ಯುಎಇ ಶಾರ್ಜಾದಲ್ಲಿರುವ ಜೆಮ್ಸ್ ಮಿಲೇನಿಯಂ ಸ್ಕೂಲ್ ನ ಮೂರನೇ ತರಗತಿ ವಿದ್ಯಾರ್ಥಿನಿಯಾಗಿರುವ ಇವಾ ಫಾತಿಮಾ ತನ್ನ 9 ವರ್ಷದ ಪ್ರಾಯದಲ್ಲಿ 4 ಗಂಟೆ, 31 ನಿಮಿಷ ಮತ್ತು 38 ಸೆಕೆಂಡುಗಳ ಅವಧಿಯಲ್ಲಿ 6 ಇಂಗ್ಲಿಷ್ ಕಥಾ ಪುಸ್ತಕಗಳನ್ನು ನಿರಂತರವಾಗಿ ಓದಿ ದಾಖಲೆ ನಿರ್ಮಿಸಿದ್ದಾರೆ
ಸುಳ್ಯ : ಎಳೆಯ ವಯಸ್ಸಿನಲ್ಲಿ ತನ್ನ ವಿಶೇಷ ಪ್ರತಿಭೆಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯನ್ನು ಬರೆದುಕೊಂಡ ಇವಾ ಫಾತಿಮಾ ಅವರನ್ನು ಎನ್-ಲೈಟ್ ಎಜುಕೇಶನಲ್ ಸರ್ವಿಸಸ್ ವತಿಯಿಂದ ಸನ್ಮಾನಿಸಲಾಯಿತು

ಯುಎಇ ಶಾರ್ಜಾದಲ್ಲಿರುವ ಜೆಮ್ಸ್ ಮಿಲೇನಿಯಂ ಸ್ಕೂಲ್ ನ ಮೂರನೇ ತರಗತಿ ವಿದ್ಯಾರ್ಥಿನಿಯಾಗಿರುವ ಇವಾ ಫಾತಿಮಾ ತನ್ನ 9 ವರ್ಷದ ಪ್ರಾಯದಲ್ಲಿ 4 ಗಂಟೆ, 31 ನಿಮಿಷ ಮತ್ತು 38 ಸೆಕೆಂಡುಗಳ ಅವಧಿಯಲ್ಲಿ 6 ಇಂಗ್ಲಿಷ್ ಕಥಾ ಪುಸ್ತಕಗಳನ್ನು ನಿರಂತರವಾಗಿ ಓದಿ ದಾಖಲೆ ನಿರ್ಮಿಸಿದ್ದಾರೆ, ವಿಶೇಷ ದಾಖಲೆಯ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪಡೆದುಕೊಂಡಿರುವ ರವರಿಗೆ nLight ಎಜುಕೇಶನಲ್ ಸರ್ವಿಸಸ್ (ರಿ) ಗಾಂಧಿನಗರ ಸುಳ್ಯ ಇದರ ವತಿಯಿಂದ ಸನ್ಮಾನಿಸಲಾಯಿತು, ಪ್ರಸ್ತುತ ಕಾರ್ಯಕ್ರಮವನ್ನು ಹಾಫಿಲ್ ಶೌಕತ್ ಅಲಿ ಸಖಾಫಿ ಉಸ್ತಾದರು ದುವಾ ಆಶೀರ್ವಚನಗಳ ಮೂಲಕ ಉದ್ಘಾಟಿಸಿದರು,

ಈ ಒಂದು ಸಂದರ್ಭದಲ್ಲಿ ಇವಾ ರವರು ತನ್ನ ಸಾಧನೆಗಳ ಹಾದಿಗಳನ್ನು ವಿವರಿಸಿದ್ದಲ್ಲದೆ ಅವರ ಹೆತ್ತವರು ಸಾಮಾಜಿಕ ಕಾರ್ಯಕರ್ತರು ಆಗಿರುವಂತಹ ಬಶೀರ್ ಅರಂಬೂರ್ ರವರು ಮಕ್ಕಳ ಆಸಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಪೋಷಕರ ಕಾಳಜಿಯ ಬಗ್ಗೆ ಕಿವಿಮಾತುಗಳನ್ನಾಡಿದರು ಕಾರ್ಯಕ್ರಮದಲ್ಲಿ ಹಾಜಿ ಎಸ್.ಎ ಹಮೀದ್ , ಸಾದಿಕ್ ಯಾಹ್ಯಾ ಮತ್ತು nLight ಸಾರಥಿಗಳು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು





m

