ಫರಂಗಿಪೇಟೆ, ನಾಗರಿಕರಿಗೆ ಸೂಕ್ತ ಮೂಲ ಸೌಕರ್ಯ ಒದಗಿಸುವುದರಲ್ಲಿ ನಿರ್ಲಕ್ಷ ವಹಿಸುತ್ತಿರುವ ಪುದು ಗ್ರಾಮ ಪಂಚಾಯತ್, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ಎಸ್ಡಿಪಿಐ ನಿಯೋಗ ಪ್ರತಿಭಟನೆಯ ಎಚ್ಚರಿಕೆ
👉 ಸಾರ್ವಜನಿಕ ಶೌಚಾಲಯ ನಿರ್ವಹಣೆ, ಸರಕಾರಿ ಬಾವಿ ದುರಸ್ಥಿ, ರಸ್ತೆ ವಿಭಜಕದ ನಡುವೆ ಅಪಾಯಕಾರಿಯಾಗಿ ಬಿದ್ದಿರುವ ಕಬ್ಬಿಣದ ರಾಡ್ ತೆರವುಗೊಳಿಸಲು ನಿಯೋಗ ಆಗ್ರಹ
ಫರಂಗಿಪೇಟೆ, ಜ.10: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಫರಂಗಿಪೇಟೆಯಲ್ಲಿ ಜನರ ತೆರಿಗೆ ಹಣದಿಂದ ಕಟ್ಟಿದ ಸಾರ್ವಜನಿಕ ಶೌಚಾಲಯ ಕಳೆದ ಎರಡು ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ಪಾಲುಬಿದ್ದಿರುವ ಬಗ್ಗೆ ಪುದು ಪಂಚಾಯತ್ ಆಡಳಿತಕ್ಕೆ ಎಸ್ಡಿಪಿಐ ಪುದು ಗ್ರಾಮ ಸಮಿತಿ ನಿಯೋಗ ಈ ಹಿಂದೆ ಮನವಿ ಸಲ್ಲಿಸಿ ನಾಗರಿಕರಿಗೆ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದು ಈ ಬಗ್ಗೆ ಪಂಚಾಯತ್ ಆಡಳಿತ ಯಾವುದೇ ಕ್ರಮ ವಹಿಸದೆ ನಿರ್ಲಕ್ಷ ವಹಿಸಿದ್ದನ್ನು ಖಂಡಿಸಿ ಮತ್ತೊಮ್ಮೆ ಶೌಚಾಲಯವನ್ನು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮಾಡಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಎಸ್ಡಿಪಿಐ ಪುದು ಗ್ರಾಮ ಸಮಿತಿ ನಿಯೋಗ ಮನವಿ ಮತ್ತು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿತು
ಮಾತ್ರವಲ್ಲದೆ ರಾಧಾ ನರ್ಸಿಂಗ್ ಹೋಮ್ ಸಮೀಪವಿರುವ ಸಾರ್ವಜನಿಕ ಬಾವಿ ಪಾಲು ಬಿದ್ದಿರುವುದನ್ನು ಹಾಗೂ ಫರಂಗಿಪೇಟೆಯ ಹೆದ್ದಾರಿ ಮದ್ಯೆ ಕೆಲವು ದಿನಗಳ ಹಿಂದೆ ವಾಹನ ಅಪಘಾತದಿಂದ ರಸ್ತೆ ವಿಭಜಕದ ಮೇಲೆ ಅಳವಡಿಸಿದ ಕಬ್ಬಿಣದ ರಾಡ್ ತುಂಡಾಗಿ ವಾಹನ ಸಂಚಾರಕ್ಕೆ ಮತ್ತು ನಾಗರಿಕರಿಗೆ ಅಪಾಯಕಾರಿಯಾಗಿದ್ದು ಇದನ್ನು ತೆರವುಗೊಳಿಸಲು ನಿಯೋಗ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಆಗ್ರಹಿಸಿತು.
ಎಸ್ಡಿಪಿಐ ಪುದು ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಅಮೆಮ್ಮಾರ್, ಉಪಾಧ್ಯಕ್ಷ ಸಿದ್ದೀಕ್ ಫರಂಗಿಪೇಟೆ, ಗ್ರಾಮ ಪಂಚಾಯತ್ ಸದಸ್ಯ ನಝೀರ್ ಕುಂಜತ್ಕಳ, ಫರಂಗಿಪೇಟೆ ಬ್ಲಾಕ್ ಸಮಿತಿ ಸದಸ್ಯ ಮನ್ಸೂರ್ ಅಮೆಮ್ಮಾರ್, ಕುಂಪನಮಜಲ್ ಬೂತ್ ಅಧ್ಯಕ್ಷ ಲತೀಫ್, ಉಪಾಧ್ಯಕ್ಷ ತಪ್ಸೀರ್ ಕುಂಪನಮಜಲ್, ಶೆರೀಫ್ ಕುಂಪನಮಜಲ್ ಮತ್ತಿತರರು ನಿಯೋಗದಲ್ಲಿದ್ದರು.





m

