Featured, ಅಂಕಣ, ಸ್ಥಳೀಯ

ಬೀಫ್ ಕರಿ ಪರೋಟ ಕ್ಕಾಗಿ ಆತ್ಮಹತ್ಯೆ ಗೆ ಯತ್ನ; ಪೋಲಿಸ್ ಮತ್ತು ಅಗ್ನಿಶಾಮಕ ದಳದಿಂದ ರಕ್ಷಣೆ

ಕಾಸರಗೋಡು: ಇಲ್ಲಿನ ನೀಲೇಶ್ವರದ ಕಿನಾನೂರು-ಕರಿಂತಳ ಉಮ್ಮಚಿಪಳ್ಳದ ಶ್ರೀಧರನ್ ಎಂಬ ಯುವಕನು ಪೊರೊಟ ಮತ್ತು ಬೀಫ್ ಕರಿ ಕೋರಿ ಪಕ್ಕದ ಮನೆ ಮೇಲೆ ಹತ್ತಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಏ.7 ರಂದು ನಡೆದಿದೆ.

ಈತ ಅಯ್ಯಪ್ಪ ಎಂಬುವವರ ಮನೆಯ ಮೇಲ್ಛಾವಣಿಗೆ ಹತ್ತಿ ಆತ್ಮಹತ್ಯೆ ಯತ್ನಿಸಿ ಗೊಂದಲವನ್ನು ಉಂಟುಮಾಡಿದ್ದಾರೆ.

ಸ್ಥಳೀಯರಿಂದ ಮಾಹಿತಿ ಪಡೆದ ನೀಲೇಶ್ವರ ಪೊಲೀಸ್ ಮತ್ತು ಅಗ್ನಿಶಾಮಕ ದಳವು ಸ್ಥಳಕ್ಕೆ ದಾವಿಸಿ ಯುವಕನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ.

ಯುವಕನಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇದೆಯೆಂದು ಪೊಲೀಸರು ತಿಳಿಸಿದ್ದಾರೆ. ಅವನ ಬೇಡಿಕೆಯಂತೆ ಪೊಲೀಸರು ಅವನಿಗೆ ಬೀಫ್ ಮತ್ತು ಪೊರೊಟವನ್ನು ಖರೀದಿಸಿ ನೀಡಿ ಸಮಸ್ಯೆಯನ್ನು ಸದ್ಯಕ್ಕೆ ಪರಿಹರಿಸಿದ್ದಾರೆ.

ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಮಾನಸಿಕ ಆರೋಗ್ಯ ತಜ್ಞರ ಸಹಾಯವನ್ನು ಪಡೆಯಿರಿ. ಅಥವಾ ಆತ್ಮೀಯರೊಂದಿಗೆ ಸಮಾಲೋಚನೆ ನಡೆಸಿ.

m

Related Posts