Featured, ಅಂಕಣ, ಸ್ಥಳೀಯ

ಮೆಸ್ಕಾಂ ಪವರ್ ಮೆನ್ ರವರಿಗೆ ಮಳೆಗಾಲದ ಸುರಕ್ಷತೆಗೆ ಮೊಬೈಲ್ ಕವರ್ ಗಳ ವಿತರಣೆ

ಮಳೆಗಾಲದ ಅವಧಿಯಲ್ಲಿ ಮೆಸ್ಕಾಂ ಶಾಖಾ ಕಚೇರಿ ಮತ್ತು ಗ್ರಾಹಕರಿಂದ ಆಗಾಗ್ಗೆ ಬರುವ ಫೋನ್ ಕರೆಗಳಿಗೆ ಪ್ರತಿಕ್ರಿಯಿಸಬೇಕಾದ ಮೆಸ್ಕಾಂ ಪವರ್ ಮೆನ್ ರವರು ತೀವ್ರ ಮಳೆಗಾಲದಲ್ಲಿ ತಮ್ಮ ಮೊಬೈಲ್ ಫೋನ್ ಗಳು ಹಾಳಾಗುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಮನಗಂಡು ಸುಳ್ಯದ ರಿಂಗರ್ಸ್ ಮೊಬೈಲ್ ಸಂಸ್ಥೆಯ ಮಾಲೀಕರಾದ ಶ್ರೀ ಝಿಯಾದ್ ಕೆರಮೂಲೆ ರವರು ಮಾನವೀಯ ಧೋರಣೆಯಿಂದ ಮೊಬೈಲ್ ಕವರ್ ಗಳನ್ನು ವಿತರಿಸಿ ಮೆಸ್ಕಾಂ ಸಿಬ್ಬಂದಿಗೆ ಬೆಂಬಲ ನೀಡಿದ್ದಾರೆ.

ಇದನ್ನು ಮೆಸ್ಕಾಂ ಇಲಾಖೆಯು ಕೃತಜ್ಞತೆಯಿಂದ ಅಂಗೀಕರಿಸಿದ್ದು, ಈ ಸಹಾಯದಿಂದ ಮಳೆಗಾಲದಲ್ಲಿ ಸಂವಹನ ವ್ಯವಸ್ಥೆ ಸುಗಮವಾಗುವ ನಿರೀಕ್ಷೆಯಿದೆ. ಮೆಸ್ಕಾಂ ಸಿಬ್ಬಂದಿ ಈ ಸಹಕಾರಕ್ಕೆ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ.

m

Related Posts