ಸುಳ್ಯ: ನಿನ್ನೆ ತಡರಾತ್ರಿ ಬಿಳಿಯಾರು ಕೊಡೆಕಜೆ ಪ್ರದೇಶದಲ್ಲಿ ಕೃಷಿ ತೋಟಕ್ಕೆ ಆನೆ ದಾಳಿಮಾಡಿದ್ದು ಅಪಾರ ಕೃಷಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ಇದೇ ರೀತಿಯ ಘಟನೆಗಳು ಸುಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ತಿಂಗಳಿಂದ ವರದಿಯಾಗಿತ್ತಿದ್ದು ಕೃಷಿಕರು ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹಲವು ಪ್ರದೇಶಗಳಲ್ಲಿ ಆನೆ ದಾಳಿಯ ಸಮಸ್ಯೆ ನಿರಂತರವಾಗಿ ಪುನರಾವರ್ತಿತವಾಗುತ್ತಿದ್ದು ಕೃಷಿಕರ ಜೀವನೋಪಾಯ ಮತ್ತು ಸುರಕ್ಷತೆಗೆ ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ






m

