Featured, ಅಂಕಣ, ಸ್ಥಳೀಯ

ತೋಡಿನಂತಿರುವ ರೋಡು ಅಚ್ಚಾನಕ್ಕಾಗಿ ರಸ್ತೆಯ ಗುಂಡಿಗೆ ಬಿದ್ದು ಸ್ಕೂಟರ್ ಪಲ್ಟಿ: ವೀಡಿಯೋ ಸಹಿತ

ಮೇ 23, ಸುಳ್ಯ: ಶ್ರೀ ಚೆನ್ನಕೇಶವ ದೇವಸ್ಥಾನ ಬಳಿಯ ರಸ್ತೆಯಲ್ಲಿನ ಗುಂಡಿಗೆ ಬಿದ್ದು ಸ್ಕೂಟರ್ ಪಲ್ಟಿಯಾಗಿರುವ ಘಟನೆ ಇದೀಗ ಉಂಟಾಗಿದೆ.

ಶ್ರೀ ಚೆನ್ನಕೇಶವ ದೇವಸ್ಥಾನ ಬಳಿಯ ರಸ್ತೆಯು ತೀವ್ರ ಹದಗೆಟ್ಟಿದ್ದು ಮಳೆ ಬಂದ ಪರಿಣಾಮ ರಸ್ತೆಯಲ್ಲಿ ನೀರು ತುಂಬಿಕೊಂಡು ಹೊಂಡ ಯಾವುದು ರಸ್ತೆ ಯಾವುದು ಎಂದು ತಿಳಿಯದ ಪರಿಸ್ಥಿತಿ ಎದುರಾಗಿದೆ.

ಇದು ಪ್ರಯಾಣಿಕರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಇದೇ ದಿನ ರಾತ್ರಿ ಸುರಿಯುತ್ತಿದ್ದ ಮಳೆಯ ಮದ್ಯ ಸ್ಕೂಟರ್ ಸವಾರ ಪ್ರಯಾಣ ಮಾಡುತ್ತಿದ್ದಾಗ ಅಚ್ಚಾನಕ್ಕಾಗಿ ರಸ್ತೆಯಲ್ಲಿನ ಹೊಂಡಕ್ಕೆ ಬಿದ್ದು ಗಾಡಿ ಸ್ಕಿಡ್ ಆಗಿ ಅಪಘಾತ ಉಂಟಾಯಿತು. ಅದೃಷ್ಟವಶಾತ್ ಸವಾರನಿಗೆ ಯಾವುದೇ ಗಂಭೀರ ಪ್ರಮಾಣದ ಗಾಯಗಳು ಉಂಟಾಗಿರುವುದಿಲ್ಲ.

ವೀಡಿಯೋ ನೋಡಿ👇👇👇👇👇ಚಾನಲ್ Subscribe ಮಾಡಿ

m

Related Posts