“ಯುವ ಪ್ರತಿಭೆಗಳನ್ನು ರೂಪಿಸುವಲ್ಲಿ SSF ಸಾಹಿತ್ಯೋತ್ಸವದ ಪಾತ್ರ ಶ್ಲಾಘನೀಯ: ರಕ್ಷಿತ್ ಶಿವರಾಂ”
ಸಬರಬೈಲ್ ಯೂನಿಟ್ ಚಾಂಪಿಯನ್, ಪುಂಜಾಲಕಟ್ಟೆ ಯೂನಿಟ್ ರನ್ನರಪ್
ವಿದ್ಯಾರ್ಥಿಗಳು ದಾರಿತಪ್ಪುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಅವರ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಟ್ಟು ಅವರನ್ನು ಧಾರ್ಮಿಕ ಪ್ರಜ್ಞೆಯೊಂದಿಗೆ ಬೆಳೆಸುವ, ಭವಿಷ್ಯದ ಸಮುದಾಯದ ನಾಯಕರನ್ನಾಗಿಸುವ ಹಾಗೂ ಇಸ್ಲಾಮಿನ ಸಾಂಸ್ಕೃತಿಕ ಕಲಾ ವೈಭವವನ್ನು ಉಳಿಸುವ ಸಲುವಾಗಿ ನೀರಿಕ್ಷೆಗಳ ನೀಲ ನಕ್ಷೆ ಎಂಬ ಧ್ಯೆಯವಾಕ್ಯದೊಂದಿಗೆ SSF ವರ್ಷಂಪ್ರತಿ ಸಾಹಿತ್ಯೋತ್ಸವವನ್ನು ಯೂನಿಟ್, ಸೆಕ್ಟರ್, ಡಿವಿಷನ್, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆಸಿಕೊಂಡು ಬರುತ್ತಿದೆ. ಭಾಷಣ, ಬರಹ ಮತ್ತು ಗಾಯನ ಸೇರಿದಂತೆ 08 ವಿಭಾಗಗಳಾಗಿ 150 ಕ್ಕೂ ಹೆಚ್ಚಿನ ಸ್ಪರ್ಧೆಗಳ ಮೂಲಕ ಯುವ ಪ್ರತಿಭೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ, ಯೂನಿಟ್ ಸೆಕ್ಟರ್,ಡಿವಿಷನ್, ಜಿಲ್ಲೆ ರಾಜ್ಯ ಮತ್ತು ರಾಷ್ಟ್ರ ಸ್ತರದಲ್ಲಿ ಹಂತ-ಹಂತವಾಗಿ ನಡೆಯುವ ಈ ಸಾಹಿತ್ಯೋತ್ಸವಕ್ಕೆ SSF ಮಡಂತ್ಯಾರ್ ಸೆಕ್ಟರ್ ಕೂಡ ಅನಿಯಾಗಿದ್ದು, ಜುಲೈ 05 ರ ಆದಿತ್ಯವಾರ ಬದ್ರಿಯಾ ಜುಮ್ಮಾ ಮಸ್ಜಿದ್ ವಠಾರ ಅರೋದ್ದು ಸೆಕ್ಟರ್ ಸಾಹಿತ್ಯೋತ್ಸವ 2026 ಕ್ಕೆ ಸಾಕ್ಷಿಯಾಗಿದೆ. ಧ್ವಜಾರೋಹಣದ ಮೂಲಕ ಆರಂಭವಾದ ಕಾರ್ಯಕ್ರಮವನ್ನು ಸಾಹಿತ್ಯೋತ್ಸವ ನಿರ್ವಹಣಾ ಸಮಿತಿ ಛೇರ್ಮನ್ ಹಾಶಿಮ್ ಸಅದಿ ಅರೋದ್ದು ರವರ ಘನ ಅಧ್ಯಕ್ಷತೆಯಲ್ಲಿ, ಸ್ಥಳೀಯ ಖತೀಬರಾದ ರಾಶಿದ್ ಅಹ್ಸನಿ ಉಸ್ತಾದ್ ಉಧ್ಘಾಟಿಸಿದರು.

ಅತ್ಯಂತ ಅದ್ದೂರಿಯಾಗಿ ಜರುಗಿದ ಪ್ರತಿಭೆಗಳ ಉತ್ಸವದಲ್ಲಿ ಮಡಂತ್ಯಾರು ಸೆಕ್ಟರ್ ವ್ಯಾಪ್ತಿಯ 09 ಯೂನಿಟ್ ಗಳ ಸರಿಸುಮಾರು 300 ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು. ಐತಿಹಾಸಿಕವಾಗಿ ಸೆಕ್ಟರ್ ಅಧ್ಯಕ್ಷರಾದ ಮಹಮ್ಮದ್ ರಾಝಿಕ್ ಮಾಲಾಡಿ ಯವರ ಘನಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಾಹಿತ್ಯೋತ್ಸವದಂತಹ ವೇದಿಗೆ ಅತ್ಯಗತ್ಯ ಈ ನಿಟ್ಟಿನಲ್ಲಿ SSF ನ ಕಾರ್ಯ ಶ್ಲಾಘನೀಯ ಎಂದರು.

SSF ಕರ್ನಾಟಕ ರಾಜ್ಯ WEFI ಕಾರ್ಯದರ್ಶಿ ರಶೀದ್ ಮಡಂತ್ಯಾರ್ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉಧ್ಘಾಟಿಸಿದರು. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್, ಸ್ಥಳೀಯ ಜಮಾಅತ್ ಕಮಿಟಿ ಅಧ್ಯಕ್ಷರಾದ ರಝಾಕ್, ಕರ್ನಾಟಕ ಮುಸ್ಲಿಂ ಜಮಾಅತ್ ಸರ್ಕಲ್ ಪ್ರಧಾನ ಕಾರ್ಯದರ್ಶಿ ಸಾವುಲ್ ಹಮೀದ್ ಬರ್ನ, SYS ಮಡಂತ್ಯಾರ್ ಸರ್ಕಲ್ ಅಧ್ಯಕ್ಷರಾದ ನಝೀರ್ ಮದನಿ, SYS ಬೆಳ್ತಂಗಡಿ ಝೋನ್ ಉಪಾಧ್ಯಕ್ಷರು ಆಗಿರುವ ಅಯ್ಯುಬ್ ಮಹ್ಳರಿ ಸೇರಿದ ಇನ್ನಿತರ ಉಲಮಾ ಉಮರ ನೇತಾರರು ಭಾಗವಹಿಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಪ್ರತಿಷ್ಠಿತ ವಿದ್ಯಾ ಸಮುಚ್ಚಯಗಳಿಂದ ಸನದು ಸ್ವೀಕರಿಸಿದ ನೌಷದ್ ಸಖಾಫಿ ಅಲ್-ಮುಈನಿ ಅಲ್-ಫುರ್ಖಾನಿ, ಸಿರಾಜುದ್ದಿನ್ ಹಿಕಮಿ ಅಲ್-ಅಫ್ಲಲಿ, ಸುಹೈಲ್ ಖಾನ್ ಅಲ್ ಖುದುಸಿ ಉಸ್ತಾದರುಗಳಿಗೆ ಮತ್ತು SSF ಮಡಂತ್ಯಾರ್ ಸೆಕ್ಟರ್ ಸಾಹಿತ್ಯೋತ್ಸವ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರತಿ ವರ್ಷವೂ ಉದಾರ ಹೃದಯದಿಂದ ಆರ್ಥಿಕ ಸಹಾಯವನ್ನು ನೀಡಿ, ಶಿಕ್ಷಣ ಮತ್ತು ಪ್ರತಿಭೆಗಳ ಬೆಳವಣಿಗೆಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿರುವ ಚಾನ್ಸ್ ಚಿಕನ್ ಮಾಲಕರಾದ ರಝಾಕ್ ರವರಿಗೆ ಗೌರವ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. 14 ನೇ ಆವೃತ್ತಿಯ SSF ಮಡಂತ್ಯಾರ್ ಸೆಕ್ಟರ್ ಮಟ್ಟದ ಸಾಹಿತ್ಯೋತ್ಸವದಲ್ಲಿ ಸಬರಬೈಲ್ ಯೂನಿಟ್ ಚಾಂಪಿಯನ್ ಆಗಿ ಮೂಡಿಬಂದರೆ ಪುಂಜಾಲಕಟ್ಟೆ ಯೂನಿಟ್ ರನ್ನರಪ್ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಜೊತೆಗೆ ವೈಯುಕ್ತಿಕವಾಗಿ ಸವಾದ್ ಅರೋದ್ದು ಸ್ಟೇಜ್ ಸ್ಪರ್ಧೆಗಳಲ್ಲಿ ಹೆಚ್ಚಿನ ಅಂಕ ಗಳಿಸುವ ಮೂಲಕ ಸ್ಟಾರ್ ಆಫ್ ದಿ ಫೆಸ್ಟ್ ಮತ್ತು ಆಸೀಫ್ ಅರೋದ್ದು ಸ್ಟೇಜೆತರ ಸ್ಪರ್ಧೆಗಳಲ್ಲಿ ಹೆಚ್ಚಿನ ಅಂಕ ಗಳಿಸಿಕೊಳ್ಳುವ ಮೂಲಕ ಪೆನ್ ಆಫ್ ದಿ ಫೆಸ್ಟ್ ಪ್ರಶಸ್ತಿಗೆ ಭಾಜನರಾದರು.





m
