ಕಡಬ : ಕಳೆದ ಐದು ವರ್ಷಗಳಿಂದ ಚುನಾವಣೆ ನೆಡಯದೆ ಇದ್ದ ಕಡಬ ಪಟ್ಟಣ ಪಂಚಾಯತ್ ಗೆ ಚುನಾವಣೆ ಘೋಷಣೆ ಆಗಿದ್ದು ಆಗಸ್ಟ್ 17 ಕ್ಕೆ ಚುನಾವಣೆ ನಡೆಯಲಿದೆ. ಈ ನಡುವೆ ಈಗಾಗಲೇ ರಾಜಕೀಯ ಪಕ್ಷಗಳು ಅಖಾಡಕ್ಕೆ ಇಳಿಯಲು ಸಿದ್ದತೆ ಮಾಡುತ್ತಿದ್ದು ಪ್ರಥಮವಾಗಿ ಎಸ್ ಡಿ ಪಿ ಐ ಚುನಾವಣೆ ಸಿದ್ದತೆ ಗಾಗಿ ಸಭೆ ಸೇರಿದೆ.ಇನ್ನೂ ಕಾಂಗ್ರೆಸ್, ಬಿಜೆಪಿ, ರಾಷ್ಟ್ರೀಯ ಪಕ್ಷಗಳು ದೈನಂದಿನ ರೀತಿಯಲ್ಲಿ ನಾಮ ಪತ್ರ ಸಲ್ಲಿಸುವ ಒಂದು ವಾರ ಮೊದಲು ತನ್ನ ಸಿದ್ದತೆ ಮಾಡಿಕೊಳ್ಳಲಿದೆ. ಆದರೆ ಈ ಸಲ ಮತ್ತೊಂದು ರಾಷ್ಟ್ರೀಯ ಪಕ್ಷ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಸದ್ದಿಲ್ಲದೆ ತನ್ನ ಕೆಲಸವನ್ನು ಆರಂಭಿಸಿದೆ. ಹೌದು ಅಮ್ ಅದ್ಮಿ ಪಕ್ಷ ಈ ಸಲದ ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ ಎಂದು ಇವಾರ್ತೆ ಮಾಧ್ಯಮಕ್ಕೆ ಸೂಚನೆ ಲಭಿಸಿದೆ. ಕಡಬ ಪ್ರದೇಶದ ಆಪ್ ಕಾರ್ಯಕರ್ತರು ಈಗಾಗಲೇ ಚುನಾವಣೆಗೆ ಸ್ಪರ್ಧಿಸಲು ಅರ್ಹ ಅಭ್ಯರ್ಥಿಗಳ ಹುಡುಕಾಟಕ್ಕೆ ಮುಂದಾಗಿದ್ದು, ಆಪ್ ಪಕ್ಷದ ಬಲಿಷ್ಠ ಯುವ ಪಡೆ ಈಗಾಗಲೇ ಸಕ್ರಿಯ ವಾಗಿದೆ ಅರ್ಹತೆ ಹೊಂದಿದ ವ್ಯಕ್ತಿಗಳನ್ನು ಅಭ್ಯರ್ಥಿಗಳಾಗಿ ಮಾಡುವ ಇರಾದೆ ಪಕ್ಷಕ್ಕೆ ಇದ್ದು ಅದಕ್ಕಾಗಿ ವಿವಿಧ ಸಂಘ, ಸಂಸ್ಥೆಯಲ್ಲಿ ಗುರುತಿಸಲ್ಪಡುವ ಸಮಾಜ ಮುಖಿ ವ್ಯಕ್ತಿಗಳನ್ನು ಆಯ್ಕೆಮಾಡಲು ಜನರೊಂದಿಗೆ ಅಭಿಪ್ರಾಯ ಸಂಗ್ರಹಿಸಲು ಕಡಬದ ಆಪ್ ಕಾರ್ಯಕರ್ತರು ಇಳಿದಿದ್ದಾರೆ ಎಂದು ತಿಳಿದುಬಂದಿದೆ ಏನಿದ್ದರೂ ಇನ್ನೂ ಒಂದೆರಡು ದಿನಗಳಲ್ಲಿ ಆಪ್ ಪಕ್ಷ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸ್ಪಷ್ಟತೆ ಸಿಗಲಿದೆ..
ವರದಿ : ರುನೈಝ್ ಇವಾರ್ತೆ ಸುಳ್ಯ




m

