Featured, ಇತರೆ, ಸ್ಥಳೀಯ

ಸುಳ್ಯ ಲೋಕೋಪಯೋಗಿ ಗುತ್ತಿಗೆದಾರರ ಸಂಘಕ್ಕೆ ನೂತನ ಪದಾಧಿಕಾರಿಗಳು; ಅಧ್ಯಕ್ಷರಾಗಿ ಚಿದಾನಂದ ಕುದ್ಪಾಜೆ ಅಯ್ಕೆ

ಸುಳ್ಯ, ಜು. 26: ಲೋಕೋಪಯೋಗಿ ಗುತ್ತಿಗೆದಾರರ ಸಂಘ (ರಿ.), ಸುಳ್ಯ ನಗರದ ವಾರ್ಷಿಕ ಮಹಾಸಭೆಯು ಜುಲೈ 26ರಂದು ಗಾಂಧಿನಗರದ ಗ್ರ್ಯಾಂಡ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು.

ಸಂಘದ ಗೌರವಾಧ್ಯಕ್ಷ ಅಬ್ದುಲ್ ಲತೀಫ್ ಎಂ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ವಾರ್ಷಿಕ ಚಟುವಟಿಕೆಗಳ ಕುರಿತು ಚರ್ಚೆ ನಡೆಸಿ, ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಎಂ.ಕೆ., ಅಧ್ಯಕ್ಷರಾಗಿ ಚಿದಾನಂದ ಕುದ್ಪಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಕೇರ್ಪಳ, ಖಜಾಂಜಿಯಾಗಿ ಕೀರ್ತನ್ ಕೆ.ಆರ್., ಉಪಾಧ್ಯಕ್ಷರಾಗಿ ಮಂಜುನಾಥ್ ಪ್ರಭು ಸೂರ್ತಿಲ ಹಾಗೂ ಎ.ಬಿ. ಇಬ್ರಾಹಿಂ ಅಜ್ಜಾವರ, ಜಂಟಿ ಕಾರ್ಯದರ್ಶಿಯಾಗಿ ಯು.ಎಂ. ಅನಿಲ್ ಕುಮಾರ್ ಕೇರ್ಪಳ ಹಾಗೂ ಗೌರವ ಸಲಹೆಗಾರರಾಗಿ ಚಂದ್ರಶೇಖರ ಅಡ್ಪಂಗಾಯ ಮತ್ತು ಹರಿಪ್ರಸಾದ್ ಎಲಿಮಲೆ ಆಯ್ಕೆಯಾದರು.
ಸಭೆಯಲ್ಲಿ ಚಂದ್ರಶೇಖರ ಕೇರ್ಪಳ ಅವರು ಸ್ವಾಗತಿಸಿದರು. ಹರಿಪ್ರಸಾದ್ ಎಲಿಮಲೆ ವಂದಿಸಿದರು. ಕಾರ್ಯಕ್ರಮವನ್ನು ನೂತನ ಅಧ್ಯಕ್ಷ ಚಿದಾನಂದ ಕುದ್ಪಾಜೆ ನಿರೂಪಿಸಿದರು.
ಸಭೆಯು ಸಂಘದ ಅಭಿವೃದ್ಧಿ ಹಾಗೂ ಗುತ್ತಿಗೆದಾರರ ಹಿತಾಸಕ್ತಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆಯೊಂದಿಗೆ ಯಶಸ್ವಿಯಾಗಿ ನಡೆಯಿತು.
m

Related Posts