Featured, ಅಂಕಣ, ಸ್ಥಳೀಯ

ಜಟ್ಟಿಪಳ್ಳ ಮದ್ರಸ ವಿದ್ಯಾರ್ಥಿಗಳಿಂದ ದೇಶದ ರಕ್ಷಣೆ ಮತ್ತು ವಿಜಯಕ್ಕೆ ಹಾಗೂ ನಾಡಿನ ನೆಮ್ಮದಿಗಾಗಿ ವಿಶೇಷ ಪ್ರಾರ್ಥನೆ

ಭವ್ಯ ಭಾರತದ ಶಾಂತಿ,ಸೌಹಾರ್ಧತೆಯ ಸುವ್ಯವೆಸ್ಥೆಗೆ ಧಕ್ಕೆ ತಂದ ಉಗ್ರಗಾಮಿಗಳನ್ನು ಸದೆಬಡಿಯಲು ಹಾಗೂ ಭಯೋತ್ಪಾದನಾ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಲು ಈಗಾಗಲೇ ಭಾರತವು ತನ್ನ ಎಲ್ಲಾ ಶಕ್ತಿಗಳನ್ನು ಪ್ರಯೋಗಿಸುತ್ತಿದೆ

ಅದರಂತೆ ನಮ್ಮ ದೇಶ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧದ ಸನಿಹದಲ್ಲಿದೆ.

ನಮ್ಮ ದೇಶದ ರಕ್ಷಣೆ ಮತ್ತು ವಿಜಯಕ್ಕೆ ಪಣತೊಡುವುದು ಪ್ರತಿಯೊಬ್ಬ ಭಾರತದ ಪ್ರಜೆಯ ಕರ್ತವ್ಯವಾಗಿದೆ

ಈ ನಿಟ್ಟಿನಲ್ಲಿ ದೇಶದ ರಕ್ಷಣೆ ಮತ್ತು ವಿಜಯಕ್ಕಾಗಿ ಹಯಾತುಲ್ ಇಸ್ಲಾಂ ಕಮಿಟಿ ರಿ.ಜಟ್ಟಿಪಳ್ಳದ ಬುಸ್ತಾನುಲ್ ಉಲೂಂ ಮದ್ರಸ ವಿದ್ಯಾರ್ಥಿಗಳಿಂದ ವಿಶೇಷ ಪ್ರಾರ್ಥನೆ ನಡೆಯಿತು.ಇದೇ ಸಂಧಂರ್ಭ ಮದ್ರಸ ಮುಖ್ಯೋಪಾದ್ಯಾಯ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕರವರು ದೇಶ ಪ್ರೇಮ ಹಾಡು ಮಕ್ಕಳಿಗೆ ಹೇಳಿ ಕೊಡುವುದರ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರು.ಇತ್ತೀಚಗೆ ಜಿಲ್ಲೆಯಲ್ಲಿ ನಡೆದ ಅನಿಷ್ಠ ಸಂಭವಗಳಿಂದ ಭಯ ಭೀತರಾದ ಜನ ಸಾಮಾನ್ಯರಿಗೆ ನೆಮ್ಮದಿಯ ಬದುಕು ದೊರೆಯಲು ಮತ್ತು ನಾಡಿನ ಕ್ಷೇಮಾಭಿವೃದ್ಧಿಗಾಗಿ ಪ್ರಾರ್ಥನೆ ಮಾಡಲಾಯಿತು.ಅದ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿಯವರು ಸಹಕರಿಸಿದರು.

m

Related Posts