ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರಗಳ ಒಕ್ಕೂಟದ ನಿಯೋಗವು ಮೈಸೂರಿನ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಪಂಕಜ್ ಎಂ. ಎಸ್ ರವರನ್ನು ಭೇಟಿ ಮಾಡಿ, ಕರಾವಳಿ ಪ್ರದೇಶದ ಸವಾಲುಗಳು ಹಾಗೂ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿ ವಿಸ್ತೃತ ಚರ್ಚೆ ನಡೆಸಿತು.
ಈ ನಿಯೋಗಕ್ಕೆ ಒಕ್ಕೂಟದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ನೇತೃತ್ವ ವಹಿಸಿದ್ದರು. ಕರಾವಳಿ ಪ್ರದೇಶದ ಭಿನ್ನ ಬೌಗೋಳಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯು ಹಾಲಿ ವಲಯ ನಿಯಮಾವಳಿಗಳನ್ನು ಅನುಷ್ಟಾನಗೊಳಿಸುವಲ್ಲಿ ಅಡಚಣೆಗಳಾಗುತ್ತಿದ್ದು, ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗಾಗಿ ಪ್ರತ್ಯೇಕ ವಲಯ ನಿಯಮಾವಳಿ ರೂಪಿಸಬೇಕೆಂದು ಒತ್ತಾಯಿಸಲಾಯಿತು.
ಮುಖ್ಯವಾಗಿ ಮನವಿ ಮಾಡಲಾದ ವಿಷಯಗಳು:
9/11 ನಿಯಮಗಳ ಸರಳೀಕರಣ ಕಟ್ಟಡ ರೂಪಾಂತರ (ಕಟ್ ಕನ್ವರ್ಷನ್) ಸಂಬಂಧಿತ ನಿಯಮಗಳಲ್ಲಿ ಬದಲಾವಣೆ ರಸ್ತೆ ಅಗಲೀಕರಣ ಮಾರ್ಜಿನ್ ಕಡಿತಗೊಳಿಸುವ ಕುರಿತು ಪ್ರಸ್ತುತ ಶ್ರೇಣೀಬದ್ಧತೆಯ ಸಮಸ್ಯೆಗಳು ಕರಾವಳಿಗೆ ಹೊಂದಿಕೆಯಾಗುವ ನವೀಕರಿತ ಯೋಜನಾ ಮಾರ್ಗಸೂಚಿಗಳು ಜಂಟಿ ನಿರ್ದೇಶಕರು ಮನವಿಗೆ सकारಾತ್ಮಕ ಸ್ಪಂದನೆ ನೀಡಿದ್ದು, ಕರಾವಳಿ ಪ್ರದೇಶಕ್ಕೆ ಸೂಕ್ತವಾದ ಮತ್ತು ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾದ ನವೀಕರಿತ ವಲಯ ನಿಯಮಾವಳಿ ರೂಪಿಸುವ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಿಯೋಗದಲ್ಲಿ ಭಾಗವಹಿಸಿದ್ದವರು:ಒಕ್ಕೂಟದ ಸಂಚಾಲಕರು ಗಳಾದ ದಿನಕರ್ ಹೇರೂರ್ – ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಕೆ. ಎಂ. ಮುಸ್ತಫ – ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು ಹರ್ಷ ವರ್ಧನ್ ಜೈನ್ – ಮೂಡಬಿದ್ರಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು ವಿನೋದ್ ಕ್ರಸ್ತ – ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು ಸದಸ್ಯರಾದ ಸತೀಶ್ ಭಂಡಾರಿ, ಶೇಖರ್ ಬೊಳ್ಳಿ ಮತ್ತಿತರರು ಹಿರಿಯ ಉಪನಿರ್ದೇಶಕರಾದ ಹನುಮಂತ ರಾಯಪ್ಪ ಉಪಸ್ಥಿತರಿದ್ದರು








m
