ಸಂಪಾಜೆ ಮೂಲದ ಶಾಫಿ ಬೀಜದಕಟ್ಟೆ ಗೂನಡ್ಕ ಅವರ ಪತ್ನಿ
ಗುಜರಾತ್‌ನ ದೈರಂಗಾಧರ ಮಿಲಿಟರಿ ಆಸ್ಪತ್ರೆಯ ಇಂಚಾರ್ಜ್ ಆಗಿ ಲೆಫ್ಟಿನಂಟ್ ಕರ್ನಲ್ ರುಕಿಯಾ ಶಾಫಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಇವರು ದ. ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದ ನಿವಾಸಿಯಾಗಿರುವ ದಿ. ಸೈದು ಹಾಜಿ ಮತ್ತು ಆಸಿಯಮ್ಮ ದಂಪತಿಗಳ ಪುತ್ರ ಶಾಫಿ ಬೀಜದಕಟ್ಟೆ ಅವರ ಪತ್ನಿ.
ದೀರ್ಘಕಾಲದಿಂದ ಸೇನೆ ವೈದ್ಯಕೀಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ರುಕಿಯಾ ಶಾಫಿ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಇದೀಗ ಮಹತ್ವದ ಹೊಣೆಗಾರಿಕೆಗೆ ನೇಮಕವಾಗಿದ್ದಾರೆ.
ಗ್ರಾಮದ ಮಟ್ಟದಿಂದ ದೇಶದ ಮಿಲಿಟರಿ ಆರೋಗ್ಯ ಇಲಾಖೆಯ ಉನ್ನತ ಹುದ್ದೆಗೆ ಚೇರಿರುವ ಇವರು, ಯುವ ಸಮುದಾಯಕ್ಕೆ ಪ್ರೇರಣೆಯ ಮೂಡಿಸಿರುವ ವ್ಯಕ್ತಿತ್ವ ಎಂಬಂತೆ ನೆರೆಹೊರೆಯವರು ಹಾಗೂ ಕುಟುಂಬಸ್ಥರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.




m
