ರೋಗ ಎಂಬುದು ಕೇವಲ ದೇಹದ ತೊಂದರೆ ಮಾತ್ರವಲ್ಲ; ಅದು ಮನಸ್ಸಿನ ಮೇಲೆ ಬೀಳುವ ಭಾರೀ ಹೊರೆಯೂ ಹೌದು. ನೋವು, ಭಯ, ಅನಿಶ್ಚಿತತೆ, ಕುಟುಂಬದಿಂದ ದೂರವಿರುವಿಕೆ – ಇವೆಲ್ಲವೂ ರೋಗಿಯನ್ನು ಒಳಗಿಂದ ಒಳಗೆ ಕರಗಿಸುತ್ತಿರುತ್ತವೆ. ಇಂತಹ ಕಠಿಣ ಸಮಯದಲ್ಲಿ, “ಸಾಂತ್ವನ ಕೇಂದ್ರ” (Palliative Care Unit/Hospice Care) ಎಂಬುದು ಕೇವಲ ಚಿಕಿತ್ಸಾ ವ್ಯವಸ್ಥೆಯ ಒಂದು ಭಾಗವಲ್ಲ, ಅದು ಒಂದು ಆಶ್ರಯ, ಒಂದು ಸಮಾಧಾನದ ಆಲಯ. ಮಾನವೀಯ ನೆಲೆಯಲ್ಲಿ ಈ ಒಂದು ಜೀವ ಕಾರುಣ್ಯ ಸೇವೆಯನ್ನು ಗೈಯುತ್ತಿರುವ AIKMCC ಕೊಡಗು ಇದರ ನಿಸ್ವಾರ್ಥ ಮಾನವೀಯ ಸಂಬಂಧದ ಸೇವಾ ಮನೋಭಾವಕ್ಕೆ ಬೆಲೆ ಕಟ್ಟಲು ಸಾಧ್ಯವೇ..? AIKMCC ಕೊಡಗು ಘಟಕಕ್ಕೆ ಇವಾರ್ತೆ ಬಳಗದ ವತಿಯಿಂದ ಬಿಗ್ ಸೆಲ್ಯೂಟ್

ಸುಳ್ಯ : AIKMCC ಸುಳ್ಯ. ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯೂಮಾನಿಟಿ ಬೆಂಗಳೂರು, AIKMCC ಕೊಡಗು ಇದರ ಸಹಬಾಗಿತ್ವದಲ್ಲಿ ಸಂಪಾಜೆ ಪರಿಸರದಲ್ಲಿ ಪಾಲಿಯೇಟಿವ್ ಹೋಮ್ ಕೇರ್ ತಂಡವು ಸೇವೆ ಆರಂಭಿಸಿದೆ
ಇಂದು ದ,ಕ, ಸಂಪಾಜೆ ಹಾಗೂ ಕೊಡಗು ಸಂಪಾಜೆಯ ಸುಮಾರು 10ಕ್ಕೂ ಅಧಿಕ ನಿತ್ಯರೋಗಿಗಳನ್ನು ಅವರವರ ಮನೆಗಳಿಗೆ ತೆರಳಿ ಭೇಟಿಮಾಡಿ ಅವರನ್ನು ಪರೀಕ್ಷಿಸಿ ಅವಶ್ಯಕತೆ ಇರುವಲ್ಲಿ ಉಚಿತವಾಗಿ ಔಷಧಗಳನ್ನು ವಿತರಿಸಲಾಯಿತು, ಪ್ರತಿ ರೋಗಿಗಳ ರಕ್ತದೊತ್ತಡ, ಶುಗರ್ ಪರೀಕ್ಷಿಸಿ ವಿವರ ನೀಡಿದರು, ವಾರಕ್ಕೊಮ್ಮೆ ಆ ರೋಗಿಗಳನ್ನು ನಿರಂತರವಾಗಿ ಪರೀಕ್ಷಿಸಲಾಗುವುದು ಎಂದು ಸುಳ್ಯ AIKMCC ಪ್ರದಾನ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಇವಾರ್ತೆ ಗೆ ತಿಳಿಸಿದರು ಬಡ, ಅಶಕ್ತ ರೋಗಿಗಳ ಮಾಹಿತಿ ನೀಡುವಂತೆಯೂ ಅವರು ಕೇಳಿಕ್ಕೊಂಡರು,

ಈ ಸಂದರ್ಭದಲ್ಲಿ ಶುಶ್ರೂಷಕಿ ಸುಜಾತಾ,ಜೇರಿನ್ ಬಶೀರ್,ದ,ಕ,ಜಿಲ್ಲಾ AIKMCC ಪ್ರಧಾನ ಕಾರ್ಯದರ್ಶಿ ಅಫ್ಹಾಂ ಅಲೀ ತಂಗಳ್ ಜಬ್ಬಾರ್ ಕಲ್ಲೆಗ,ಶಾಹೀರ್ ಕೊಡ್ಲಿಪೇಟೆ,ರಾಯಿಜ್ ಕಬಕ ರಫೀಕ್ ಪ್ರಗತಿ,ತಾಜ್ ಮಹಮ್ಮದ್,ಅಬ್ಬಾಸ್ ಸಂಪಾಜೆ ಉಪಸ್ಥಿತರಿದ್ದರು.
AIKMCC ಪಾಲಿಯೇಟಿವ್ ಹೋಮ್ ಕೇರ್ ಬಗ್ಗೆ
ಪಾಲಿಯೇಟಿವ್ ಹೋಮ್ ಕೇರ್ ಜೀವನಾಂತ್ಯದ ಅಸುನಿರೀಕ್ಷೆಯ ರೋಗಿಗಳು ಅಥವಾ ಗಂಭೀರ ನಿತ್ಯರೋಗದಿಂದ ಬಳಲುವವರಿಗೆ ಮನೆಮುಟ್ಟಿನ ಪರಿಚರ್ಯೆ ಸೇವೆ ನೀಡುವುದು. ಇದರ ಉದ್ದೇಶ ರೋಗದ ನೋವು, ಭಾವನಾತ್ಮಕ ಸಂಕಟ ಮತ್ತು ದೈಹಿಕ ತೊಂದರೆಗಳನ್ನು ಕಡಿಮೆ ಮಾಡಿ ಜೀವನದ ಗುಣಮಟ್ಟವನ್ನು ಉತ್ತಮಪಡಿಸುವುದು. AIKMCC (ಅಖಿಲ ಭಾರತ ಕೇರಳ ಮುಸ್ಲಿಂ ಸಾಂಸ್ಕೃತಿಕ ಕೇಂದ್ರ) ಸುಳ್ಯ ಶಾಖೆಯು ಈ ಸೇವೆಯನ್ನು ಸಂಪಾಜೆ ಮತ್ತು ಕೊಡಗು ಪ್ರದೇಶಗಳಲ್ಲಿ ನಿರಂತರವಾಗಿ ನಡೆಸುತ್ತಿದೆ.
ಸೇವೆಯ ಮೂಲ ತತ್ವಗಳು
ವೈದ್ಯಕೀಯ ನೆರವು ರಕ್ತದೊತ್ತಡ, ಶರ್ಕರದ ಮಟ್ಟ (ಶುಗರ್) ಮುಂತಾದ ನಿತ್ಯವಾದ ಆರೋಗ್ಯ ಪರೀಕ್ಷೆಗಳನ್ನು ರೋಗಿಯ ಮನೆಯಲ್ಲೇ ನಡೆಸುವುದು. ಔಷಧ ನೆರವು ಅಗತ್ಯವಿರುವ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸುವುದು. ಸಾಮಾಜಿಕ-ಭಾವನಾತ್ಮಕ ಬೆಂಬಲ ರೋಗಿ ಮತ್ತು ಅವರ ಕುಟುಂಬಕ್ಕೆ ಮಾನಸಿಕ ಸ್ಥೈರ್ಯ ತುಂಬುವುದು, ಧೈರ್ಯದ ಮಾತುಗಳ ಮೂಲಕ ಧ್ಯಾನವಹಿಸುವುದು.
ನಿಯಮಿತ ಮೇಲ್ವಿಚಾರಣೆ
ಪ್ರತಿ ವಾರವೂ ರೋಗಿಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಔಷಧಗಳ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲಾಗುತ್ತದೆ.




m

