ನಿಂತಿಕ್ಕಲ್: ಈ ಒಂದು ಚಿತ್ರ ಎಷ್ಟೆಂದರೂ ಒಂದು ವಿದ್ಯುತ್ ಕಂಬ ಎಂಬುದನ್ನು ನಂಬುವುದು ಕಷ್ಟ. ಸಂಪೂರ್ಣವಾಗಿ ಹಸಿರೆಲೆ ಬಳ್ಳಿಗಳಿಂದ ಮುಚ್ಚಿಕೊಂಡಿರುವ ಈ ವಿದ್ಯುತ್ ಕಂಬ ನಿಂತಿಕ್ಕಲ್ ಪೇಟೆಯಲ್ಲಿ ಕಂಡುಬಂದ ದೃಶ್ಯ.
ಸುತ್ತ ಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸೌಲಭ್ಯ ಒದಗಿಸುವ ಪ್ರಮುಖ ಕಂಬವೇ ಹೀಗೆ ಪೊದೆಯಿಂದ ಮುಚ್ಚಿಕೊಂಡು, ತಿಂಗಳಿನಿಂದ ನಿರ್ಲಕ್ಷ್ಯದಲ್ಲಿದೆ ಎಂಬುದು ಈ ಚಿತ್ರ ಹೇಳುವ ಕಥೆ.
ಕಂಬದ ಸುತ್ತಲೂ ಬೆಳೆದ ಹಸಿರೆಲೆ ಬಳ್ಳಿಗಳ ಒಳಗೆ ಕಂಬವೇ ಕಾಣದಷ್ಟು ಹೊಂದಿಕೊಂಡಿದೆ.
ಒಂದು ಪೇಟೆಯಲ್ಲಿಯೇ ಕಂಬದ ಸ್ಥಿತಿ ಹೀಗಿದ್ದರೆ, ಇನ್ನು ಗ್ರಾಮೀಣ ಭಾಗದ ಅಥವಾ ಒಳ ಪ್ರದೇಶದಲ್ಲಿನ ವಿದ್ಯುತ್ ಕಂಬಗಳ ಸ್ಥಿತಿ ಹೇಗಿರಬಹುದು ಎಂಬುದು ಪ್ರಶ್ನೆ.
ಸಂಬಂಧಪಟ್ಟ ಇಲಾಖೆಯಿಂದ ತಕ್ಷಣ ಕ್ರಮ ಕೈಗೊಂಡು, ಸಾರ್ವಜನಿಕ ಸುರಕ್ಷತೆಗೆ ಅನುವು ಮಾಡಿ ಕೊಡುವ ಅಗತ್ಯವಿದೆ.





m

