Featured, ಅಂಕಣ, ಸ್ಥಳೀಯ

ಸಮಸ್ತ ಶತಮಾನೋತ್ಸವದ ಸಂಭ್ರಮಕ್ಕೆ ಸುಳ್ಯ ಸಜ್ಜು: ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಪ್ರಚಾರ ಸಮ್ಮೇಳನದ ಪೋಸ್ಟರ್ ಬಿಡುಗಡೆ

ಸುಳ್ಯ: ಸಮಸ್ತ ಶತಮಾನೋತ್ಸವದ ಪ್ರಯುಕ್ತ ಡಿಸೆಂಬರ್ 25ರಂದು ಸುಳ್ಯದಲ್ಲಿ ನಡೆಯಲಿರುವ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಪ್ರಚಾರ ಸಮ್ಮೇಳನದ ಪೋಸ್ಟರ್ ಅನ್ನು ಸುಳ್ಯದ ಸುನ್ನಿ ಸಂಘಟನೆಗಳ ಪ್ರಮುಖ ನಾಯಕರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸುನ್ನಿ ಜಂಇಯ್ಯತ್ತುಲ್ ಉಲಮಾ ಸುಳ್ಯ ಝೋನ್ ಅಧ್ಯಕ್ಷರಾದ ಸಯ್ಯದ್ ಕುಂಞಿ ಕೋಯ ತಂಙಳ್, ಸಮಸ್ತ ಸೆಂಟಿನರಿ ಸುಳ್ಯ ಝೋನ್ ಈ.ಸಿ. ಚೆಯರ್ಮ್ಯಾನ್ ಹಸನ್ ಸಖಾಫಿ ಬೆಳ್ಳಾರೆ, ಸುಳ್ಯ ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಸಮಸ್ತ ಸೆಂಟಿನರಿ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಜನರಲ್ ಕನ್ವೀನರ್ ಅಬ್ದುಲ್ ಹಮೀದ್ ಸುಣ್ಣಮೂಲೆ, SMA ಈಸ್ಟ್ ಜಿಲ್ಲಾ ಕೋಶಾಧಿಕಾರಿ ಹಾಜಿ ಅಬ್ದುಲ್ ಲತೀಫ್ ಹರ್ಲಡ್ಕ ಹಾಗೂ SMA ಬೆಳ್ಳಾರೆ ಝೋನಲ್ ಅಧ್ಯಕ್ಷ ಇಬ್ರಾಹಿಂ ಬಿಡು ಉಪಸ್ಥಿತರಿದ್ದರು.

ಇವರೊಂದಿಗೆ ಹಲವಾರು ಸಂಘಟನಾ ಕಾರ್ಯಕರ್ತರು, ಉಲಮಾ ಹಾಗೂ ಉಮರಾ ನಾಯಕರು ಉಪಸ್ಥಿತರಿದ್ದರು.

Related Posts