Featured, ಅಂಕಣ, ಸ್ಥಳೀಯ

ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ, 2025-26ನೇ ಸಾಲಿನ ವಾರ್ಷಿಕ ಸಭೆ

ಶಿಕ್ಷಣ, ಆರೋಗ್ಯದ ಪ್ರಗತಿ ಮತ್ತು ಬಡತನ ನಿರ್ಮೂಲನೆಗೆ ನೀಡುವ ಸೇವೆ ಎಂದೂ ವ್ಯರ್ಥವಾಗದು : ರಹ್ಮಾನ್ ನಾವೂರು

ಬೆಳ್ತಂಗಡಿ (ಜು20):- ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾಮಾಜಿಕ,ಆರ್ಥಿಕ ಹಿಂದುಳಿದ ಕುಟುಂಬಗಳ ಸಭಲೀಕರಣಕ್ಕಾಗಿ ಕಳೆದ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ಕಾರ್ಯಚಟುವಟಿಕೆ ಶ್ಲಾಘನೀಯ. ಶಿಕ್ಷಣ, ಆರೋಗ್ಯ ಪ್ರಗತಿಗೆ ಮತ್ತು ಬಡತನ ನಿರ್ಮೂಲನೆಗೆ ನೀಡುವ ಸೇವೆ ಎಂದೂ ವ್ಯರ್ಥವಾಗದು. ಈ ಚಾರಿಟಿ ವೇದಿಕೆಯು ಯುವಕರಲ್ಲಿ ಐಕ್ಯತೆ ಮತ್ತು ಸಾಮಾಜಿಕ ಕಳಕಳಿ ಹೆಚ್ಚಿಸಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸೇವೆ ಸಲ್ಲಿಸುವಂತಾಗಲಿ ಎಂದು 2025-26ನೇ ಸಾಲಿನ ವಾರ್ಷಿಕ ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಬ್ದುಲ್ ರಹ್ಮಾನ್ ನಾವೂರು ಶುಭ ಹಾರೈಸಿದರು.

 ಬೆಳ್ತಂಗಡಿ ಜಮೀಯತುಲ್ ಫಲಾಹ್ ಸಭಾಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ರಶೀದ್ ಬೆಳ್ತಂಗಡಿ ವಹಿಸಿದ್ದರು. ಹಿಂದಿನ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿಯಾದ ಮಹಮ್ಮದ್ ಕುದ್ರಡ್ಕ ಮಂಡಿಸಿದರು.

ನೂತನ ಸಮಿತಿ ಅಸ್ಥಿತ್ವಕ್ಕೆ:

ನೂತನ ಸಾಲಿನ ಅಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ , ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ವರ್ಷಾ, ಉಪಾಧ್ಯಕ್ಷರಾಗಿ ಇಸ್ಮಾಲಿ ಐ ಬಿ, ಜೊತೆಕಾರ್ಯದರ್ಶಿಯಾಗಿ ಮಹಮ್ಮದ್ ಕುದ್ರಡ್ಕ, ಕೋಶಾಧಿಕಾರಿಯಾಗಿ ರಿಝ್ವಾನ್ ಬಿಕೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ರಶೀದ್ ಬೆಳ್ತಂಗಡಿ, ರಿಯಾಝ್ ಸಂಜಯನಗರ, ಅಬ್ಬಾಸ್ ಸಂಜಯನಗರ, ಶೈರೊಝ್ ಉದಯನಗರ ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

    ಗಲ್ಫ್ ಸಮಿತಿ ಸದಸ್ಯರಾಗಿ ಇರ್ಫಾನ್ ಹಂಝ ಸೌದಿ ಅರೇಬಿಯಾ, ನಝಿರ್ ಅಬುದಾಬಿ , ತೌಫೀಕ್ ಬಹರೈನ್, ಆಸ್ಕರ್ ಸೌದಿ ಅರೇಬಿಯಾ ಇವರನ್ನು ಆರಿಸಲಾಯಿತು.

    ಈ ಸಂದರ್ಭದಲ್ಲಿ ಸಂಜಯ್ ಗ್ಲೋಬಲ್ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು. ಹನೀಫ್ ವರ್ಷಾ ರವರು ಸ್ವಾಗತಿಸಿದರು. ಅರ್ಫಾಝ್ ಧನ್ಯವಾದಗೈದರು.

m

Related Posts