Featured, ಅಂಕಣ, ಸ್ಥಳೀಯ

ಪಾಕಿಸ್ತಾನದ ಭಯೋತ್ಪಾದಕ ನೆಲೆ ಮೇಲೆ ದಾಳಿ ದ್ವಂಸ ಭಯೋತ್ಪಾದಕರ ಮಾರಣಹೋಮ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಸಂತಸ ಶ್ಲಾಘನೆ :

ಪಹಲ್ಗಮ್ ದಾಳಿಗೆ ಪ್ರತೀಕರವಾಗಿ ಭಾರತದ “ಆಪರೇಷನ್ ಸಿಂದೂರ” ಮುಖಾಂತರ ಪಾಕಿಸ್ತಾನದ ಭಯೋತ್ಪಾದಕರ ಮಾರಣ ಹೋಮ ಮತ್ತು ಭಯೋತ್ಪಾದಕರ ನೆಲೆಯನ್ನು ದ್ವಂಸ ಗೊಳಿಸಿದ ಭಾರತ ಸೈನ್ಯಕ್ಕೆ ಸಂಪೂರ್ಣ ಬೆಂಬಲ ಪರಮಾಧಿಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಹಕರಿಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗು ಕೇಂದ್ರ ಸರಕಾರದ ಸಂಬಂಧಪಟ್ಟ ಎಲ್ಲರನ್ನು ಅಭಿನಂದಿಸುತ್ತೇನೆ ಸೇನೆಯ ಕಾರ್ಯ ಅತೀ ಅಗತ್ಯದ್ದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಶ್ಲಾಘಿಸಿದರು.

     ದೇಶದ ಸಾರ್ವಭೌಮತೆ ಅಖಂಡತೆಯನ್ನು ಕಾಪಾಡಲು ದೇಶದ ಪ್ರತಿಯೊಬ್ಬ ನಾಗರಿಕರು ತಯಾರಾಗಿದ್ದು ಯುದ್ಧ ಸಂಭವಿಸಿದಲ್ಲಿ ಪಾಕಿಸ್ತಾನವನ್ನು ಸಂಪೂರ್ಣ ನಾಶ ಮಾಡಿ ಭಾರತದ ತೆಕ್ಕೆಗೆ ಅಗತ್ಯವಿರುವ ಸ್ಥಳವನ್ನು ವಶಪಡಿಸುವ ಕೆಲಸ ಆಗಬೇಕು ಇನ್ನೂ ಮುಂದೆ ಪಾಕಿಸ್ತಾನ ಭಾರತದ ತಂಟೆಗೆ ಬಾರದ ರೀತಿಯಲ್ಲಿ ನಾಶಮಾಡಿ ಶತ್ರು ದೇಶಕ್ಕೆ ಮತ್ತು ಭಯೋತ್ಪಾದಕರಿಗೆ ಅಂತಿಮ ಮೊಳೆ ಹೊಡೆಯುವಂತಾಗಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಆಶಿಸಿದರು.

m

Related Posts