಮೇ 25: ಕುಕ್ಕುಜಡ್ಕ ಸಮೀಪದ ದೊಡ್ಡತೋಟ ರಸ್ತೆಯ ಚಿಲ್ಪಾರು ಎಂಬಲ್ಲಿ ಸೋಮವಾರ ಸ್ಕೂಟಿ ಹಾಗೂ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಪಲ್ಟಿಯಾಗಿ ಚಾಲಕ ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ರಿಷಿಕೇಶ್ ಎಂಬವರ ಸ್ಕೂಟಿ ಪ್ರಶಾಂತ್ ಅವರ ರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಗೆ ರಿಕ್ಷಾ ಪಲ್ಟಿಯಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಪ್ರಶಾಂತ್ ಗಾಯಗೊಂಡಿದ್ದಾರೆ.
ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
m

Related Posts