Featured, ಅಂಕಣ, ಸ್ಥಳೀಯ

ಸುಳ್ಯ ತಾಲೂಕು ಕೇಂದ್ರ ಕ್ಕೆ ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್ ಮಂಜೂರು ಮಾಡುವಂತೆ ಸಚಿವರಿಗೆ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಮನವಿ

ಸುಳ್ಯ ಅತೀ ವೇಗವಾಗಿ ಬೆಳೆಯುವ ತಾಲೂಕು ಕೇಂದ್ರವಾಗಿದ್ದು, ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯ ಗಡಿ ಪ್ರದೇಶ ವಾಗಿರುತ್ತದೆ 

ರಾಜ್ಯದ ಯಾವ ತಾಲೂಕು ಕೇಂದ್ರ ದಲ್ಲಿಯೂ ಇಲ್ಲದಷ್ಟು ಶಿಕ್ಷಣ ಸಂಸ್ಥೆಗಳು ಪೂರ್ವ ಪ್ರಾಥಮಿಕ ದಿಂದ ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್ ಕಾಲೇಜು ಒಳಗೊಂಡಂತೆ ಎಲ್ಲಾ ಕೋರ್ಸ್ ಗಳು ಲಭ್ಯವಿದೆ 

ಆದರೆ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳಿಗೆ, ಉದ್ಯೋಗಾರ್ಥಿ ಗಳಿಗೆ ಸರಿಯಾದ ವಸತಿ ಸೌಕರ್ಯ ವ್ಯವಸ್ಥೆ ಇರುವುದಿಲ್ಲ ಆದ್ದರಿಂದ ಸುಳ್ಯ ತಾಲೂಕು ಕೇಂದ್ರಕ್ಕೆ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ಮಂಜೂರಾತಿ ಗೊಳಿಸಬೇಕಾಗಿ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಬಿ. ಝೆಡ್. ಝಮೀರ್ ಅಹ್ಮದ್ ಖಾನ್ ರವರಿಗೆ ಮನವಿ ಸಲ್ಲಿಸಿರುತ್ತಾರೆ.

m

Related Posts