Featured, ಅಂಕಣ, ಸ್ಥಳೀಯ

ಸುಳ್ಯದಲ್ಲಿ ಸಾಂತ್ವನ ಕೇಂದ್ರ ವನ್ನು ಲೋಕಾರ್ಪಣೆ ಮಾಡಿದ SჄS

“ಸಾಂತ್ವನ ಕೇಂದ್ರವು ಸಮಾಜದ ನೋವಿಗೆ ಸ್ಪಂದಿಸುವ ಸೇವೆಯ ಮಾದರಿ” — ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್

ಎಸ್ ವೈ ಎಸ್ ಸುಳ್ಯ ಝೋನ್ ವತಿಯಿಂದ ಸುಳ್ಯದ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ಸಾಂತ್ವನ ಕೇಂದ್ರವೊಂದನ್ನು ದಿನಾಂಕ 19-07-2026 ರಂದು ಉಧ್ಘಾಟಿಸಿ ಬಡರೋಗಿಗಳಿಗೆ ಅನುಕೂಲವಾಗುವಂತೆ ವಿವಿಧ ಪರಿಕರಗಳನ್ನು ಸಂಗ್ರಹಿಸಿ ಗಣ್ಯಾತಿಥಿಗಳ ಸಮಕ್ಷಮದಲ್ಲಿ ಲೋಕಾರ್ಪಣೆ ಮಾಡಲಾಯಿತು. ರೋಗಿಗಳಿಗೆ ಮತ್ತು ಅಶರಣರಿಗೆ ಅತ್ಯಗತ್ಯವಾಗಿ ಬೇಕಾಗುವ ಹಲವಾರು ಸೇವೆಗಳನ್ನು ಎಸ್ ವೈ ಎಸ್ ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬಂದಿದ್ದರೂ ಅದೊಂದು ವ್ಯವಸ್ಥಾಪಿತವಾಗಿ ಒಂದು ಕೇಂದ್ರದ ಮೂಲಕ ಜನರಿಗೆ ಸುಲಭವಾಗಿ ತಲುಪುವಂತೆ ಸಜ್ಜೀಕರಿಸಬೇಕೆಂಬ ಕನಸು ಸಾಕಾರಗೊಂಡಿದೆ. ಪುತ್ತೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಮೆಡ್ ಲ್ಯಾಂಡ್ ಆಸ್ಪತ್ರೆಯ ಚಯರ್ಮೇನ್ ಅಶ್ರಫ್ ಕಮ್ಮಾಡಿ ರವರು ರಿಬ್ಬನ್ ಕಟ್ಟಿಂಗ್ ಮೂಲಕ ಸಾಂತ್ವನ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿದರು.

      ಎಸ್ ವೈ ಎಸ್ ಸುಳ್ಯ ಝೋನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಕರ್ನಾಟಕ ರಾಜ್ಯ ಸಾಂತ್ವನ ಉಪಾಧ್ಯಕ್ಷರಾದ ಇಬ್ರಾಹಿಂ ಖಲೀಲ್ ಮಾಲಿಕಿ ಯವರು ಉಧ್ಘಾಟಿಸಿ ಸಾಂತ್ವನದ ಬಗ್ಗೆ ವಿವರಿಸಿದರು. ಎಸ್ ವೈ ಎಸ್ ಮಾಜಿ ರಾಜ್ಯಾಧ್ಯಕ್ಷರೂ ಪ್ರಸ್ತುತ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಗಳೂ ಆಗಿರುವ ಡಾ|ಅಬ್ದುರ್ರಶೀದ್ ಝೈನಿ ಕಾಮಿಲ್ ರವರು ಸಾಂತ್ವನ ಕೇಂದ್ರದ ಬಗ್ಗೆ ಮತ್ತು ಸೇವೆಗಳ ಬಗ್ಗೆ ಮನದಟ್ಟಾಗುವಂತೆ ಆಕರ್ಷಣೀಯ ಶೈಲಿಯಲ್ಲಿ ವಿಷಯ ಮಂಡಿಸಿದರು. ನಂತರ ಅಗ್ನಿಶಾಮಕ ದಳದ ಅಧಿಕಾರಿಗಳಾದ ಕಿರಣ್ ಸರ್, ಸೂಡ ಅಧ್ಯಕ್ಷರಾದ ಮುಸ್ತಫ ಕೆ.ಎಂ.ಸುಳ್ಯ, ರೆಡ್ ಕ್ರಾಸ್ ಸಂಸ್ಥೆಯ ನಾಯಕರಾದ ಸುಧಾಕರ ರೈ, ಸುಳ್ಯ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಸಂಚಾಲಕರೂ ಎಸ್ ವೈ ಎಸ್ ರಾಜ್ಯ ಮೆಡಿಕಲ್ ಇನ್ಚಾರ್ಜ್ ಕೂಡ ಆಗಿರುವ ಇಬ್ರಾಹಿಂ ಕರೀಂ ಕದ್ಕಾರ್ ಸಹಿತವಿರುವ ಗಣ್ಯಾತಿಥಿಗಳು ಮಾತನಾಡಿ ಶುಭನುಡಿಗಳನ್ನು ನೀಡಿದರು.

     ಅಶ್ರಫ್ ಹಾಜಿ ಕಮ್ಮಾಡಿ ಯವರ ವತಿಯಿಂದ ಓಕ್ಸಿಜನ್ ಕಿಟ್ಟನ್ನು ಸಾಂತ್ವನ ಕೇಂದ್ರಕ್ಕೆ ಹಸ್ತಾಂತರಿಸಿದರು. ಸುಧಾಕರ್ ರೈ ಯವರು ಒಂದು ಓಕ್ಸಿಜನ್ ಕಿಟ್ ಮತ್ತು ಉತ್ತಮ ಗುಣಮಟ್ಟದ ಎರಡು ಟರ್ಪಲ್ ನೀಡುವುದಾಗಿ ಭರವಸೆ ನೀಡಿದರು. ಅದರಂತೆ ಈ ಸಾಂತ್ವನ ಕೇಂದ್ರದ ವಿವಿಧ ಸಲಕರಣೆಗಳನ್ನು ನೀಡಿದ ಫೈಝಲ್ ಕಟ್ಟೆಕಾರ್ ನೇತೃತ್ವದ ಕೆಎ 21 ವಾಟ್ಸಪ್ ಗ್ರೂಪ್, ಬಿ.ಎಂ.ಎ. ಗ್ರೂಪ್, ಎಸ್ ಜೆ ಎಂ ಸುಳ್ಯ ರೇಂಜ್, ಎಸ್ ವೈ ಎಸ್ ಗಾಂಧಿನಗರ, ಎಲಿಮಲೆ, ಸುಣ್ಣಮೂಲೆ, ಗೂನಡ್ಕ, ಕಲ್ಲುಗುಂಡಿ ಸಹಿತವಿರುವ ಯೂನಿಟ್ ಗಳು, ವಸ್ತುಗಳಿಗಾಗಿ ಮತ್ತು ಇತರ ರೀತಿಯಲ್ಲಿ ವ್ಯಕ್ತಿಗತವಾಗಿ ಸಹಕರಿಸಿದ ಹಾಜಿ ಅಬ್ದುಲ್ಲತೀಫ್ ಹರ್ಲಡ್ಕ, ಇಬ್ರಾಹಿಂ ಹಾಜಿ ಕುಂಬಕ್ಕೋಡು, ಹನೀಫ್ ಮದನಿ ಮಂಡೆಕೋಲು ಹಾಗೂ ಇತರ ಎಲ್ಲಾ ದಾನಿಗಳನ್ನು ಈ ಸಂಧರ್ಭದಲ್ಲಿ ಸ್ಮರಿಸಲಾಯಿತು.

    ಅತಿಥಿಗಳಾಗಿ ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಜಿಲ್ಲಾ ಸಾಂತ್ವನ ಉಪಾಧ್ಯಕ್ಷ ಉಸ್ಮಾನ್ ಸೋಕಿಲ, ಕುಂಬ್ರ ಮರ್ಕಝ್ ಸಂಸ್ಥೆಯ ನಾಯಕರಾದ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ಅಡ್ವಕೇಟ್ ಮೂಸ ಕುಂಞಿ ಪೈಂಬಚ್ಚಾಲು, ಶಾಫಿ ಕುತ್ತಮೊಟ್ಟೆ, ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಪತ್ರಕರ್ತರಾದ ಹಸೈನಾರ್ ಜಯನಗರ, ಉಮ್ಮರ್ ಕೆ.ಎಸ್, ಹಿರಿಯ ವಕೀಲರಾದ ವೆಂಕಪ್ಪಗೌಡ, ಮೀರಾಝ್ ಅರಂಬೂರು, ಗಾಂಧಿನಗರ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್, ಗಾಂಧಿನಗರ ಮುದರ್ರಿಸರಾದ ಮುಬಶ್ಶಿರ್ ಅಹ್ಸನಿ, ಕರ್ನಾಟಕ ಮುಸ್ಲಿಂ ಜಮಾಅತ್ ಝೋನ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಎಸ್.ಎಂ.ಎ ಅಧ್ಯಕ್ಷ ಹಮೀದ್ ಸುಣ್ಣಮೂಲೆ, ಎಸ್.ಜೆ.ಎಂ ಅಧ್ಯಕ್ಷ ಹುಸೈನಾರ್ ಮದನಿ ಕುಂಜಿಲ, ಎಸ್ಸೆಸ್ಸಫ್ ಡಿವಿಷನ್ ಅಧ್ಯಕ್ಷ ರಿಯಾನ್ ಸಅದಿ, ಸಂಘಟನಾ ನಾಯಕರಾದ ಅಬ್ದುರ್ರಹ್ಮಾನ್ ಮೊಗರ್ಪಣೆ ಮುಂತಾದವರು ಭಾಗವಹಿಸಿದರು. 

   ಕಾರ್ಯಕ್ರಮದ ಭಾಗವಾಗಿ ನಡೆದ ಮೌಲಿದ್ ಮಜ್ಲಿಸ್ ಸಯ್ಯಿದ್ ಕುಂಞಿಕೋಯ ಸಅದಿ ತಂಙಳ್ ಮತ್ತು ಸಯ್ಯಿದ್ ತ್ವಾಹಿರ್ ಸಅದಿ ತಂಙಳ್ ರವರು ನೇತೃತ್ವ ವಹಿಸಿದರು. ಝೋನ್ ಸಾಂತ್ವನ ಉಪಾಧ್ಯಕ್ಷ ಸಿದ್ದೀಖ್ ಗೂನಡ್ಕ ಸ್ವಾಗತಿಸಿ, ಝೋನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಬಿ.ಎ. ವಂದಿಸಿದರು.

ವರದಿ:- ಎ ಎಂ ಫೈಝಲ್ ಝುಹ್ರಿ ಅಲ್ ಫುರ್ಖಾನಿ

m

Related Posts