ಸರಕಾರದ ಶಿಷ್ಟಾಚಾರ ಪದ್ದತಿಯನ್ನು ಚಿಲ್ಲರೆ ರಾಜಕೀಯ ಎಂದು ಟೀಕೆ ಮಾಡಿದ ಒಬ್ಬರು ಒಂದು ರಾಷ್ಟ್ರೀಯ ಪಕ್ಷದ. ಮಂಡಲ ಅಧ್ಯಕ್ಷರಾಗಲು ಅರ್ಹರೇ ? : ಹಮೀದ್ ಕುತ್ತಮೊಟ್ಟೆ
ಸುಳ್ಯ : ಅಧಿಕಾರಿಗಳು ಸರಕಾರದ ಶಿಷ್ಟಾಚಾರವನ್ನು ಪಾಲಿಸದೆ. ಸರಕಾರದ ಮಟ್ಟದಲ್ಲಿ ಕಾರ್ಯಕ್ರಮ ರದ್ದು ಗೊಂಡ ಘಟನೆ ಸುಳ್ಯದಲ್ಲಿ ನಡೆದು ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರ ನಡುವೆ ಮಾತಿನ ವರಸೆ ಶುರುವಾಗಿದೆ

ಸರಕಾರದ ಮಟ್ಟದಲ್ಲಿ ಕಾರ್ಯಕ್ರಮ ರದ್ದು ಗೊಂಡ ಹಿನ್ನೆಲೆಯಲ್ಲಿ ಇದು ಕಾಂಗ್ರೆಸ್ ನ ಚಿಲ್ಲರೆ ರಾಜಕೀಯ ಎಂದು ಆಕ್ರೋಶ ವ್ಯಕ್ತಪಡಿಸಿ ಟೀಕೆ ಮಾಡಿದ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮಾತಿಗೆ ಕಾಂಗ್ರೆಸ್ ಮುಖಂಡ ಹಮೀದ್ ಕುತ್ತಮೊಟ್ಟೆ ಮಾತಿನ ಮೂಲಕ ತಿರುಗೇಟು ನೀಡಿದ್ದಾರೆ

ಸರಕಾರದ ಶಿಷ್ಟಾಚಾರ ಉಲ್ಲಂಘನೆ ಮಾಡಿ ಕಾರ್ಯಕ್ರಮ ಮಾಡಲು ಹೊರಟ ಬಿಜೆಪಿ ಯವರಿಗೆ ಇದೀಗ ಮುಖಭಂಗ ವಾಗಿದ್ದು! ಪ್ರಜಾಪ್ರಭುತ್ವದ ಅಡಿಯಲ್ಲಿ ರೂಪುಗೊಂಡ ಸರಕಾರದ ಶಿಷ್ಟಾಚಾರ ಪದ್ದತಿಯನ್ನು ಚಿಲ್ಲರೆ ರಾಜಕೀಯ ಎಂದು ಟೀಕೆ ಮಾಡಿದ ಒಬ್ಬರು ಒಂದು ರಾಷ್ಟ್ರೀಯ ಪಕ್ಷದ. ಮಂಡಲ ಅಧ್ಯಕ್ಷರಾಗಲು ಅರ್ಹರೇ ? ಎಂಬ ಪ್ರಶ್ನೆ ಉದ್ಭವಿಸುತ್ತದೆ
ಕಾಂಗ್ರೆಸ್ ಏನಿದ್ದರೂ ಅಭಿವೃದ್ಧಿಪರ, ಬಿಜೆಪಿ ಗೆ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲಾ ಅವರು ಭಾವನಾತ್ಮಕವಾಗಿ ಚುನಾವಣೆ ಗೆಲ್ತಾರೆ ಅಷ್ಟೆ !
ಗುತ್ತಿಗಾರಿನ ಸಾರ್ವಜನಿಕ ಕೊಳವೆ ಬಾವಿಯ ವಿಷಯದಲ್ಲಿ ಚಿಲ್ಲರೆ ಮತ್ತು ಕಂತೆ ! ಯ ವಿಚಾರ ಸುಳ್ಯ ಜನತೆಗೆ ತಿಳಿದಿದೆ ಎಂದು ಹಮೀದ್ ಕುತ್ತಮೊಟ್ಟೆ ಪ್ರತಿಕ್ರಿಯಿಸಿದ್ದಾರೆ





m

