Featured, ಇತರೆ, ಸ್ಥಳೀಯ

ಜಟ್ಟಿಪಳ್ಳ ಮದ್ರಸ ಪೇರೆಂಟ್ಸ್ ಅಸೆಂಬ್ಲಿ : ರಕ್ಷಕ ಪೋಷಕರ ಪ್ರೋತ್ಸಾಹ ವಿದ್ಯಾರ್ಥಿಯ ವಿಜಯದ ಹಾದಿ – ಲತೀಫ್ ಸಖಾಫಿ ಗೂನಡ್ಕ

ಸುಳ್ಯ : ಜಟ್ಟಿಪಳ್ಳ 

ಹಯಾತುಲ್ ಇಸ್ಲಾಂ ಕಮಿಟಿ ರಿ.ಜಟ್ಟಿಪಳ್ಳ ಬುಸ್ತಾನುಲ್ ಉಲೂಂ ಮದ್ರಸ ಇದರ ಪೇರೆಂಟ್ಸ್ ಅಸೆಂಬ್ಲಿ ಕಾರ್ಯಕ್ರಮವು ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿ ಉದ್ಘಾಟಿಸಿದರು.ಮದ್ರಸ ಶಿಕ್ಷಣ ಜೊತೆಯಲ್ಲಿ  ವಿವಿಧ ಪಠ್ಯೇತರ ಚಟುವಟಿಕೆಗಳ ಮೂಲಕ ಗಮನ ಸೆಳೆದ ಅಧ್ಯಾಪಕರ ,ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮದ್ರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ ಪ್ರಾಸ್ಥಾವಿಕ ಭಾಷಣಗೈದರು.ಪ್ರಸಕ್ತ ಸಾಲಿನ ಮೀಲಾದ್ ಕಾರ್ಯಕ್ರಮಗಳು,ಮದ್ರಸ ಸ್ಟಡೀ ಟೂರ್ ಹಾಗೂ ಮದ್ರಸದ ಕಾರ್ಯಾಚರಣೆಗಳಲ್ಲಿ ಉತ್ತಮವಾಗಿ ಸ್ಪಂದಿಸಿ ಕೈ ಜೋಡಿಸಿದ ರಕ್ಷಕ ಪೋಷಕರನ್ನು ಅಭಿನಂದಿಸಿ ಮುಂದೆಯೂ ತಮ್ಮ ಸಂಪೂರ್ಣ ಸಹಕಾರವಿರಲೆಂದು ಆಗ್ರಹಿಸಿದರು.ಮದ್ರಸ ಸದರ್ ಉಸ್ತಾದ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ವಿಷಯ ಮಂಡಿಸಿ,ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ರಕ್ಷಕ ಪೋಷಕರ ಪಾತ್ರದ ಬಗ್ಗೆ ವಿವರಿಸಿದರು.ರಕ್ಷಕ ಪೋಷಕರ ಪ್ರೋತ್ಸಾಹ ವಿದ್ಯಾರ್ಥಿಯ ವಿಜಯದ ಹಾದಿಯೆಂದರು.ಮಕ್ಕಳಿಗೆ ನೀಡುವ ಪ್ರೀತಿ,ಸ್ನೇಹ,ವಾತ್ಸಲ್ಯ ,ಕರುಣೆ,ನಿರಂತರ ಸಲಹೆ ಸೂಚನೆಗಳು ಹಾಗೂ ಅವರೊಂದಿಗಿನ ಉತ್ತಮ ಒಡನಾಟದ ಮೂಲಕ ಮಕ್ಕಳನ್ನು ದುಷ್ಚಟಗಳಿಂದ,ಅಧಾರ್ಮಿಕತೆಯಿಂದ ರಕ್ಷಿಸಲು ಸಾಧ್ಯವೆಂದರು.ಮದ್ರಸದ ಶೈಕ್ಷಣಿಕ ಅಭಿವೃದ್ಧಿಯಲ್ಲಿ, ಕಾರ್ಯ ಚಟುವಟಿಕೆಗಳಲ್ಲಿ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಆಡಳಿತ ಕಮಿಟಿ ಹಾಗೂ ರಕ್ಷಕ ಪೋಷಕರನ್ನು ಅಭಿನಂದಿಸಿದರು.  ಈ ಸಂಧಂರ್ಭ ಈ ಮೊದಲು  ಜಟ್ಟಿಪಳ್ಳ ನಿವಾಸಿಯಾಗಿದ್ದು ಪ್ರಸ್ತುತ ವಿದೇಶದಲ್ಲಿರುವ ಸಫ್ವಾನ್ ರವರ ನಾಲ್ಕು ವರ್ಷದ ಮಗಳು ಅನಾರೋಗ್ಯದ ಕಾರಣ ನಮ್ಮನ್ನಗಲಿದ್ದು ಅವರನ್ನು ಸ್ಮರಿಸಿ ವಿಶೇಷ ದುಆಃ ಮಾಡಲಾಯಿತು.ಕಾರ್ಯಕ್ರಮದಲ್ಲಿ ಸಿಯಾಬ್ ಸಿ ಎ  ಉಪಸ್ಥಿತರಿದ್ದು ಹೆಚ್ಚಿನ ಸಂಖ್ಯೆಯ ತಾಂಯಂದಿರುಗಳು ಭಾಗವಹಿಸಿದರು.

m

Related Posts