Featured, ಇತರೆ, ಸ್ಥಳೀಯ

ಸುಳ್ಯ : ಸಚಿವ ಸತೀಶ್ ಜಾರಕಿಹೊಳಿ ಯವರಿಂದ ರಸ್ತೆಯ ಕಾಮಗಾರಿ ವೀಕ್ಷಣೆ, ಪರಿಶೀಲನೆ, ಅನುದಾನದ ಭರವಸೆ

ಸುಳ್ಯ : ಕರ್ನಾಟಕ ಘನ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಯವರು ಬಹುಬೇಡಿಕೆಯ ಅರಂತೋಡು ಎಲಿಮಲೆ ಸುಬ್ರಮಣ್ಯ ರಸ್ತೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಅವರೊಂದಿಗೆ ವೀಕ್ಷಿಸಿದರು ಅರಂತೋಡಿನಿಂದ ಮರ್ಕoಜದ ಸನಿಹವರೆಗೆ ಸುಮಾರು 8ಕಿ. ಮೀ ರಸ್ತೆಯ ಕಾಮಗಾರಿ ವೀಕ್ಷಿಸಿ ನಡೆದು ಪರಿಶೀಲಿಸಿ ಮೋರಿ ಚರಂಡಿ ಹಾಗು ಅಗತ್ಯತೆ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅತಿ ಶೀಘ್ರದಲ್ಲಿ ರಸ್ತೆಯನ್ನು ಸಂಪೂರ್ಣ ಅಗಲೀಕರಣಗೊಳಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದರು.

ರಸ್ತೆಯನ್ನು ವೀಕ್ಷಿಸಿ ಅನುದಾನ ಭರವಸೆ ನೀಡಿದ ಮಾನ್ಯ ಸಚಿವರಿಗೆ ಟಿ. ಎಂ. ಶಾಹಿದ್ ತೆಕ್ಕಿಲ್ ಕೃತಜ್ಞತೆ ಸಲ್ಲಿಸಿ ಅಗತ್ಯತೆ ಬಗ್ಗೆ ಒತ್ತಿಹೇಳಿದರು ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರು ಅಡ್ತಲೆ ಬಳಿ ರಸ್ತೆ ಮದ್ಯದಲ್ಲಿ ಮತ್ತು ಸಂಪಾಜೆ ಗ್ರಾಮ ಪಂಚಾಯ್ತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಎಲಿಮಲೆ, ಕೆ ಡಿ ಪಿ ಸದಸ್ಯ ಅಶ್ರಫ್ ಗುಂಡಿ,ಸಿದ್ದಿಕ್ ಕೊಕೊ, ತಾಜುದ್ದೀನ್ ಅರಂತೋಡು, ಹನೀಫ್ ಮೊಟ್ಟೆಂಗಾರ್ ಮತ್ತಿತರು ಇದ್ದು ಸಚಿವರನ್ನು ಎಲಿಮಲೆ ರಸ್ತೆ ಬಳಿ ಸ್ವಾಗತಿಸಿ ರಸ್ತೆಯ ಅಗತ್ಯತೆ ಬಗ್ಗೆ ವಿವರಿಸಿದರು.

m

Related Posts