Featured, ಅಂಕಣ, ತಂತ್ರಜ್ಞಾನ, ಸ್ಥಳೀಯ

ಮುನ್ನಲೆಗೆ ಬರುತ್ತಿರುವ ಧರ್ಮಸ್ಥಳದ ಹಳೆಯ ಪ್ರಕರಣ : ಇಂದು SDPI ವತಿಯಿಂದ X (ಟ್ವಿಟ್ಟರ್) ನಲ್ಲಿ ಅಭಿಯಾನ

ಬೆಂಗಳೂರು: ಜು.20- ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ನಡೆದಿದೆ, ಶವಗಳನ್ನು ಹೂತು ಹಾಕಲಾಗಿದೆ ಎಂದು ಸಾಕ್ಷಿದಾರ ಕೋರ್ಟ್ ಗೆ ಹಾಜರಾಗಿ ಹೇಳಿಕೆ ನೀಡಿದ ಬೆನ್ನಿಗೆ ಎಸ್ಡಿಪಿಐ ಪತ್ರಿಕಾಗೋಷ್ಠಿ ಕರೆದು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿತ್ತು. ರಾಜ್ಯದ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಸಿತು. ಇನ್ನು ಹಲವು ಕಡೆಗಳಲ್ಲಿ ಪೊಲೀಸ್ ಅನುಮತಿ ನಿರಾಕರಣೆ ಕಾರಣ ಪ್ರತಿಭಟನೆ ಮುಂದೂಡಲಾಗಿತ್ತು. ಹೋರಾಟದ ಮುಂದುವರಿದ ಭಾಗವಾಗಿ ಇಂದು ಸಂಜೆ 4ಗಂಟೆಗೆ X(ಟ್ವಿಟ್ಟರ್) ನಲ್ಲಿ ಅಭಿಯಾನ ಹಮ್ಮಿಕೊಂಡಿದೆ.

“ಧರ್ಮಸ್ಥಳದಲ್ಲಿ ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ಪ್ರಕರಣಗಳು ದೇಶ ಕಂಡ ಅತ್ಯಂತ ಗಂಭೀರ ಪ್ರಕರಣ” ಎನ್ನುವ ಪೋಸ್ಟರ್ ವೈರಲ್ ಮಾಡುತ್ತಿರುವ ಎಸ್ ಡಿ ಪಿ ಐ #ShameonKarnatakaGovernment #DharmasthalaFiles ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಅಭಿಯಾನ ನಡೆಸಲಿದೆ. ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. SIT ರಚಿಸಿ ವಿಶ್ವಸ್ಥ, ನಿಷ್ಠಾವಂತ ಅಧಿಕಾರಿಗಳಿಂದ ತನಿಖೆ ನಡೆಸಬೇಕು. ಆರೋಪಿಗಳಿಗೆ ಶಿಕ್ಷೆ ನೀಡಬೇಕು. ಸಾಕ್ಷಿದಾರನಿಗೆ, ಹೋರಾಟಗಾರರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂಬ ಒತ್ತಾಯವನ್ನು ಅಭಿಯಾನ ಹೊಂದಿದೆ.

m

Related Posts