ಸ್ಮರಣೀಯ ಕಾರ್ಯಕ್ರಮದಲ್ಲಿ ಭಾವುಕವಾಯಿತು ಭಾವನೆಗಳು “ಸವಿ ಸವಿ ನೆನಪು ಸಾವಿರ ನೆನಪು„

ಸುಳ್ಯ : ಅಂದಿನ ಸರಕಾರಿ ಪ್ರೌಢಶಾಲೆ ಇಂದಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಸುಮಾರು ಅಂದಾಜು 80 ವರ್ಷದ ಇತಿಹಾಸ ಇದೇ..ಎಂಬುದು ಅಂಬೋಣ ಈ ಶಾಲೆಯಲ್ಲಿ ಮೊತ್ತಮೊದಲ ಬಾರಿಗೆ ವಿನೂತನ ಕಾರ್ಯಕ್ರಮ ಜನವರಿ 26 ರಂದು (ಗಾಂಧಿನಗರ ಪಬ್ಲಿಕ್ ಸ್ಕೂಲ್ ನಲ್ಲಿ) ಜರುಗಿದೆ ಸುಮಾರು 21 ವರ್ಷಗಳ ಬಳಿಕ ಅಂದಿನ ಏಳನೇ ತರಗತಿಯಲ್ಲಿ ಕಲಿತ ಶಾಲಾ ಸಹಪಾಠಿಗಳು ಇದೇ ಶಾಲೆಯಲ್ಲಿ ಒಂದೂಗೂಡಿದ್ದಾರೆ ಆಗ 48 ವಿಧ್ಯಾರ್ಥಿಗಳು ಇದ್ದ ಬ್ಯಾಚ್ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಬರೋಬ್ಬರಿ 40 ಶಾಲಾ ಸಹಪಾಠಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದದೂ ಗಮನಾರ್ಹ , ಆಯೋಜಕ ಮಶೂದ್ (ಮುಚ್ಚು) ಗಾಂಧಿನಗರ ಹೇಳುವ ಪ್ರಕಾರ ನಮ್ಮ ಶಾಲಾ ಸಹಪಾಠಿಗಳ ಪೈಕಿ 7 ಜನರಿಗೆ ವಿವಿಧ ಅನಿವಾರ್ಯ ಕಾರಣಗಳಿಂದಾಗಿ ಬರಲು ಅಸಾಧ್ಯವಾಗಿದೆ ಒಬ್ಬ ಸಹಪಾಠಿ ದೈವಾಧೀನರಾಗಿದ್ದಾರೆ,

ಇಲ್ಲಿ ಕೇವಲ ವಿಧ್ಯಾರ್ಥಿಗಳು ಮಾತ್ರ ಸೇರಿದ್ದಲ್ಲ ಆಗಿನ ಸಮಯದಲ್ಲಿ ಕಲಿಸಿದ ತಮ್ಮ ಪ್ರೀತಿಯ ಶಿಕ್ಷಕರ ನ್ನು ಕಾರ್ಯಕ್ರಮಕ್ಕೆ ಗೌರವವಾಗಿ ಆಮಂತ್ರಿಸಿದರು ಏಳು ಮಂದಿ ಶಿಕ್ಷಕ -_ಶಿಕ್ಷಕಿ ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾ್ದು ಹೌದು. ಸವಿ ಸವಿ ನೆನಪು ಸಾವಿರ ನೆನಪು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ತಾನು ಕಳೆದ, ಕಲಿತ ಶಾಲಾ ದಿನಗಳ ಬಾಲ್ಯದ ನೆನಪುಗಳು ಅವಿಸ್ಮರಣೀಯ ಹಾಗೇ ಕೆಲವೊಂದು ನೆನಪುಗಳು ಮಾತ್ರ ನಮ್ಮಲ್ಲಿ ಹಚ್ಚ ಹಸಿರಾಗಿ ಉಳಿಯುತ್ತದೆ ಅದ್ರಲ್ಲೂ ಕೆಲವೊಂದು ಸಿಹಿ ನೆನಪುಗಳು ಆದ್ರೆ ಇನ್ನು ಕೆಲವು ಕಹಿ ಆಗಿರುತ್ತೆ. ಬಾಲ್ಯದ ಆ ಶಾಲಾ ದಿನಗಳ ಅದೆಷ್ಟು ಸುಂದರ ಸವಿನೆನಪುನಪುಗಳು ಅದೊಂದು…. ಸುಂದರವಾದ ತೋಟ. ನೆನೆದಷ್ಟು ಮುಗಿಯದ ಸವೆಯದ ಮಧುರವಾದ ಪಯಣ,ಕಾರಣವೇ ಇಲ್ಲದ ನಲಿವು,ಒಲವು ಚಿಕ್ಕ ಚಿಕ್ಕ ಕಾರಣಕ್ಕೂ ಸಂಭ್ರಮೀಸಿದ್ದೇ ಗೆಲುವು.ಅದೊಂದು ಮುಗ್ದತೆಯ ಚೆಲುವು…… ನಂತರ ನಮ್ಮ ಬಾಳ ಪಯಣದಲ್ಲಿ ಈ ಸುಂದರ ಮುಗ್ಧತೆಯ ನೆನಪಿನ ದೃಶ್ಯಗಳು ನಮ್ಮ ನಿತ್ಯ ಜೀವನದಲ್ಲಿ ವರ್ಣನೆಗೆ ನಿಲುಕದ ಪ್ರಚಲಿತಗಳು ಎಂದು ವರ್ಣಿಸಬಹುದಾದ ಕಾರ್ಯಕ್ರಮವಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿ ಗಳಾಗಿ ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಶಾಲಾ ಮುಖ್ಯೋಪಾಧ್ಯಾಯ ಪದ್ಮನಾಭ, ಎಸ್ ಡಿ ಎಂ ಸಿ ಅಧ್ಯಕ್ಷ ಚಿದಾನಂದ ಕುದ್ಪಾಜೆ ಇವರುಗಳು ಭಾಗವಹಿಸಿದರು ಮಜೀದ್ ಸ್ವಾಗತಿಸಿ, ರಿಯಾಜ್ ವಂದಿಸಿದರು ಮಶೂದ್ ಕಾರ್ಯಕ್ರಮ ನಿರೂಪಿಸಿದರು
ಭಾವುಕರಾದ ಮಾಧವ ಮಾಸ್ಟರ್
ಆಗಿನ 2004 ರ ಬ್ಯಾಚ್ ನ ಕೆಲವು ತುಂಟ ವಿಧ್ಯಾರ್ಥಿಗಳು ಸೇರಿ ಎಲ್ಲಾ 48 ವಿಧ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟ ಶಿಕ್ಷಕರ ವೃಂದ ಕಾರ್ಯಕ್ರಮದಲ್ಲಿ ಹಾಜರಿದ್ದು ಪೂರ್ವ ವಿಧ್ಯಾರ್ಥಿಗಳ ಆವೇಶ ನೋಡಿ…. ಅವರ ಕಣ್ಣಂಚು ನಲ್ಲಿ ಕಣ್ಣೀರ ಧಾರೆ ಜಿನುಗುತಿತ್ತು ಮತ್ತೊಮ್ಮೆ ವೃತ್ತಿ ಜೀವನಕ್ಕೆ ಮರಳುವ ಮನಸ್ಸು ಹಾತೊರೆಯುತ್ತಿತ್ತು, ಅವರ ಮುಖದಲ್ಲಿ ಮೂಡಿದ ಮಂದಾಹಾಸ ಪೂರ್ವ ವಿಧ್ಯಾರ್ಥಿಗಳ ಸವಿ- ನೆಯ ಸಮ್ಮಿಲನದ ಕಾರ್ಯಕ್ರಮಕ್ಕೆ ಗಾಂಬಿರ್ಯ ಹೆಚ್ಚಿಸಿತ್ತು ಮಾಧವ ಸಾರ್ ರಂತೂ…..ತಮ್ಮ ಭಾಷಣದ ಮಾತಿನಲ್ಲಿ ಭಾವನೆಗಳು ತಡೆಯಲಾಗದೆ ಅತ್ತೆ ಬಿಟ್ಟರೂ….. ಶ್ರೀಮತಿ ಭವಾನಿ, ಮನೋರಮಾ, ಪ್ರೇಮ ಟೀಚರ್ಸ್ ಹಾಗೆ ಮಾಧವ ಗೌಡ, ಚಂಗಪ್ಪ ಮಾಸ್ಟರ್, ಜಯಕುಮಾರ್ ಅದೇ ರೀತಿ ಪ್ರಾಥಮಿಕ ಶಾಲೆಯ ಪ್ರಸ್ತುತ ಹೆಡ್ ಮಾಸ್ಟರ್ ಪದ್ಮನಾಭ ಸಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..

ಏಳು – ಬೀಳುಗಳ ಅವಲೋಕನ – ಸಾಧನೆಗೆ ಗೌರವ : ಸರಕಾರಿ ನೌಕರಿ ಗಿಟ್ಟಿಸಿದ ಶಾಲಾ ಸಹಪಾಠಿ ಸಾಹಿನ ಕಲ್ಲುಮುಟ್ಲು ಇವರಿಗೆ ಗೌರವಾರ್ಪಣೆ

ಅಂದು ಬಾಲಕ ಬಾಲಕಿಯರಾಗಿದ್ದವರೂ ಇಂದು ಜವಾಬ್ದಾರಿಯುತ ಪುರುಷ ಗೃಹಿಣಿಯರಾಗಿದ್ದಾರೆ ಶಾಲಾ ದಿನಗಳ ನಂತರ ಅವರವರ ಪಾಡಿಗೆ ಬೆಳುದು ಬಂದಿದ್ದಾರೆ ಸ್ನೇಹ – ಸಮ್ಮಿಲನ ಕಾರ್ಯಕ್ರಮದಲ್ಲಿ ಶಾಲಾ ಸಹಪಾಠಿಗಳ ಏಳು – ಬೀಳುಗಳ ಬಗ್ಗೆ ಗೌರವವಾಗಿ ಚರ್ಚೆ ನಡೆಯಿತು ವೈಯಕ್ತಿಕ ವಿಷಯವಾಗಿ ಎಲ್ಲರೂ ಶಾಲಾ ಸಹಪಾಠಿ ಗಳು ಸಾದಾರಣ ಜೀವನ ನಡೆಸುತ್ತಿದ್ದಾರೆ ಜೀವನದಲ್ಲಿ ನೋವು- ನಲಿವು ಸುಖ – ದುಖ ಯಶಸ್ಸು ಈಗೆ ಎಲ್ಲರ ಜೀವನದಲ್ಲೂ ಮೆಲುಕು ಹಾಕಿದೆ ಆದರೆ 47 ಸಹಪಾಠಿ ಗಳಲ್ಲಿ ಸರಕಾರಿ ಹುದ್ದೆ ಗಿಟ್ಟಿಸಿಕೊಂಡವರು ಇಬ್ಬರು ಮಾತ್ರ ಅದು ಕೂಡ ಮಹಿಳೆಯರು ಸಾಯಿನಾ ಕಲ್ಲುಮುಟ್ಲು ಮತ್ತು ಸುಮಯ್ಯ ಗಾಂಧಿನಗರ ಇವರಿಬ್ಬರನ್ನು ಸ್ನೇಹ – ಸಮ್ಮಿಲನ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು

ಶಾಲಾ ಸಹಪಾಠಿಗಳನ್ನು ಸಂಘಟಿಸುವಲ್ಲಿ ಯಶಸ್ವಿಯಾದ ಮಶೂದ್ – ಮತ್ತು ಸಂಗಡಿಗರು
ಯಶಸ್ವಿ ಸ್ನೇಹ – ಸಮ್ಮಿಲನ ಕಾರ್ಯಕ್ರಮ ಕೇಂದ್ರ ಬಿಂದು ಈ ಕಾರ್ಯಕ್ರಮದ ಆಯೋಜಕರು ಎಕೆಂದರೆ ಹಳೆ ವಿದ್ಯಾರ್ಥಿಗಳನ್ನು ಒಂದು ಕಡೆ ಸೇರಿಸಲು ಸುಲಭ ಆದರೆ ಇಪ್ಪತ್ತು ವರ್ಷಗಳ ನಂತರ ಒಂದೇ ಬ್ಯಾಚ್ ನ ( 2004) ಏಳನೇ ತರಗತಿಯ ಶಾಲಾ ಸಹಪಾಠಿಗಳ ಡಾಟ ಅಂಕಿ – ಅಂಶ ಕಲೆಹಾಕಿ ಅವರನ್ನು ಹುಡುಕಿಕೊಂಡು ಹೋಗಿ ವ್ಯವಸ್ಥಿತವಾಗಿ ಗುಂಪು ರಚನೆ ಮಾಡಿ ಎಲ್ಲರನ್ನೂ ಅದರಲ್ಲೂ ಆ ಸಮಯದಲ್ಲಿ ಪಾಠ ಕಲಿಸಿದ ಶಿಕ್ಷಕ ವೃಂದವನ್ನು ಒಂದೆಡೆ ಸೇರಿಸಿದ್ದು ಮಾತ್ರ
ಗಮನಾರ್ಹವಾದ ಸಂಗತಿ ಮತ್ತು ಮೆಚ್ಚುವಂತದ್ದು.

ಕಾರ್ಯಕ್ರಮದ ಬಗ್ಗೆ ಮನ್ಯಾದ್ ಕುಂಬ್ಳೆ ಬರೆಯುತ್ತಾರೆ…..

ಕೊನೆಗೆ : ಸವಿ ಭೋಜನ ದೊಂದಿಗೆ ಸ್ಮರಣೀಯ ನೆನಪುಗಳಿಗೆ ವಿರಾಮ ಕೋರಲಾಯಿತು