Featured, ಅಂಕಣ, ಸ್ಥಳೀಯ

ವಕ್ಫ್ ಕಾಯ್ದೆ ವಿರುದ್ದ ಐತಿಹಾಸಿಕ ಶಾಂತಿಯುತ ಪ್ರತಿಭಟನೆ : ಸುಳ್ಳು ಸುದ್ದಿ ಬಿತ್ತರಿಸಿದ ಪಬ್ಲಿಕ್ ಟೀವಿ

ಸುಳ್ಳು ಸುದ್ದಿಗಳು ಸಮಾಜದಲ್ಲಿ ಗೊಂದಲ ಮತ್ತು ಅಪನಂಬಿಕೆ ಸೃಷ್ಟಿಸುವ ಗಂಭೀರ ಸಮಸ್ಯೆಯಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಗಳು ಹರಿದಾಡುವುದು ಉತ್ತರ ಪತ್ಯುತ್ತರ ಸಾಮಾನ್ಯ ಆದರೆ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಎಂದು ಕರೆಸಿಕೊಳ್ಳುವ ಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳು ಅವಲೋಕಿಸದೆ ಸುಳ್ಳು ಸುದ್ದಿ ಪ್ರಚಾರ ಮಾಡಿದರೆ ಹೇಗೆ?….

ಮಂಗಳೂರಿನಲ್ಲಿ ನಡೆದ ಐತಿಹಾಸಿಕ ಪ್ರತಿಭಟನೆ, ಇಲ್ಲಿ ಅಹಿತಕರ ಘಟನೆ ನಡೆಯಬೇಕು, ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದ ಪಬ್ಲಿಕ್ ಟಿ ವಿ ತಂಡಕ್ಕೆ ಶಾಂತಿಯ,ಕ್ರಾಂತಿಯ ಪ್ರತಿಭಟನೆ ನುಂಗಲಾರದ ತುತ್ತಾಗಿತ್ತು … ಇನ್ನೇನು…ಎಂಬಂತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುವನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದನ್ನು ಗೊತ್ತಿದ್ದರೂ..!! ಗಾಯಾಳು ಮುಸ್ಲಿಂ ಎಂದು ಗೊತ್ತಾದ ತಕ್ಷಣ ಪಬ್ಲಿಕ್ ಟಿ ವಿ ತನ್ನ ದೈನಂದಿನ ವಕ್ರದೃಷ್ಟಿ ಬೀರಿ ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ – ಪ್ರತಿಭಟನಾಕಾರರಿಗೆ ಎಸಿಪಿ ಕಾರಿನಲ್ಲೇ ಡ್ರಾಪ್l! ಸುಳ್ಳು ಸುದ್ದಿ ಹರಡಿದ್ದಾರೆ ಮಾತ್ರವಲ್ಲ ಅಧಿಕಾರಿ ಎಸಿಪಿ ಸಹ ಮುಸ್ಲಿಂ ಆದಕಾರಣ ವರದಿಗೆ ಉಪ್ಪು ಖಾರ ಹಾಕಿ ಸಮಾಜದಲ್ಲಿ, ಸಾರ್ವಜನಿಕ ವಲಯದಲ್ಲಿ, ಸುಳ್ಳು ಸುದ್ದಿ ಹರಡಿ ಗೊಂದಲ ಸೃಷ್ಟಿಸಿ, ಗಲಭೆ ನಡೆಸುವ ಪ್ರಯತ್ನ ಎಂದೇ ಹೇಳಬಹುದು!

ನಿಜಕ್ಕೂ ಏನಾಗಿದೆ ಈ ಪಬ್ಲಿಕ್ ಟಿ ವಿ ತಂಡಕ್ಕೆ ? ಯಾವುದೇ ಆರೋಪಗಳು ಬಂದರೆ ಮಾಧ್ಯಮ ಅದನ್ನು ನ್ಯಾಯಯುತವಾಗಿ ಪರಿಶೀಲಿಸುವುದು ಅಗತ್ಯ.

ನಿಜವಾಗಿಯೂ ಪಬ್ಲಿಕ್ ಟಿ ವಿ ಅಂದಿನ ಪ್ರತಿಭಟನೆ ಕುರಿತು ವರದಿಯನ್ನು ಮಾಡಬೇಕಿತ್ತು, ನಿಜವಾಗಿಯೂ ಶಾಂತಿಯ,ಕ್ರಾಂತಿಯ ಸಂದೇಶ ನೀಡಿದ ಐತಿಹಾಸಿಕ ಪ್ರತಿಭಟನೆ ಹೇಗೆ ಸಾಧ್ಯವಾಯಿತು ? ಎಂಬುವುದರ ಬಗ್ಗೆ ಸ್ಪಷ್ಟ ವರದಿಮಾಡ ಬಹುದಿತ್ತು ಅದು ಬಿಟ್ಟು ಸುಳ್ಳು ಸುದ್ದಿ ಹರಡಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸಿದ !? ಈ ಪಬ್ಲಿಕ್ ಟಿ ವಿ ತಂಡವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಅಂದರೆ ಅಪಹಾಸ್ಯ ಆಗಬಹುದು

 : ರಶೀದ್ ಜಟ್ಟಿಪಳ್ಳ ಇವಾರ್ತೆ ಸುಳ್ಯ

ಮಂಗಳೂರು ನಗರ ಪೊಲೀಸ್ ಪತ್ರಿಕಾ ಪ್ರಕಟಣೆ

ದಿನಾಂಕ: 18-04-2025 ರಂದು ಮಂಗಳೂರು ನಗರದ ಅಡ್ಯಾರ್ ಕಣ್ಣೂರು ಬಳಿಯ ಷಾ ಗಾರ್ಡನ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಶದ ಸಮಯದಲ್ಲಿ ಪೊಲೀಸ್ ಅಧಿಕಾರಿಯವರ ಸರ್ಕಾರಿ ಕಾರನ್ನು ಪ್ರತಿಭಟನಕಾರರು ಬಳಸಿರುವ ಕುರಿತು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿರುತ್ತದೆ.

ಈ ಕುರಿತು ಸ್ಪಷ್ಟಿಕರಿಸುವುದೇನೆಂದರೆ, ದಿನಾಂಕ 18-04-2025 ರಂದು ಸಂಚಾರ ಬಂದೋಬಸ್ತು ಕರ್ತವ್ಯದಲ್ಲಿದ್ದ ಎ.ಸಿ.ಪಿ ಸಂಚಾರ ಉಪ ವಿಭಾಗರವರು. ಪಡೀಲ್ ಕಡೆಯಿಂದ ಕಾರ್ಯಕ್ರಮದ ಸ್ಥಳದ ಕಡೆಗೆ ತಮ್ಮ ಇಲಾಖಾ ವಾಹನ ಮೂಲಕ ಬಂದು ಇಳಿದು ಅಲ್ಲಿ ಮುಖ್ಯ ದ್ವಾರದ ಬಳಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿ. ನಂತರ ಕಾರ್ಯಕ್ರಮ ಮುಗಿದ ಬಳಿಕ ಎಸಿಪಿ ರವರು ಮಂಗಳೂರು ನಗರ ಕಡೆಗೆ ಸಂಚಾರ ನಿಯಂತ್ರಿಸುವ ಕರ್ತವ್ಯಕ್ಕೆ ಬರಲು ಹೆದ್ದಾರಿಯ ರಸ್ತೆ ವಿಭಜಕ ದಾಟಿ ಅವರ ಚಾಲಕರಿಗೆ ಮುಂದೆ ಅಡ್ಯಾರು ಕಟ್ಟೆ ಬಳಿ ಯು ಟರ್ನ್ ಮಾಡಿ ವಾಪಾಸ್ಸು ಬರಲು ಸೂಚಿಸಿರುತ್ತಾರೆ. ವಾಹನ ಚಾಲಕರಾದ ಶ್ರೀ ಬೈರೇಗೌಡರವರು ಅಡ್ಯಾರು ಕಟ್ಟೆ ಬಳಿ ಬ್ಯಾರಿಕೇಡ್ ಹಾಕಿದ್ದ ಕಾರಣ ಸಹ್ಯಾದ್ರಿ ಕಡೆ ಹೋಗುತ್ತಿದ್ದರು. ಸ್ವಲ್ಪ ಸಮಯದ ಹಿಂದೆ ಅಡ್ಯಾರ್ ಗಾರ್ಡನ್ ಬಳಿ ಸುಮಾರು 19.30 ಗಂಟೆಗೆ ಟೆಂಪೋ ಟ್ರಾವೆಲರ್ ವಾಹನ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕಾರ್ಯಕ್ರಮ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ(16 ವರ್ಷ) ಡಿಕ್ಕಿ ಹೊಡೆದು ಬಲಕಾಲಿನ ಪಾದದ ಮೇಲೆ ಚಕ್ರ ಹಾದುಹೋದ ಪರಿಣಾಮ ಗಾಯಗೊಂಡು ಸುಮಾರು ಜನ ಸೇರಿದ್ದರು. ಅಲ್ಲೇ ಪಕ್ಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಗಳು ಮತ್ತು ಗಾಯಾಳುವಿನ ಕಡೆಯವರು ಎಸಿಪಿ ರವರ ವಾಹನವನ್ನು ನಿಲ್ಲಿಸಿ. ಗಾಯಾಳುವನ್ನು ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿರುತ್ತಾರೆ. ನಂತರ ಸದರಿ ಗಾಯಾಳುವನ್ನು ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಿಸಿದ್ದಾಗಿರುತ್ತದೆ. ಅಪಘಾತ ಮಾಡಿರುವ ಟೆಂಪೋ ಟ್ರಾವೆಲರ್ ಸಂಖ್ಯೆ: ಕೆ.ಎ. 70 9888 ಮತ್ತು ಅದರ ಚಾಲಕನನ್ನು ಸಿಬ್ಬಂದಿ ಆನಂದ ಎಂಬವರ ಮೂಲಕ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದು, ಇದರ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

m

Related Posts