ಇತರೆ, ಸ್ಥಳೀಯ

ಸಾಮರಸ್ಯ, ಭಾವೈಕ್ಯತೆಯ ಸಂದೇಶ ಸಾರಿದ ಸೌಹಾರ್ದ ಇಫ್ತಾರ್ ಕೂಟ

ಸಮುದಾಯಗಳು ಭಾವನಾತ್ಮಕ ಸಂಬಂಧಗಳ ಮೂಲಕ ಒಂದಾಗಿರುವ ಸ್ಥಿತಿ. ಇದು ಪರಸ್ಪರ ಸಹಾನುಭೂತಿ, ವಿಶ್ವಾಸ, ಮತ್ತು ಸಾಮೂಹಿಕ ಉದ್ದೇಶಗಳನ್ನು ಹಂಚಿಕೊಳ್ಳುವುದರ ಮೇಲೆ ನಿಂತಿದೆ.

 

ಸುಳ್ಯ : ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷರಾದ ಹಮೀದ್ ಕುತ್ತಮೊಟ್ಟೆ ಇವರ ನೇತೃತ್ವದಲ್ಲಿ  (17/03/2025)  ಸೋಮವಾರ ಸಂಜೆ ಸೌಹಾರ್ದ ಇಫ್ತಾರ್ ಕೂಟ ಬಹಳ ಅರ್ಥಪೂರ್ಣವಾಗಿ ಜರುಗಿತ್ತು,
ವಿವಿಧ ಧರ್ಮಗಳಲ್ಲಿ ನೆಲೆಗೊಳ್ಳುವ ಸರಕಾರಿ ಅಧಿಕಾರಿಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು, ಈ ಒಂದು ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡು ಸಾಮರಸ್ಯ ಭಾವೈಕ್ಯತೆಯು ಸಂದೇಶ ಸಾರುವಲ್ಲಿ ಸೌಹಾರ್ದ ಇಫ್ತಾರ್ ಕೂಟ ಯಶಸ್ವಿಯಾಯಿತು

ಆರಂಭದಲ್ಲಿ ಸೌಹಾರ್ದ ಇಫ್ತಾರ್ ಕೂಟ ವನ್ನು ಆಯೋಜಿಸಿದ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷ ಹಮೀದ್ ಕುತ್ತಮೊಟ್ಟೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯ ಅತಿಥಿಗಳನ್ನು ಗೌರವ ಪೂರ್ವವಾಗಿ ಸ್ವಾಗತಿಸಿ, ಸೌಹಾರ್ದ ಇಫ್ತಾರ್  ಸ್ನೇಹ, ಐಕ್ಯತೆ, ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಒಂದು ಸಾಮೂಹಿಕ ಇಫ್ತಾರ್ ಸಮಾರಂಭ. ಇದು ಪವಿತ್ರ ರಂಝಾನ್ ತಿಂಗಳಲ್ಲಿ  ಮುಸ್ಲಿಮರು ವ್ರತ ( ಉಪವಾಸ) ಆಚರಣೆ ಮಾಡುತ್ತಿದ್ದು ಸಂಧ್ಯಾ ಸಮಯದಲ್ಲಿ ಉಪವಾಸ  ಮುಕ್ತಾಯಗೊಳಿಸುವ ಸಂದರ್ಭದಲ್ಲಿ ನಡೆಯುವ ಔತಣಕೂಟ. ಸಾಮಾನ್ಯವಾಗಿ, ಇಫ್ತಾರ್ ಸಮಯದಲ್ಲಿ ಮುಸ್ಲಿಮರು ತಾಳ್ಮೆ, ಕರುಣೆ, ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಪ್ರದರ್ಶಿಸುತ್ತಾರೆ. “ಸೌಹಾರ್ದ ಇಫ್ತಾರ್” ಎಂಬ ಪರಿಕಲ್ಪನೆಯು ಈ ಸಾಂಪ್ರದಾಯಿಕ ಸಂದರ್ಭವನ್ನು ಎಲ್ಲಾ ಸಮುದಾಯಗಳು, ಧರ್ಮಗಳು, ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಜನರೊಂದಿಗೆ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಐಕ್ಯತೆಯನ್ನು ಬಲಪಡಿಸುತ್ತದೆ ಎಂದರು

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದ ಸಬಾಹ್ ಸಖಾಫಿ ಬೀಜಕೊಚ್ಚಿ ಇವರು ರಂಝಾನ್ ನೀಡುವ ಸಂದೇಶ ಸ್ವಯಂ-ಪರಿಶೀಲನೆ, ಪರೋಪಕಾರ, ಮತ್ತು ಸಾಮೂಹಿಕ ಹಿತಾಸಕ್ತಿಗೆ ಕರೆ ನೀಡುತ್ತದೆ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ,  ಮಾನವೀಯ ಮೌಲ್ಯಗಳ ಪುನರುಜ್ಜೀವನದ ಪ್ರತೀಕ ಇಸ್ಲಾಮ್ ಮತ್ತು ಇತರ ಧರ್ಮಗಳ ನಡುವೆ ಸಹಿಷ್ಣುತೆ ಮತ್ತು ಒಗ್ಗಟ್ಟನ್ನು ಬೆಳೆಸುವಲ್ಲಿ ಸೌಹಾರ್ದ ಇಫ್ತಾರ್ ಕೂಟ ಯಶಸ್ವಿಯಾಗುತ್ತದೆ ಎಂದರು

ತಹಶಿಲ್ದಾರ್ ಮಂಜುಳಾ ಎಮ್ ಮಾತನಾಡಿ……

ಸಾಮರಸ್ಯವು ಮಾನವ ಸಮಾಜದ ಅಸ್ತಿತ್ವದ ಅಡಿಗಲ್ಲು. ಇದು ನಮ್ಮ ಪರಸ್ಪರ ಜವಾಬ್ದಾರಿ, ಸಹಾನುಭೂತಿ, ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ಬಲಪಡಿಸುತ್ತದೆ. ಕನ್ನಡದ ಮಹಾಕವಿ ರನ್ನನು ಹೇಳಿದಂತೆ, “ಒಂದಾಗಿರಿ, ಒಳ್ಳೆಯದು ಮಾಡಿ.” ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಇದು ನಮ್ಮ ಭವಿಷ್ಯದ ಪೀಳಿಗೆಗಳಿಗೆ ಸುಸ್ಥಿರ ಮತ್ತು ಸಮೃದ್ಧ ಜಗತ್ತನ್ನು ನೀಡುವ ಏಕೈಕ ಮಾರ್ಗ.  ಮನುಷ್ಯ ಧರ್ಮವು ನೀತಿ, ಸಮಾಜ ಹಿತ, ಮತ್ತು ಆತ್ಮೋನ್ನತಿಯ ಸಮತೋಲನವನ್ನು ಗುರುತಿಸುತ್ತದೆ ಎಂದರು

ಸಾಮಾಜಿಕ ಕಾರ್ಯಕರ್ತ ಕೆ ಪಿ ಜಾನಿ ಮಾತನಾಡಿ…..

ಸಾಮರಸ್ಯವಿಲ್ಲದೆ, ಸಮಾಜವು ವಿಘಟನೆಗೊಳ್ಳುತ್ತದೆ, ಪ್ರಕೃತಿ ಅಸ್ತವ್ಯಸ್ತವಾಗುತ್ತದೆ, ಮಾನವೀಯತೆ ಕುಸಿಯುತ್ತದೆ. ಭಾರತೀಯ ತತ್ವಶಾಸ್ತ್ರದಲ್ಲಿ “ವಸುಧೈವ ಕುಟುಂಬಕಮ್” (ಜಗತ್ತೇ ಒಂದು ಕುಟುಂಬ) ಎಂಬ ಸಿದ್ಧಾಂತ ಸಾಮರಸ್ಯದ ಮಹತ್ವವನ್ನು ಒತ್ತಿಹೇಳುತ್ತದೆ.ಎಂದರು

ಶ್ರೀಮಂತರು ತಮ್ಮ ಸಂಪತ್ತಿನ 2.5% ಬಡವರಿಗೆ ದಾನ ಮಾಡುವುದು (ಜಕಾತ್) ಕಡ್ಡಾಯದಾನ. ಇದು ಸಮಾಜದಲ್ಲಿ ಆರ್ಥಿಕ ಸಮತೋಲನ ಮತ್ತು ಸಹೋದರತೆಯನ್ನು ಉತ್ತೇಜಿಸುತ್ತದೆ.: ಅಶೋಕ್ ಎಡಮಲೆ
ಸಮುದಾಯಗಳ ನಡುವೆ ಹಂಚಿಕೊಂಡ ಭಾವನೆಗಳು, ಪ್ರೀತಿ, ನಂಬಿಕೆ, ಮತ್ತು ಸಾಮರಸ್ಯದ ಸ್ಥಿತಿಯನ್ನು ಸೂಚಿಸುತ್ತದೆ. : ಸದಾನಂದ ಮಾವಜಿ
ಸಮುದಾಯಗಳು ಭಾವನಾತ್ಮಕ ಸಂಬಂಧಗಳ ಮೂಲಕ ಒಂದಾಗಿರುವ ಸ್ಥಿತಿ. ಇದು ಪರಸ್ಪರ ಸಹಾನುಭೂತಿ, ವಿಶ್ವಾಸ, ಮತ್ತು ಸಾಮೂಹಿಕ ಉದ್ದೇಶಗಳನ್ನು ಹಂಚಿಕೊಳ್ಳುವುದರ ಮೇಲೆ ನಿಂತಿದೆ : ಎನ್ ಎ ರಾಮಚಂದ್ರ

ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಗಣ್ಣರು

ಪಿ ಸಿ ಜಯರಾಮ್,ವೆಂಕಪ್ಪ ಗೌಡ, ಉಜ್ವಲ್ ಊರುಬೈಲು, ಎಮ್ ಬಿ ಸದಾಶಿವ, ರಾಧಾಕೃಷ್ಣ ಬೊಳ್ಳುರು, ಸುಳ್ಯ CDPO ಶೈಲಾಜಾ ಮಡಮ್ , ತಾಲೂಕು ಪಂಚಾಯತ್ CEO ರಾಜಣ್ಣ, ಶಿಕ್ಷಣ ಅಧಿಕಾರಿ ಕೃಷಪ್ಪ, ಸುಳ್ಯ ಸೂಡಾ ಅಧ್ಯಕ್ಷರಾದ ಕೆ ಎಮ್ ಮುಸ್ತಫಾ ಮಿರಾಝ್ ಸುಳ್ಯ, ಕಲಂದರ್ ಎಲಿಮಲೆ, ಕಲಾಮ್ ಸುಳ್ಯ, ಇಕ್ಬಾಲ್ ಸುಣ್ಣಮೂಲೆ ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾದ್ಯಮ ವರದಿಗಾರರು

ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳು ಸಾಮಾಜಿಕ , ರಾಜಕೀಯ ಮುಖಂಡರು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಉಪ ತಹಶೀಲ್ದಾರ್ ಮಂಜುನಾಥ್, ಮುಖಂಡರುಗಳಾದ ಪಿ ಎಸ್ ಗಂಗಾಧರ್,ಸಮಾಜ ಸೇವಕ ಖಾದರ್ ಹಾಜಿ ಅಂಚಿನಡ್ಕ, ಎಸ್‌ ಸಂಸುದ್ದೀನ್ ಅರಂಬೂರು, ನಂದರಾಜ್ ಸಂಕೇಶ್, ಆರ್ ಐ ಅವಿನ್ ರಂಗತ್ತಮಲೆ, ವಿ ಎ ತಿಪ್ಪೇಶ್, ಕೆ ವಿ ಜಿ ಡೆಂಟಲ್ ಕಾಲೇಜಿನ ಆಡಳಿತ ಅಧಿಕಾರಿ ಮಾಧವ, ಮುಖಂಡರಾದ ಪ್ರಸನ್ನ ಮೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಹರೀಶ್ ನಾಯ್ ಸುಪ್ರೀತ್, ಪ್ರಸಾದ್‌ ಕತ್ತಲಡ್ಕ ಹಾಗೂ ಮುಖಂಡರುಗಳಾದ ಗೋಕುಲ್ ದಾಸ್,ಶಶಿಧರ ಎಂ ಜೆ,ಆದಮ್ ಹಾಜಿ ಕಮ್ಮಾಡಿ, ಅನ್ಸಾರಿಯಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಕಾರ್ಯದರ್ಶಿ ಲತೀಫ್ ಹರ್ಲಡ್ಕ ಶಾಫಿ ಕುತ್ತಮೊಟ್ಟೆ,ಇಸ್ಮಾಯಿಲ್ ಪಡ್ಡಿನಂಗಡಿ,ಮಹಮ್ಮದ್ ಕುಂಞ ಗೂನಡ್ಕ ಅಬ್ದುಲ್ ಕಲಾಂ ಸುಳ್ಯ,ನಾಸಿರ್ ಕಟ್ಟೆಕ್ಕಾರ್ಸ್, ಭವಾನಿ ಶಂಕರ್ ಕಲ್ಮಡ್ಕ, ಸುದ್ದಿ ಪತ್ರಿಕೆಯ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ನಂದರಾಜ್ ಸಂಕೇಶ್, ಚೇತನ್ ಕಜೆಗದ್ದೆ, ಅಬುಶಾಲಿ ಕೆಎಸ್‌ಆರ್ಟಿಸಿ, ನಝೀರ್ ಶಾಂತಿನಗರ, ಮಶೂದ್ ಗಾಂಧಿನಗರ ಫೈಸಲ್ ಕಟ್ಟೆಕ್ಕಾರ್ ಅಶೀಕ್ ಸುಳ್ಯ  ಸೇರಿದಂತೆ ನೂರಾರು ಮಂದಿ ಗಣ್ಯರುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ರಂಜಾನ್ ಪ್ರಯುಕ್ತ ಇಫ್ತಾರ್ ಕಿಟ್ ನೀಡಿ ಗೌರವಿಸಲಾಯಿತು. ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿ ಕಾರ್ಯಕ್ರಮದ ಸಂಯೋಜಕ ಶಾಹುಲ್ ಹಮೀದ್ ಕುತ್ತಮೊಟ್ಟೆ ಸ್ವಾಗತಿಸಿ,ಶಾಫಿ ಕುತ್ತಮೊಟ್ಟೆ ವಂದಿಸಿದರು

m
[html_block id=”10007″

Related Posts