ಸರಕಾರದ ಕಾರ್ಯಕ್ರಮಗಳು ಜನರಿಗೆ ಶೀಘ್ರ ತಲುಪುವಂತೆ ಆಗಬೇಕು : ಸಚಿವ ದಿನೇಶ್ ಗುಂಡೂರಾವ್

ಸುಳ್ಯ : ಸುಳ್ಯ ನಗರದ ಜನತೆಯ ಬಹಳ ದಿನಗಳ ಕನಸು ನನಸಾಗಿದೆ. ಸುಳ್ಯ ನಗರದ ಏಕೀಕೃತ ಅಭಿವೃದ್ಧಿಗಾಗಿ ಮಹಾ ಯೋಜನೆ (Master Plan) ರೂಪಿಸುವ, ತಯಾರಿಸುವ, ಅಧಿಕಾರ ಹೊಂದಿರುವ ಸುಳ್ಯದ ಪ್ರಥಮ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಕಚೇರಿ ಉದ್ಘಾಟನೆಯನ್ನು ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಸುಳ್ಯ ನಗರ ಪಂಚಾಯತ್ ಆವರಣದಲ್ಲಿ ಉದ್ಘಾಟಿಸಿದರು ಆಧ್ಯಕ್ಷತೆಯನ್ನು ಸುಳ್ಯ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ವಹಿಸಿದ್ದರು

ಬೆಳೆಯುತ್ತಿರುವ ಸುಳ್ಯ ನಗರಕ್ಕೆ ಅಗತ್ಯ ವಾಗಿ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚನೆ ಯಾಗಬೇಕು ಎಂಬ ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು, ಒತ್ತಾಯ ಗಳು ಸ್ಥಳೀಯವಾಗಿ ಕೇಳಿ ಬರುತ್ತಿತ್ತು. ಅದರೆ ರಾಜ್ಯಮಟ್ಟದಲ್ಲಿ, ಸರಕಾರಕ್ಕೆ ಒತ್ತಾಯ, ಒತ್ತಡ, ಮಾತ್ರ ಅಗಲಿಲ್ಲ ಈಗಿನ ಮತ್ತು ಅಂದಿನ ಶಾಸಕರಿಂದ ಪ್ರಯತ್ನವೂ ನಡೆದಿರಲಿಲ್ಲ.

ಎರಡು ವರ್ಷಗಳ ಮುಂದೆ ರಚಿತವಾದ ರಾಜ್ಯದ ಕಾಂಗ್ರೆಸ್ ಸರಕಾರ ಬಂದ ಮೇಲೆ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ರಾದ ಕೆ ಎಂ ಮುಸ್ತಫಾ ಇವರ ಎರಡು ವರ್ಷಗಳ ನಿರಂತರ ಪ್ರಯತ್ನ ದಿಂದ ಸುಳ್ಯ ಕ್ಕೆ ಪ್ರತ್ಯೇಕ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಸ್ಥಾಪಿತವಾಗಿದೆ, ಈ ಸಂಬಂಧ ಸುಳ್ಯ ನಗರದ ಮಹಾ ಜನತೆ ಕಾಂಗ್ರೆಸ್ ಸರಕಾರಕ್ಕೆ ಮತ್ತು ಸುಳ್ಯದಲ್ಲಿ ಈ ಪ್ರಾಧಿಕಾರ ರಚನೆಯಾಗಲು ಕಾರಣಕರ್ತರಾದ ಕೆ ಎಂ ಮುಸ್ತಫಾ ಇವರಿಗೆ ಅಭಾರಿ ಯಾಗಲೇಬೇಕು

ಉದ್ಘಾಟಸಿ ಮಾತನಾಡಿದ ಸಚಿವರು ಸರ್ಕಾರದ ಜನ ಪರ ಯೋಜನೆಗಳು ಅರ್ಹ ಜನರಿಗೆ ತಲುಪಿಸಲು ಅಧಿಕಾರಿಗಳು ಕ್ರಿಯಾ ಶೀಲರಾಗಿ ಕ್ರಮ ವಹಿಸಬೇಕು ಎಂದರು ಪ್ರಾಧಿಕಾರ ರಚನೆಗೆ ಶಿಫಾರಸು ಮಾಡಿದ ಸಚಿವರನ್ನು ಮತ್ತು ಶಾಸಕರನ್ನು ಸುಳ್ಯ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ ಮುಸ್ತಫ ಸನ್ಮಾನಿಸಿದರು
ಮುಖ್ಯ ಅತಿಥಿ ಗಳಾಗಿ ನಗರ ಪಂಚಾಯತ್ ಅಧ್ಯಕ್ಷ ಶ್ರೀಮತಿ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ವಿಧಾನ ಪರಿಷತ್ ಮಾಜಿ ಶಾಸಕರಾದ ಹರೀಶ್ ಕುಮಾರ್, ಸಹಾಯಕ ಕಮಿಷನರ್ ಸ್ಟೆಲ್ಲಾ ವಿ ವರ್ಗಿಸ್, ತಹಶೀಲ್ದಾರ್ ಶ್ರೀಮತಿ ಮಂಜುಳಾ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ,ಅರೆ ಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ,ಮುಖಂಡರುಗಳಾದ ಟಿ. ಎಂ ಶಹೀದ್, ಪಿ. ಸಿ ಜಯರಾಮ್, ಕೆ. ಕೃಷ್ಣಪ್ಪ,ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್, ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಶರೀಫ್ ಕಂಠಿ, ಸಿದ್ಧಿಕ್ ಕೊಕ್ಕೊ, ಜಿಲ್ಲಾ ಆರೋಗ್ಯಾಧಿಕಾರಿ ತಿಮ್ಮೆ ಗೌಡ, ಪುತ್ತೂರು ಎಸಿಎಫ್ ಪ್ರವೀಣ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್, ಸೂಡ ಸಹಾಯಕ ನಿರ್ದೇಶಕ ಗುರುಪ್ರಸಾದ್ ಟೌನ್ ಪ್ಲಾನರ್ ಫೈರೋಜ್ ರಫೀಕ್ ಪಡು, ಮೊದಲಾದವರು ಉಪಸ್ಥಿತರಿದ್ದರು
ಏನಿದು ಸೂಡಾ….!!
ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡಾ) ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಡಿಯಲ್ಲಿ 2011ರ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಅನ್ವಯ ರಚಿತವಾಗಿದೆ . ಇದು ಸುಳ್ಯ ನಗರದ ಯೋಜನಾ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತದೆ. ಸುಳ್ಯ ನಗರದ ಏಕೀಕೃತ ಅಭಿವೃದ್ಧಿಗಾಗಿ ಮಹಾ ಯೋಜನೆ (Master Plan) ತಯಾರಿಸುವ ಅಧಿಕಾರ, ಸುಳ್ಯ ನಗರ ವ್ಯಾಪ್ತಿಯಲ್ಲಿನ ಎಲ್ಲಾ ನಿರ್ಮಾಣ ಯೋಜನೆಗಳು, ಕಟ್ಟಡಗಳು ಮತ್ತು ಅಭಿವೃದ್ಧಿ ಯೋಜನೆಗಳನ್ನು ನಿಯಂತ್ರಿಸಿ ಅನುಮೋದಿಸುವ ಅಧಿಕಾರ ಹೊಂದಿದೆ ಪ್ರಾಧಿಕಾರವು ನಗರದ ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳು,ಅನುಮೋದನಾ ಪ್ರಕ್ರಿಯೆಗಳು ಮತ್ತು ಸ್ಥಳೀಯ ಸಮಸ್ಯೆಗಳ ಪರಿಹಾರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ






m

