ವಿವಿಧ ಬ್ರಾಂಡ್ಗಳ ಶೂ ಮತ್ತು ಚಪ್ಪಲಿಗಳು ಒಂದೇ ಸೂರಿನಡಿ ಲಭ್ಯ
ಸುಳ್ಯ, ಜು. 22: ಸುಳ್ಯ ನಗರದಲ್ಲಿ ಬ್ರಾಂಡೆಡ್ ಶೂ ಹಾಗೂ ಚಪ್ಪಲಿಗಳ ನೂತನ ಮಳಿಗೆ ‘ಶೂ ಜೋನ್’ ಶುಭಾರಂಭಗೊಂಡಿತು. ಸಯ್ಯದ್ ಕುಂಜಿಕೋಯ ತಂಙಳ್ ಅವರು ಮಳಿಗೆಯನ್ನು ಉದ್ಘಾಟಿಸಿ ಸಂಸ್ಥೆಯ ಯಶಸ್ಸಿಗೆ ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸುಳ್ಯ ವರ್ತಕರ ಸಂಘದ ಗೌರವಾಧ್ಯಕ್ಷರು, “ಸುಳ್ಯದಲ್ಲಿ ಬ್ರಾಂಡೆಡ್ ಪಾದರಕ್ಷೆಗಳ ವಿಶೇಷ ಮಳಿಗೆಯ ಅಗತ್ಯ ಬಹಳ ದಿನಗಳಿಂದ ಇತ್ತು. ಇದೀಗ ‘ಶೂ ಜೋನ್’ ಮೂಲಕ ವಿವಿಧ ಪ್ರಸಿದ್ಧ ಬ್ರಾಂಡ್ಗಳ ಗುಣಮಟ್ಟದ ಶೂ ಹಾಗೂ ಚಪ್ಪಲಿಗಳು ಒಂದೇ ಸೂರಿನಡಿ ಗ್ರಾಹಕರಿಗೆ ಲಭ್ಯವಾಗುತ್ತಿರುವುದು ಸಂತಸದ ಸಂಗತಿ. ಈ ಮಳಿಗೆ ಗ್ರಾಹಕರ ವಿಶ್ವಾಸ ಗಳಿಸಿ ಉತ್ತಮ ಸೇವೆ ನೀಡಲಿ” ಎಂದು ಶುಭ ಹಾರೈಸಿದರು.
ನೂತನ ಮಳಿಗೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿವಿಧ ವಿನ್ಯಾಸದ ಮತ್ತು ಗುಣಮಟ್ಟದ ಬ್ರಾಂಡೆಡ್ ಶೂ, ಚಪ್ಪಲಿ ಹಾಗೂ ಪಾದರಕ್ಷೆಗಳ ವಿಶಾಲ ಸಂಗ್ರಹವನ್ನು ಗ್ರಾಹಕರಿಗೆ ಒದಗಿಸಲಾಗಿದೆ ಎಂದು ಸಂಸ್ಥೆಯ ವತಿಯಿಂದ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹೀದ್, ಎಂ.ಬಿ. ಫೌಂಡೇಶನ್ನ ಎಂ.ಬಿ. ಸದಾಶಿವ, ಸುದ್ದಿ ರಿಪೋರ್ಟರ್ ಹಸೈನಾರ್, ಸಾಕಾರ ನ್ಯೂಸ್ ಚೀಫ್ ಸಾಹುಕಾರ್ ಅಚ್ಚು, ಜೆಸಿಐ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೊಂಟಡ್ಕ, ಕೆಪಿಸಿಸಿ ಸಂಯೋಜಕ ಸಂಶುದ್ದೀನ್ ಎಸ್.ಎ.ಎಸ್., ಸುಳ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಹಮೀದ್ ಜನತಾ, ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಅದ್ವೈತ್ ಹ್ಯುಂಡೈ ಸುಳ್ಯದ ಆರ್ಎಸ್ಒ ಮ್ಯಾನೇಜರ್ ಸುಮನಾ ಬೆಳ್ಳಾರ್ಕರ್, ಎಸ್ಡಿಎಂಸಿ ಅಧ್ಯಕ್ಷ ನಜೀರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು.
ಉದ್ಘಾಟನಾ ಸಮಾರಂಭದಲ್ಲಿ ವ್ಯಾಪಾರಿಗಳು, ಸಾರ್ವಜನಿಕರು ಹಾಗೂ ಆಹ್ವಾನಿತ ಅತಿಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೂತನ ಮಳಿಗೆಯ ಕಾರ್ಯಾರಂಭಕ್ಕೆ ಶುಭಾಶಯ ಸಲ್ಲಿಸಿದರು.





m
