ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂನ್ 5 ರಂದು ವಿಶ್ವದಾದ್ಯಂತ ಸುಮಾರು 143 ದೇಶಗಳು ಆಚರಿಸುತ್ತವೆ. ಪರಿಸರದ ಕಾಳಜಿ ಜೊತೆಗೆ ಜನರಿಗೆ ಪರಿಸರದ ಮಹತ್ವ ಸಾರುವ ಹಾಗೂ ಜನರಲ್ಲಿ ಜಾಗೃತಿಗೊಳಿಸುವ ಉದ್ದೇಶದಿಂದ ಇದನ್ನು ವಿಶ್ವಸಂಸ್ಥೆಯು ಸ್ಥಾಪಿಸಿತು. 1974 ರಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ನಿರ್ಧಿಷ್ಟ ಥೀಮ್ ನೊಂದಿಗೆ ಆಚರಿಸುತ್ತಾ ಬಂದಿದೆ. ವಿಶ್ವ ಪರಿಸರ ದಿನಾಚರಣೆಯ ಜಾಗತಿಕ ಆಚರಣೆಯನ್ನು ನಿಯಂತ್ರಿಸುವ ಮುಖ್ಯ ಸಂಸ್ಥೆ ವಿಶ್ವಸಂಸ್ಥೆ.
ಮರ್ಕಝ್ ಕನ್ನಡ ವಿದ್ಯಾರ್ಥಿಗಳ ಒಕ್ಕೂಟ ಕೆ.ಎಸ್.ಒ ಮೂವತ್ತೈದನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಇದು ‘ತ್ರಿವೆಂಟಾ’ ಎಂಬ ಹೆಸರಿನಲ್ಲಿ ಜರುಗಲಿದೆ. ಇದರ ಭಾಗವಾಗಿ ವಿಶ್ವ ಪರಿಸರ ದಿನಾಚರಣೆಯ ದಿನದಂದು 35 ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು
ಈ ಯೋಜನೆಗೆ ಜಾಮಿಅ ಮರ್ಕಝ್‌ನಲ್ಲಿ ಸಂಸ್ಥೆಯ ಸಾರಥಿ ಶೈಖುನಾ ಸುಲ್ತಾನುಲ್ ಉಲಮಾ ಉಸ್ತಾದರು ಗಿಡ ನೆಡುವುದರ ಮೂಲಕ ಅಧಿಕೃತ ಚಾಲನೆ ನೀಡಿದರು.




m
