ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ ಯಾಗಿದ್ದು ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈ ಯಲ್ಲಿ ವೈದ್ಯ ವೃತ್ತಿಯನ್ನು ಮಾಡುತ್ತಿರುವ ಡಾ ರಿಜ್ವಾನ್ ರವರನ್ನು ಸಾಧಕ ಹಳೆ ವಿದ್ಯಾರ್ಥಿ ನೆಲೆಯಲ್ಲಿ ಸನ್ಮಾನಿಸಲಾಯಿತು, ಇವರು ಗುರುಂಪು ಮಹಮ್ಮದ್ ಹಾಗೂ ಕೊಯನಾಡು ಮೈಮುನಾ ದಂಪತಿಗಳ ಪುತ್ರರಾಗಿದ್ದಾರೆ
ವೈದ್ಯ ವೃತ್ತಿ ಪವಿತ್ರವಾದ ಕಾಯಕ ತನ್ನ ಸೇವಾವಧಿಯಲ್ಲಿ ಸಾವಿರಾರು ಜನರಿಗೆ ಆರೋಗ್ಯ ದಾನ ನೀಡುವ ಪುಣ್ಯ ಕಾರ್ಯ ಇದರಿಂದ ಪೋಷಕರಿಗೆ ತಾನು ಕಲಿತ ಶಾಲೆಗೆ, ಅದ್ಯಾಪಕರುಗಳಿಗೆ ಸಂತೃಪ್ತಿ ಲಭಿಸುತ್ತದೆ ಎಂದು ಸನ್ಮಾನಿಸಿದ ಸುಳ್ಯ ಅಲ್ಪ ಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ಹೇಳಿದರು

ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು ವೇದಿಕೆ ಯಲ್ಲಿ ಸಂಚಾಲಕ ಕೆ. ಎಂ. ಮುಸ್ತಫ,ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ,ಪದಾಧಿಕಾರಿಗಳಾದ ಕೆ. ಎಸ್. ಉಮ್ಮರ್, ಶಾಫಿ ಕುತ್ತಾಮೊಟ್ಟೆ,ಸಹಕಾರಿ ಸಂಘದ ನಿರ್ದೇಶಕ ಜಾರ್ಜ್ ಡಿ ‘ಸೋಜಾ ಉಪಸ್ಥಿತರಿದ್ದರು ಶಾಲಾ ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಣ ಪ್ರಸ್ತಾವನೆ ಗೈದರು.





m
