Featured, ಅಂಕಣ, ರಾಜ್ಯ

“ಮಗಳು ಪ್ರೇಮಿಯೊಂದಿಗೆ ಓಡಿಹೋದ ಆಘಾತ! ಬೂದನೂರಿನಲ್ಲಿ ಕುಟುಂಬದ ಮೂವರ ಸಾಮೂಹಿಕ ಆತ್ಮಹತ್ಯೆ”!

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ದುಃಖದಾಯಕ ಘಟನೆ ನಡೆದಿದೆ. ಮಗಳು ಪ್ರೇಮಿಯೊಂದಿಗೆ ಮನೆ ತೊರೆದಿದ್ದ ಕಾರಣದಿಂದ ಮನಸ್ತಾಪಗೊಂಡ ಕುಟುಂಬದ ಮೂವರು ಸದಸ್ಯರು (ಮಹದೇವಸ್ವಾಮಿ, ಅವರ ಪತ್ನಿ ಮಂಜುಳಾ ಮತ್ತು ಕಿರಿಯ ಮಗಳು ಹರ್ಷಿತಾ) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ಸಂಪಾದಕೀಯ: ಸ್ಪೀಕರ್ ತೀರ್ಮಾನದ ಮಹತ್ವವನ್ನು ಕಳಪೆಗೊಳಿಸುವ ರಾಜಕೀಯ ಪ್ರಯತ್ನಗಳಿಗೆ ಎದುರಾಗಿ: ರಶೀದ್ ಜಟ್ಟಿಪಳ್ಳ

ಘಟನಾ ಸ್ಥಳದ ಬಳಿ ಕುಟುಂಬದ ಬೈಕ್ ಮತ್ತು ಮೂವರ ಚಪ್ಪಲಿಗಳು ಪತ್ತೆಯಾಗಿವೆ. ನಾಪತ್ತೆಯಾದ ಮೂವರ ದೇಹಗಳನ್ನು ಹುಡುಕಲು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧನೆ ನಡೆಸುತ್ತಿದ್ದಾರೆ.

 ಹಿರಿಯ ಮಗಳು ಅರ್ಪಿತಾ ಯುವಕನೊಬ್ಬನೊಂದಿಗೆ ಓಡಿಹೋದ ಸಂದರ್ಭದಲ್ಲಿ ಈ ಆತ್ಮಹತ್ಯೆಗಳು ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

m

Related Posts