Featured, ಇತರೆ, ಸ್ಥಳೀಯ

ಬಾಯ್ತೆರೆದ ಮೋರಿ ಯಾರನ್ನ ನುಂಗಲು ಕಾಯುತ್ತಿದೆ???? ನಗರಾಡಳಿತ ಬಾಯಿ ಮುಚ್ಚಿ ಕುಳಿತಿದೆ ಮೋರಿ ಬಾಯ್ತೆರೆದಿದೆ!!

ಸುಳ್ಯ ನಗರದ ಸಮಸ್ಯೆ ಎಷ್ಟು ಹೇಳಿದರು ಕೇಳಿದರು ಡೋಂಟ್ ಕ್ಯಾರ್..!? ಈಗಾ ಇಲ್ಲಿ ಅಪಾಯಕಾರಿ ಮೋರಿಯ ಬಗ್ಗೆ ಹೇಳಲೇಬೇಕು ಆದರೆ !!! ಇದಕ್ಕೆ ಸಂಬಂಧ ಪಟ್ಟವರು ಹೇಳಿದ ನಂತರ ಸಮಸ್ಯೆಗೆ ಪರಿಹಾರ ಮಾಡುತ್ತಾರೋ ಇಲ್ಲವೋ ಅದು ಗೊತ್ತಿಲ್ಲ !!? ಸಮಸ್ಯೆಗೆ ಪರಿಹಾರ ಶ್ರೀಘ್ರ ಆಗದಿದ್ದರೇ..!!.ಖಾಸಗಿ ಬಸ್ ನಿಲ್ದಾಣ ಬಳಿ ಓಡಾಡುವ ಜನರ ಕೈಕಾಲು ಆ ಅಪಾಯಕಾರಿ ಮೋರಿಯ ಗುಂಡಿಗೆ ಬಿದ್ದು ಪ್ಲಾಸ್ಟರ್ ಹಾಕುವ ಸ್ಥಿತಿ ಅನಿವಾರ್ಯವಾಗಿ ಬರಬಹುದು, ಹೌದು ಸುಳ್ಯದ ಖಾಸಗಿ ಬಸ್ ನಿಲ್ದಾಣ ಬಳಿ ಸ್ಲಾಭ್ ಬಿಟ್ಟ ಮೋರಿ ಬಾಯ್ತೆರೆದಿದೆ ಅರಂತೋಡಿನ ಸಾಮಾಜಿಕ ಕಾರ್ಯಕರ್ತ ಖಾದರ್ ಮೊಂಟೆಗಾರ್ ಇವರು ಇ-ವಾರ್ತೆ ಗೆ ಅಪಾಯಕಾರಿ ಬಾಯ್ತೆರೆದ ಮೋರಿಯ ಗುಂಡಿಯ ಫೋಟೊ ತೆಗೆದು ಕಳುಹಿಸಿದ್ದಾರೆ. ಆ ಗುಂಡಿಯಲ್ಲಿ ತ್ಯಾಜ್ಯ ತುಂಬಿದ ಮಲಿನ ನೀರು ಕಡು ಕಪ್ಪು ಬಣ್ಣಕ್ಕೆ ತಿರುಗಿ ದುರ್ವಾಸನೆಯಿಂದ ಕೂಡಿದೆ ಮತ್ತೊಮ್ಮೆ ಕೊರೊನಾ ಕಾಲದಲ್ಲಿ ಮುಖಕ್ಕೆ ಹಾಕ್ಕಿದ ಮಾಸ್ಕ್ ಆ ಪರಿಸರದಲ್ಲಿ ಅನಿವಾರ್ಯ ಅನ್ನುವಂತಿದೆ.

ಆ ಗುಂಡಿಯಿಂದ ಬರುವ ದುರ್ವಾಸನೆ. ಆ ಪರಿಸರದಲ್ಲಿ ಹರಡಿದೆ ಅಂತೇ! ಈ ವರದಿ ಮಾಡುವ ಸ್ವಲ್ಪ ಮೊದಲು ಒಬ್ಬ ಬಾಲಕ ಆ ಗುಂಡಿಗೆ ಬಿದ್ದು ಅವನ ಆಂಗಿ ಚಡ್ಡಿ ಮಲಿನ ನೀರಿನಿಂದ ಕಪ್ಪು ಬಣ್ಣಕ್ಕೆ ತಿರುಗಿದೆ ! ಪಾಪ ಆ ಬಾಲಕನಿಗೆ ತರುಚಿದ ಗಾಯಗಳು ಆಗಿದೆ ಎಂದು ಪ್ರತ್ಯಕ್ಷ ಸಾಕ್ಷಿಗಳು ತಿಳಿಸಿದ್ದಾರೆ. ಆ ಬಾಯ್ತೆರೆದ ಮೋರಿಯ ಗುಂಡಿ ಅಪಾಯಕಾರಿ ಆಗಿದ್ದು ಅದಕ್ಕೆ ಶ್ರೀಘ್ರದಲ್ಲಿ ಸ್ಲಾಬ್ ಹಾಕಿ ಮುಚ್ಚುವ ಕಾರ್ಯ ಆಗಬೇಕಿದೆ.

m

Related Posts