Featured, ಅಂಕಣ

ಕೆ ಎಂ ಮುಸ್ತಫಾ ನಈಮಿ ಹಾವೇರಿಗೆ ‘ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್’:

ಎ.28ರಂದು ರಷ್ಯಾದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ 

ಬೆಂಗಳೂರು: ತೆರೆಮರೆಯಲ್ಲಿ ದುಡಿಯುತ್ತಾ ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿದ ಕರುನಾಡಿನ ಸಾಧಕರನ್ನು ಜಗತ್ತಿಗೆ ಪರಿಚಯಿಸುವ ಸಲುವಾಗಿ ‘ವಿಶ್ವವಾಣಿ’ ಪತ್ರಿಕೆಯು ನೀಡುತ್ತಿರುವ ‘ಗ್ಲೋಬಲ್ ಅಚೀವರ್ಸ್ ಅವಾರ್ಡ್’ ಪ್ರಶಸ್ತಿಗೆ ಹಾವೇರಿ ಮುಈನುಸ್ಸುನ್ನಃ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ ಎಂ ಮುಸ್ತಫಾ ನಈಮಿ ಆಯ್ಕೆಯಾಗಿದ್ದಾರೆ. ಎಪ್ರಿಲ್ 22 ರಿಂದ 28ರ ತನಕ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪುರಸ್ಕೃತರಾಗಲಿದ್ದಾರೆ. ಮೇಕ್ ವೆಲ್ಫೇರ್ ಫೌಂಡೇಶನ್ ಮೂಲಕ ಅವರು ನಡೆಸುತ್ತಿರುವ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶಿಕ್ಷಣ, ಸಮಾಜ ಸೇವೆ, ರಾಜಕೀಯ, ಪತ್ರಿಕೋದ್ಯಮ, ಕಲೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪುರಸ್ಕರಿಸುವ ವಿಶ್ವವಾಣಿಯ ಪ್ರಸ್ತುತ ಯೋಜನೆಯಡಿ ಈಗಾಗಲೇ ಜಪಾನ್, ಇಂಡೋನೇಷ್ಯಾ, ಮಾಲ್ಡೀವ್ಸ್, ಕಾಂಬೋಡಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಕಾರ್ಯಕ್ರಮ ನಡೆಸಿ 50ಕ್ಕೂ ಅಧಿಕ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಾರಿ ಪ್ರಶಸ್ತಿ ಕಾರ್ಯಕ್ರಮವು ರಷ್ಯಾ ಕಾನ್ಸ್ಲೇಟ್ ಸಹಯೋಗದೊಂದಿಗೆ ಮಾಸ್ಕೋದಲ್ಲಿ ನಡೆಯಲಿದೆ. ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ನಾಯಕತ್ವದಲ್ಲಿ ನಡೆಯುವ ಪ್ರಸ್ತುತ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಕಾರ್ಯ ನಿರ್ವಹಣಾಧಿಕಾರಿ ಚಿದಾನಂದ ಕಡಲಾಸ್ಕರ ತಿಳಿಸಿದ್ದಾರೆ.

m

Related Posts