Featured, ಇತರೆ

ರೋಹಿತ್, ಕೊಹ್ಲಿ ಸ್ಥಾನವನ್ನು ತುಂಬುವ ಶಕ್ತಿ ಭಾರತಕ್ಕಿದೆ – ಡರೆನ್ ಲೆಹ್ಮನ್

ಸಿಡ್ನಿ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ನಿರ್ಧಾರ ಕೈಗೊಂಡಿದ್ದರೂ, ಅವರ ಕೊರತೆಯನ್ನು ತುಂಬುವ ಶಕ್ತಿ ಮತ್ತು ಸಾಮರ್ಥ್ಯ ಭಾರತ ಕ್ರಿಕೆಟ್ ತಂಡಕ್ಕಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡರೆನ್ ಲೆಹ್ಮನ್ ಹೇಳಿದ್ದಾರೆ.

“ನಿವೃತ್ತಿಯಾಗಬೇಕೆ ಎಂದು ನಿರ್ಧರಿಸುವುದು ಅವರಿಗೆ ಬಿಟ್ಟದ್ದು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರರು. ಯಾವುದೇ ಪರ್ಯಾಯ ಅಭಿಪ್ರಾಯವಿಲ್ಲ. ಭಾರತ ತಂಡದಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ನೋಡುತ್ತಿದ್ದೇವೆ. ಹಾಗಾಗಿ ಅವರು ನಿವೃತ್ತಿಯಾದರೂ ಆ ಸ್ಥಾನವನ್ನು ತುಂಬುವ ಶಕ್ತಿ ಭಾರತಕ್ಕಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಪ್ರತಿಭಾವಂತ ಯುವ ಆಟಗಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಜೈಸ್ವಾಲ್ ಒಬ್ಬ ಸೂಪರ್ ಸ್ಟಾರ್. ನಾನು ನೋಡಿದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅವರು ಮತ್ತು ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಮುಂದಿನ ಪೀಳಿಗೆಯ ಆಟಗಾರರು. ಎಲ್ಲರೂ ಅದನ್ನು ಖಂಡಿತವಾಗಿ ಒಪ್ಪುತ್ತಾರೆ. ಜೈಸ್ವಾಲ್ ಮೆಲ್ಬೋರ್ನ್‌ನಲ್ಲಿ ಉತ್ತಮವಾಗಿ ಆಡಿದ್ದರು. ಪರ್ತ್‌ನಲ್ಲಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ರೋಹಿತ್ ನಿವೃತ್ತಿಯ ನಂತರ ಬುಮ್ರಾ ತಂಡದ ನಾಯಕರಾಗಿದ್ದಾರೆ. ನಾನು ನೋಡಿದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ಅವರು ಈ ಸರಣಿಯಲ್ಲಿ ಉತ್ತಮ ಪ್ರಭಾವ ಬೀರುತ್ತಿದ್ದಾರೆ.

ಆಸ್ಟ್ರೇಲಿಯಾ ತಂಡದಲ್ಲಿ ಹಿರಿಯ ಆಟಗಾರರೂ ಇದ್ದಾರೆ. ಕಮ್ಮಿನ್ಸ್, ಸ್ಟಾರ್ಕ್ ಮುಂದಿನ ಆಶಸ್ ಸರಣಿಯವರೆಗೂ ಆಡಬಹುದು. ಅಂತರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ಅವರ ಉಳಿವಿನ ಬಗ್ಗೆ ಸಮಯವೇ ಹೇಳುತ್ತದೆ. ಅವರು ನಿವೃತ್ತಿಯಾದರೂ ತಂಡದ ವೇಗದ ಚೆಲುವು ಉತ್ತಮವಾಗಿರುತ್ತದೆ. ಶ್ರೇಷ್ಠ ಆಟಗಾರರು ನಿರ್ಗಮಿಸಿದಾಗ ತಂಡದಲ್ಲಿ ಕೆಲವು ಬದಲಾವಣೆಗಳಾಗಲಿವೆ ಎಂದರು.

m

Related Posts