Featured, ಅಂಕಣ, ಸ್ಥಳೀಯ

ದ.ಕ. ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರಗಳ ಒಕ್ಕೂಟ ರಚನೆ

ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಸಂಚಾಲಕರಾಗಿ ಆಯ್ಕೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎರಡು ನಗರಾಭಿವೃದ್ಧಿ ಹಾಗೂ ಆರು ಸ್ಥಳೀಯ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರುಗಳ ಸಭೆಯನ್ನು ಮಂಗಳೂರು ಡಿಸಿಸಿ ಕಚೇರಿಯಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ 9/11 ಅನುಮೋದನೆ, ಕನ್ವರ್ಷನ್, ಕಟ್ಟಡ ಪರವಾನಿಗೆ, ಏಕ ನಿವೇಶನ ಅನುಮೋದನೆ, ವಿನ್ಯಾಸ ನಕ್ಷೆ, ಮಹಾಯೋಜನೆ ಮುಂತಾದ ಸೌಲಭ್ಯಗಳಲ್ಲಿ ಕಾನೂನು ಸರಳೀಕರಣ ಮತ್ತು ಕರಾವಳಿಗೆ ವಿನ್ಯಾಸಿತ ಪ್ರತ್ಯೇಕ ವಲಯ ನಿಯಮಾವಳಿ ರೂಪಿಸುವ ಅಗತ್ಯದ ಕುರಿತು ಚರ್ಚಿಸಲಾಯಿತು.

ಈ ಪ್ರಯತ್ನಗಳ ಭಾಗವಾಗಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಪ್ರಾಧಿಕಾರಗಳ ಒಕ್ಕೂಟವನ್ನು ರಚಿಸಲಾಯಿತು.

ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಸಂಚಾಲಕರಾಗಿ ಆಯ್ಕೆ

ಹೊಸತಾಗಿ ರಚನೆಯಾದ ದ.ಕ. ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ ಮತ್ತು ಯೋಜನಾ ಪ್ರಾಧಿಕಾರಗಳ ಒಕ್ಕೂಟದ ಅಧ್ಯಕ್ಷರಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಅವರನ್ನು ಹಾಗೂ ಸಂಚಾಲಕರಾಗಿ ಸುಳ್ಯ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಎಂ. ಮುಸ್ತಫ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಭೆಯಲ್ಲಿ ಜಿಲ್ಲೆಗಳ ಎಲ್ಲಾ ನಗರಾಭಿವೃದ್ಧಿ ಹಾಗೂ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು. ಸರ್ಕಾರದ ಮಟ್ಟದಲ್ಲಿ ಕರಾವಳಿಗೆ ಸಮರ್ಪಕವಾದ ಪ್ರಾಧಿಕಾರ ವ್ಯವಸ್ಥೆ ಹಾಗೂ ನಿರ್ಧಾರಗಳನ್ನು ಕೈಗೊಳ್ಳಲು ಒಕ್ಕೂಟ ಸಕ್ರಿಯವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ವ್ಯಕ್ತವಾಯಿತು.

m

Related Posts