ಇತರೆ, ಸ್ಥಳೀಯ

ನಾಳೆ ಫೆಬ್ರವರಿ 16, ಕೊಡಗು ಪೆರಾಜೆಯಲ್ಲಿ ಕನ್ನಡ ಸ್ನೇಹಿಗಳ ಸಮಾಗಮ, ಗಡಿನಾಡ ಕನ್ನಡಿಗರ ಸ್ನೇಹ ಸಂಗಮ

ಬೃಹತ್ ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರ, ಸವಲತ್ತು ವಿತರಣೆ, ಮೆಡಿಕಲ್ ಕಿಟ್ ಹಸ್ತಾಂತರ ಹಾಗೂ ಸ್ವಾಭಿಮಾನಿ ಕನ್ನಡಿಗ ಪ್ರಶಸ್ತಿ ಪ್ರಧಾನ ಮತ್ತು ಸನ್ಮಾನ ಸಮಾರಂಭ

ಮಡಿಕೇರಿ : ಕನ್ನಡದ ಕಂಪು, ಕನ್ನಡದ ಹಿಂಪು, ಸಜ್ಜಾಗಲಿದೆ ಪೆರಾಜೆ ನಾಳೆ ಕರ್ನಾಟಕದ ಮಾತೃಭಾಷೆಯ ಆಲಿಂಗನಕ್ಕೆ… ಹೌದು ಈಗೊಂದು ಕಾರ್ಯಕ್ರಮ ಪೆರಾಜೆಯ ಯುವಕ, ಸಾಮಾಜಿಕ ಕಾರ್ಯಕರ್ತ, ಉದ್ಯಮಿ, ಅಪ್ಪಟ ಕನ್ನಡ ಅಭಿಮಾನಿ, ಮಾತ್ರವಲ್ಲ ಸರಕಾರದ ಕನ್ನಡ ಶಾಲೆಯ ಪೋಷಕ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಉನೈಸ್ ಪೆರಾಜೆ ಯವರ ನೇತೃತ್ವದಲ್ಲಿ ಗಡಿನಾಡ ಕನ್ನಡಿಗರ ಸ್ನೇಹ ಸಂಗಮ, ಕನ್ನಡ ಸ್ನೇಹಿಗಳ ಸಮಾಗಮ. ವಿಭಿನ್ನ ಮತ್ತು ಅಪರೂಪದ ಕಾರ್ಯಕ್ರಮ ನಾಳೆ ಕೊಡಗು ಪೆರಾಜೆಯ ಕನ್ನಡ ಶಾಲೆಯಲ್ಲಿ ಜರುಗಲಿದೆ

 

 

ಕಾರ್ಯಕ್ರಮದ ವಿವರ……

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆಯುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಅಂಗವಾಗಿ 50 ನೇ ಶಾಲೆಗೆ ಕೊಡುಗೆ ನೀಡಿದ ಸಂಭ್ರಮದ ಅಂಗವಾಗಿ ನಾಳೆ(16/02/2025) ಬೆಳಗ್ಗೆ 9 ಕ್ಕೆ ಸರಿಯಾಗಿ ಆಟೋಟ ಸ್ಪರ್ಧೆಯ ಉದ್ಘಾಟನಾ ಸಮಾರಂಭ 11 ಗಂಟೆಗೆ ರಕ್ತದಾನ ಶಿಬಿರ, ಮತ್ತು ಉಚಿತ ಆರೋಗ್ಯ ಶಿಬಿರ ಅಲ್ಲದೇ ಮುಂದೆ ನಡೆಯುವ ಉಚಿತ ಶ್ರವಣ ತಪಾಸಣೆ ನೋಂದಣಿ,ಮೆಡಿಕಲ್ ಕಿಟ್ ಹಸ್ತಾಂತರ, ಸವಲತ್ತು ವಿತರಣೆ, ವಿಲ್ ಚಯರ್ ಕೊಡುಗೆ

 

ಸಂಜೆ 3 ರಿಂದ “ ಬಾರಿಸು ಕನ್ನಡ ಡಿಂಡಿಮ„ ಕನ್ನಡ ಸುಮಧುರ ಗೀತೆಗಳು  ಸಂಜೆ ಗಂಟೆ 4ಕ್ಕೆ  ಸ್ವಾಭಿಮಾನಿ ಕನ್ನಡಿಗ ಪ್ರಶಸ್ತಿ ಪ್ರಧಾನ ಮತ್ತು ಸನ್ಮಾನ ಸಮಾರಂಭ

ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯ ಅಥಿತಿ ಗಳು 

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎ ಎಸ್ ಪೊನ್ನಣ್ಣ, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ, ಪತ್ರಕರ್ತರು ಖ್ಯಾತ ಹೋರಾಟಗಾರರಾದ ರಾ ಚಿಂತನ್, ಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ಕರ್ನಾಟಕ ರಕ್ಷಣಾ ವೇದಿಕೆ  ಸ್ವಾಭಿಮಾನಿ ಪಡೆ ರಾಜಧ್ಯಕ್ಷರಾದ ಶಶಿ ಕಿರಣ್ B,,T M ಶಹೀದ್,ಆಸರೆ ಫೌಂಡೇಶನ್ ಜಯರಾಜ್ ನಾಯ್ಡು, ಬಿಗ್ ಬಾಸ್ ಸ್ಪರ್ಧಿ ಹಾಗೂ ಖ್ಯಾತ ಹೋರಾಟಗಾರರಾದ ರೂಪೇಶ್ ರಾಜಣ್ಣ, ಹೋರಾಟಗಾರ್ತಿ ನಜ್ಮಾ ನಝೀರ್, ಬೖರಪ್ಷ ಹರೀಶ್ ಕುಮಾರ್ ಇಸ್ಮಾಯಿಲ್ ನಾಪೋಕ್ಲು  ಡಾ|ಉಮ್ಮರ್ ಬೀಜದಕಟ್ಟೆ, ಹಮೀದ್ ಕುತ್ತಮೊಟ್ಟೆ, ಸಾಜೀದ್ IG, ಅಬ್ಬುಲ್ ರಹಮಾನ್‌ ಸಂಕೇಶ್, ಸೇವ್ ದೀ ಡ್ರೀಮ್ಸ್ ಡೈರೆಕ್ಟರ್ ಜಾಬಿರ್ ನಿಝಾಮಿ, ಖ್ಯಾತ ಗಾಯಕರಾದ  ಅಶ್ರಫ್ ಸವಣೂರು, ಮತ್ತು ಸಮದ್ ಗಡಿಯಾರ್ ಅಲ್ಲದೆ ಹಲವಾರು ರಾಜಕೀಯ, ಸಾಮಾಜಿಕ , ಶೈಕ್ಷಣಿಕ, ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಇ ಇವಾರ್ತೆಗೆ ತಿಳಿಸಿದ್ದಾರೆ

ಏನಿದು ? ಕನ್ನಡ ಶಾಲೆ ಉಳಿಸಿ, ಬೆಳೆಸಿ, ಅಭಿಯಾನ…

ಉನೈಸ್ ಪೆರಾಜೆ ಮತ್ತು ಮಿತ್ರರು ಸೇರಿ 2019 ರಂದು ಈ ಅಭಿಯಾನಕ್ಕೆ ಚಾಲನೆ ನೀಡಿದರು ಸರಕಾರಿ ಶಾಲೆಯಲ್ಲಿ ಅಧಿಕವಾಗಿ ಬಡ ಮನೆಯ ಮಕ್ಕಳು ಕಲಿಯಲು ಬರತ್ತಾರೆ ಸರಕಾರಿ ಶಾಲೆಯ ಮಕ್ಕಳು ಸಹ ಆಟ, ಪಾಠ ಗಳಲ್ಲಿ ಮುಂಚೂಣಿ ಯಲ್ಲಿ ಬರಬೇಕು ಆ ನಿಟ್ಟಿನಲ್ಲಿ ಆಯ್ದ ಸರಕಾರಿ ಶಾಲೆಗಳಿಗೆ, ಪೀಠೋಪಕರಣ,ಆಟೋಪಕರಣ ಕಂಪ್ಯೂಟರ್, ಇತ್ಯಾದಿ ಇತ್ಯಾದಿ.. ಕೊಡುಗೆಯನ್ನು ನೀಡುವ ಮೂಲಕ ಸರಕಾರಿ ಶಾಲೆಯನ್ನು ಪ್ರೋತ್ಸಾಹಿಸುತ್ತಾರೆ, ಆರಂಭದಲ್ಲಿ ಸುಳ್ಯ ಜಟ್ಟಿಪಳ್ಳ ಶಾಲೆಯ ನಲಕಲಿ ವಿಭಾಗಕ್ಕೆ ಪೀಠೋಪಕರಣ ನೀಡುವ ಮೂಲಕ ಚಾಲನೆ ನೀಡಿದರು 2019 ರಿಂದ ಆರಂಭಿಸಿ 2025 ತನಕ ಸುಮಾರು 50 ಸರಕಾರಿ ಶಾಲೆಗೆ ದಾನಿಗಳ ಸಹಕಾರದಿಂದ ಕೊಡುಗೆಗಳನ್ನು ನೀಡುತ್ತಾ ಬಂದಿರುತ್ತಾರೆ

m

 

Related Posts