ಆಪರೇಷನ್ ಸಿಂದೂರ್ ಮುಖಂತರ ಮಾಡಿದ ಕಾರ್ಯಾಚರಣೆ ಯಶಸ್ವಿಯಾಗಿದೆ ಭಯೋತ್ಪಾದನೆ ಮಟ್ಟಹಾಕುವಲ್ಲಿ ಸೈನಿಕರು ಯಶಸ್ವಿಯಾಗಿದ್ದು ಮುಂದೆ ದೇಶದ ಜನರು ಒಟ್ಟಾಗಿ ಇದ್ದು ಎಲ್ಲರು ಅವರವರ ಧರ್ಮದ ಪೂಜಾ ಸ್ಥಳಗಳಲ್ಲಿ ವಿಶೇಷ ಪ್ರಾರ್ಥನೆ ಮಾಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಕರೆ ನೀಡಿದರು,ಸುಳ್ಯ ಬ್ಲಾಕ್ ಯುವಕ ಕಾಂಗ್ರೆಸ್ ವತಿಯಿಂದ ನಡೆದ ವಿಜಯೋತ್ಸವದಲ್ಲಿ ಮಾತನಾಡಿ ದೇಶದ ಎಲ್ಲಾ ಪ್ರಧಾನ ಮಂತ್ರಿಗಳು ಪಾಕಿಸ್ತಾನದ ವಿರುದ್ಧ ಸೈನ್ಯಕ್ಕೆ ಪೂರ್ಣ ಸ್ವತಂತ್ರ ನೀಡಿದರು 1971 ಉಕ್ಕಿನ ಮಹಿಳೆ ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶ ಬೆರ್ಪಡಿಸಿದ ಕೀರ್ತಿ ಎಂದರು ಮುಂದೆ ದೇಶದ ಜನರು ಒಗ್ಗಟ್ಟಾಗಿ ಪಾಕಿಸ್ತಾನವನ್ನು ಬಗ್ಗು ಬಡಿದು ಭಯೋತ್ಪಾದಕರನ್ನು ಮಟ್ಟಹಾಕಿ ಶಾಶ್ವತ ಪರಿಹಾರ ಮಾಡುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿ ಸೈನಿಕರನ್ನು ಅಭಿನಂದಿಸಿದರು ಕಾರ್ಯಕ್ರಮದಲ್ಲಿ ಯುವಕ ಕಾಂಗ್ರೆಸ್ ಅಧ್ಯಕ್ಷರಾದ ಚೇತನ್ ಕಜೆಗದ್ದೆ ಅಧ್ಯಕ್ಷತೆ ವಹಿಸಿದರು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್, ರಾಧಾಕೃಷ್ಣ ಬಳ್ಳೂರ್,ವೆಂಕಪ್ಪ ಗೌಡ, ಲಕ್ಷ್ಮೀಶ್ ಗಬ್ಬಳಡ್ಕ, ಗೋಕುಲ್ ದಾಸ್ ಮೊದಲಾದವರು ಮಾತನಾಡಿದರು,ಭವಾನಿ ಶಂಕರ ಕಾರ್ಯಕ್ರಮ ನಿರೂಪಿಸಿದರು ಸೈನಿಕರಿಗೆ ಮತ್ತು ಭಾರತ ಮಾತೆಗೆ ಜೈಕಾರ ಕೂಗಿ ಕೊನೆಯಲ್ಲಿ ರಾಷ್ಟ್ರ ಗೀತೆಯೊಂದಿಗೆ ಕೊನೆಗೊಂಡಿತು ಸಲೀಂ ಪೆರುಂಗೋಡಿ ಸಿಹಿತಿಂಡಿ ನೀಡಿದರು.





m
