Featured, ಅಂಕಣ, ಸ್ಥಳೀಯ

ಸರಕಾರಿ ಪ್ರಥಮ ದರ್ಜೆ ಕಾಲೇಜ್ ಸುಳ್ಯದಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆಯು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿ ನಾರ್ಕೋಡು ಇಲ್ಲಿ ಮಾರ್ಚ್ ೦೪ರಿಂದ ೧೦ರವರೆಗೆ ನಡೆದಿದ್ದು, ಇದರ ಸಮಾರೋಪ ಸಮಾರಂಭವು ಮಾ-೧೦ರಂದು ಶಾಲಾ ರಂಗಮಂದಿರದಲ್ಲಿ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ವೇದಿಕೆಯಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಕಮಲ ನಾಗಪಟ್ಟಣ, ಆಲೆಟ್ಟಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕುಂಚಡ್ಕ, ಪಿ.ಎಂ ಪೋಷಣ್ ಇದರ ಸಹಾಯಕ ನಿರ್ದೇಶಕರಾದ ಶ್ರೀಮತಿ ವೀಣಾ ಎಂ ಟಿ, ನಿಕಟಪೂರ್ವ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಯತಿರಾಜ್ ಭೂತಕಲ್ಲು, ಯೂಟ್ಯೂಬರ್ ವಿಖ್ಯಾತ್ , ಪ್ರಗತಿಪರ ಕೃಷಿಕರಾದ ಕೃಪಾಶಂಕರ್ ತುದಿಯಡ್ಕ, ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉದಯಶಂಕರ ಹೆಚ್, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ ಪ್ರೀತಿ ಕೆ ರಾವ್, ಶಾಲಾ ಮುಕ್ಯೋಪಾಧ್ಯಾಯಿನಿ ಸುನಂದ ಜಿ, ಎನ್.ಎಸ್.ಎಸ್ ಅಧಿಕಾರಿಗಳಾದ ರಾಮಕೃಷ್ಣ ಕೆ ಹಾಗೂ ಡಾ ಮೊನೀಷಾ, ಎನ್.ಎಸ್.ಎಸ್ ನಾಯಕರುಗಳಾದ ಪವನ್ ಬಿ.ಕೆ, ಅಮೂಲ್ಯ ಎ.ಕೆ, ಹಿತೇಶ್ ಕೆ ಡಿ, ಮೈತ್ರಿ ಎನ್ ಇವರುಗಳು ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಘಟಕಾದಿಕಾರಿಗಳಾದ ಡಾ ಮೊನೀಷಾ ಸ್ವಾಗತಿಸಿದರು. ರಾಮಕೃಷ್ಣ ಕೆ ಎಸ್ ವಂದಿಸಿದರು. ವಿದ್ಯಾರ್ಥಿ ಸ್ವಾತಿ ಕಾರ್‍ಯಕ್ರಮ ನಿರೂಪಿಸಿದರು.

m

Related Posts