Featured, ಇತರೆ, ಸ್ಥಳೀಯ

ಲಕ್ಷಾಂತರ ಜನರು ಒಗ್ಗೂಡಿದ ಪ್ರತಿಭಟನಾ ಸಭೆಯಲ್ಲಿ ಮೊಳಗಿದ ಕ್ರಾಂತಿ ಗೀತೆಯ ರಚನೆಗಾರ ಇವರೇ!!!

ಇತಿಹಾಸ ನಿರ್ಮಾಣವಾದ ಐತಿಹಾಸಿಕ ಪ್ರತಿಭಟನೆ, ಲಕ್ಷ ಲಕ್ಷ ಜನರ ಜನಸಾಗರ, ವಕ್ಫ್ ಕಾಯ್ದೆತಿದ್ದುಪಡಿ ವಿರುದ್ಧದ ಐಕ್ಯತೆಯ ಶಾಂತಿ ಯೊಂದಿಗೆ ಕ್ರಾಂತಿಯ ಸಂದೇಶ! ಶಾಂತಿಯ ಕ್ರಾಂತಿಗೆ ನಿಲುಕದ ಲೇಖನಿಯ ಮೊನಚು….!

ತಾನು ! ಅಧಿಕಾರ ವಹಿಸಿಕೊಂಡ ನಂತರದಿಂದ ವಿವಿಧ ರೀತಿಯಲ್ಲಿ ಮುಸ್ಲಿಮ್ ಸಮುದಾಯದ ಹಿಂದೆ ಬಿದ್ದು ಸಮುದಾಯದ ಅಸ್ತಿತ್ವವನ್ನು ಬಿಗಡಾಯಿಸಲು ಕುತಂತ್ರವನ್ನು ಸೃಷ್ಟಿಸಿ ಬಿರುಕು ಮೂಡಿಸಿ ಅತಂತ್ರ ಗೊಳಿಸಲು ಸಂವಿಧಾನ ವಿರೋಧಿ ನಡೆಯೊಂದಿಗೆ ಶ್ರಮ ಶಕ್ತಿ ಪ್ರಯತ್ನಿಸುವ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧದ ಪ್ರತಿಭಟನೆಯಲ್ಲಿ ಮೊಳಗಿದ ಕ್ರಾಂತಿಯ ಕಿಚ್ಚು ತುಂಬುವ ಕ್ರಾಂತಿ ಗೀತೆಯ ರಚನೆಕಾರ ಸುಳ್ಯದ ಉದಯೋನ್ಮುಖ ಬರಹಗಾರರಾಗಿರುವ ಹಾಫಿಳ್ ಶುಹೈಬ್ ಜೀರ್ಮುಕ್ಕಿ ಇವರಾಗಿರುತ್ತಾರೆ.
ಇವರು ಸುಳ್ಯ ತಾಲೂಕಿನ ಎಲಿಮಲೆ ಜಮಾಅತಿಗೆ ಸೇರಿದ ಜೀರ್ಮುಕ್ಕಿ ಮರ್ಹೂಮ್ ಅಹಮದ್ ಕುಂಞಿ ಮತ್ತು ಆಸಿಯಾ ದಂಪತಿಗಳ ಪುತ್ರ. ಸದ್ಯ ಮಿತ್ತೂರು *ಕೆಜಿಎನ್* (KGN) ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಉದಯೋನ್ಮುಖ ಬರಹಗಾರರಾಗಿರುವ ಇವರ ಹಲವಾರು ಸಾಹಿತ್ಯ ಕೃತಿಗಳು ನಾಡಿನ ಪ್ರಮುಖ ವೇದಿಕೆಗಳಲ್ಲಿ ಹಾಡುಗಳಾಗಿ ಮೊಳಗಿವೆ. ಹಾಫಿಳ್ ಶುಹೈಬ್ ಅವರು ಸಾಮಾಜಿಕ ಮಾಧ್ಯಮದ (ಸೋಷಿಯಲ್ ಮೀಡಿಯಾ) ಪ್ರಮುಖ ಬರಹಗಾರರಾದ ಸಾಹುಕಾರ್ ಅಚ್ಚು ಪುತ್ತೂರು ಮಾಡಾವು ಅರಿಕ್ಕಿಲ್ ಮುದರ್ರಿಸ್ ಮತ್ತು ಜುನೈದ್ ಸಖಾಫಿ ಜೀರ್ಮುಕ್ಕಿ ಅವರ ಕಿರಿಯ ಸಹೋದರ

ಕ್ರಾಂತಿ ಗೀತೆಯು ಹೀಗಿದೆ.
ಮಣ್ಣಕಣದಲೂ ಸಾಮರಸ್ಯದ
ಘಮವೆ ಬೆರೆತ ನಾಡು
ಮಣ್ಣಿನ ಗುಣವ ಮರೆತು ದೇಶವಿದು
ಮೆರೆಯುತಿಹುದ ನೋಡು ||2||

ಮಣ್ಣಿನಿಂದಾದ ಮಡಿಕೆ ಮಣ್ಣಿಗೇ
ಅನ್ಯವಾದುದೆಂದು
ಶಾಂತಿ ಅಳಿಸುವ ದುಷ್ಟ ಹುನ್ನಾರ
ಜಗವ ತೊರೆವುದೆಂದು
||ಮಣ್ಣಕಣದಲೂ||

ಧರ್ಮ ಬೇದಗಳು ಅಳಿದು ದೇಶದಲಿ
ಬೆಳಗುತಿರಲಿ ನ್ಯಾಯ
ಜಾತಿಯಲಿ ನೀತಿ ಹೂತು ಬಿಡುವುದು
ದೇಶಕೆ ಅಪಾಯ ||2||

ಶೋಷಣೆಯೆ ನಿತ್ಯ ಮಂತ್ರವಾದರೆ
ಶಾಂತಿ ಉದಯವೆಲ್ಲಿ
ಪೂರ್ವಜರು ಧರ್ಮ ಮರೆತು ಕಟ್ಟಿದ
ಸ್ನೇಹ ರಾಜ್ಯವೆಲ್ಲಿ
||ಮಣ್ಣಕಣದಲೂ||

ನಮ್ಮ ನೆಲಗಳನು ಅನ್ಯರಾಳುವ
ವಕ್ಫ್ ನೀತಿಯೇಕೆ
ನಮ್ಮ ನಂಬಿಕೆಯ ಬಗ್ಗು ಬಡಿಯುವ
ತಿದ್ದುಪಡಿಯು ಬೇಕೆ||2||

ಐಕ್ಯ ತೋರಣವ ಕಟ್ಟುವ
ಸಂವಿಧಾನವೂ ಉಳಿಯಲಿ
ಸಭ್ಯ ಭಾರತದ ಎದೆಯಲಿ
ಮೈತ್ರಿಭಾವವು ಸುಳಿಯಲಿ
||ಮಣ್ಣಕಣದಲೂ||

ಗಾಂಧಿ ಆಝಾದ್ ನೆಟ್ಟ ನೈತಿಕತೆ
ನೆಲವ ಕಚ್ಚದಿರಲಿ
ಭ್ರಾಂತಿ ಧರೆಗುರುಳಿ ದಟ್ಟ ಸೌಹಾರ್ದ
ಎಲ್ಲು ಹುಟ್ಟಿಬರಲಿ ||2||

ಧರ್ಮ ದ್ವೇಷಗಳ ಮರೆತು ದೇಶದಲಿ
ಪ್ರೀತಿ ಅರಳುತಿರಲಿ
ಧರ್ಮ ನೈತಿಕತೆ ಅಳಿಯದಿರಲು
ಧಿಕ್ಕಾರ ಮೊಳಗುತಿರಲಿ
||ಮಣ್ಣಕಣದಲೂ||

-ಹಾಫಿಳ್ ಶುಹೈಬ್ ಜೀರ್ಮುಕ್ಕಿ

m

Related Posts