Featured, ಇತರೆ, ಸ್ಥಳೀಯ

ಮಲಪ್ಪುರಂ : ತೆವಳುತ್ತಾ ಮನೆಯ ಗೇಟ್ ದಾಟಿ ನಡುರಸ್ತೆಗೆ ಬಂದ ಪುಟ್ಟ ಕಂದಮ್ಮ: ಬಸ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

ಮಲಪ್ಪುರಂ (ಕೇರಳ), ಜೂ. 11: ಕೇರಳದ ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿ ಪ್ರದೇಶದಲ್ಲಿ ಸಂಭವಿಸಬಹುದಾಗಿದ್ದ ಭೀಕರ ಅಪಘಾತವೊಂದು ಬಸ್ ಚಾಲಕ ಮತ್ತು ನಿರ್ವಾಹಕರ ಸಮಯಪ್ರಜ್ಞೆಯಿಂದ ತಪ್ಪಿದ ಘಟನೆ ನಡೆದಿದೆ

ಮನೆಯ ಗೇಟ್ ದಾಟಿ ಹೊರಬಂದ ಪುಟ್ಟ ಮಗು ಮಳೆ ನೀರಿನಿಂದ ಜಾರುವಂತಾಗಿದ್ದ ರಸ್ತೆಯ ಕಡೆಗೆ ತೆವಳುತ್ತಾ ಸಾಗುತ್ತಿತ್ತು. ಇದೇ ವೇಳೆ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ‘ಸಫಾ ಮರ್ವಾ’ ಬಸ್‌ನ ಚಾಲಕ ರಾಮಚಂದ್ರನ್ ಮಗುವನ್ನು ಗಮನಿಸಿ ತಕ್ಷಣವೇ ವಾಹನವನ್ನು ನಿಲ್ಲಿಸಿದರು.
ಬಳಿಕ ಬಸ್ ನಿರ್ವಾಹಕ ನವಾಸ್ ವಾಹನದಿಂದ ಇಳಿದು ರಸ್ತೆಯ ಮಧ್ಯೆ ಇದ್ದ ಮಗುವನ್ನು ಸುರಕ್ಷಿತವಾಗಿ ಎತ್ತಿಕೊಂಡು ಅದರ ಕುಟುಂಬದವರ ಬಳಿ ತಲುಪಿಸಿದರು. ಬಸ್ ಸಿಬ್ಬಂದಿಯ ಈ ತ್ವರಿತ ಕ್ರಮದಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.
ಈ ಸಂಪೂರ್ಣ ಘಟನೆ ಬಸ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಸ್ ಚಾಲಕ ರಾಮಚಂದ್ರನ್ ಹಾಗೂ ನಿರ್ವಾಹಕ ನವಾಸ್ ಅವರ ಸಮಯಪ್ರಜ್ಞೆ, ಮಾನವೀಯತೆ ಮತ್ತು ಕರ್ತವ್ಯನಿಷ್ಠೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
m

Related Posts