Featured, ಅಂಕಣ, ಸ್ಥಳೀಯ

ಬೆಳ್ತಂಗಡಿಯಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜು ಮತ್ತು ದೇಶದ ಪ್ರತಿಷ್ಠಿತ ಸಂಸ್ಥೆ ಮೈಫ್ಸ್ ಮಿನರ್ವ ಕಾಲೇಜಿನ ಐತಿಹಾಸಿಕ ಸಹಭಾಗಿತ್ವದಲ್ಲಿ ಭವ್ಯ ಕಾಲೇಜು ಕ್ಯಾಂಪಸ್ ಉದ್ಘಾಟನೆ

 ವೃತ್ತಿಪರ ಶಿಕ್ಷಣದ ಅಗತ್ಯತೆ – ಶ್ರೀ ರಕ್ಷಿತ್ ಶಿವರಾಮ್:

“ಇಂದು ಭಾರತ ದೇಶ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಕೇವಲ ಶೈಕ್ಷಣಿಕ ಅರ್ಹತೆ ಸಾಕಾಗದೆ, ವೃತ್ತಿಪರ ಕೌಶಲ್ಯಗಳು ಕೂಡ ಅವಶ್ಯಕ. ಇಂತಹ ವೃತ್ತಿ ಪರ ಶಿಕ್ಷಣ ಸಂಸ್ಥೆಗಳು ಹೊಸ ತಲೆಮಾರಿಗೆ ನಿಖರವಾದ ಮಾರ್ಗದರ್ಶನ ಒದಗಿಸುತ್ತವೆ.”

👉 ವಿದ್ಯಾರ್ಥಿಗಳ ಬದುಕು ರೂಪಿಸುತ್ತಿರುವ ಶಿಕ್ಷಣ ಸೇವೆ – ತಲ್ಹತ್ ಎಂ.ಜಿ ಸವಣಾಲು :

“ಅನುಗ್ರಹ ಟ್ರೈನಿಂಗ್ ಕಾಲೇಜು ಆರಂಭದಿಂದಲೂ ಪ್ರಾದೇಶಿಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ, ಉದ್ಯೋಗಕ್ಕೆ ತಯಾರಿ, ಮತ್ತು ವ್ಯಕ್ತಿತ್ವವಿಕಾಸದಲ್ಲಿ ನೆರವಾಗುತ್ತಿದೆ. ಈ ಸಹಭಾಗಿತ್ವ ನಮ್ಮ ಸೇವೆಗೆ ಹೊಸ ಆಯಾಮ ನೀಡುತ್ತದೆ.”

👉ಅನುಗ್ರಹ ಎಜುಕೇಶನ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ (ರಿ) ಸಂಸ್ಥೆಯು ಕಳೆದ 15 ವರ್ಷಗಳಿಂದ ಶೈಕ್ಷಣಿಕವಾಗಿ ಮತ್ತು ಸೇವಾ ಕ್ಷೇತ್ರಗಳಲ್ಲಿ ಸೇವೆಗಳನ್ನು ಸಲ್ಲಿಸುತ್ತಿದ್ದು ಅದರ ಭಾಗವಾಗಿ ತಾಂತ್ರಿಕ ಮತ್ತು ವೃತ್ತಿಪರ ತರಬೇತಿಗಳ ಶಿಕ್ಷಣ ಸಂಸ್ಥೆಯಾಗಿ ಕಳೆದ 12 ವರ್ಷಗಳಿಂದ ಯಶಸ್ವಿಯಾಗಿ ಶಿಕ್ಷಣವನ್ನು ನೀಡುತ್ತಿದ್ದು ಮಾತ್ರವಲ್ಲ ಮಂಗಳೂರಿನ ಮುಡಿಪು ಎಂಬಲ್ಲಿ ಸಂಸ್ಥೆಯ ಇನ್ನೊಂದು ಶಾಖೆಯನ್ನು ತೆರೆದು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಂಸ್ಥೆಯಾಗಿದೆ ಅನುಗ್ರಹ ಟ್ರೈನಿಂಗ್ ಕಾಲೇಜು ಹಾಗೂಕಳೆದ 20 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಹಲವಾರು ಯುನಿವರ್ಸಿಟಿಗಳ ಮಾನ್ಯತೆ ಇರುವ ಹಾಗೂ ಕೇಂದ್ರ ಸರಕಾರದ NSDC ಯಿಂದ ಅಂಗೀಕೃತಗೊಂಡ ಮಾತ್ರವಲ್ಲ ದೇಶದಾದ್ಯಂತ ಹಲವಾರು ಶಾಖೆಗಳನ್ನು ಒಳಗೊಂಡ ಸಂಸ್ಥೆಯಾಗಿದೆ MIFSE MINERVA ಕಾಲೇಜು.ಇದೀಗಬೆಳ್ತಂಗಡಿಯಲ್ಲಿ ಪ್ರಥಮ ಬಾರಿಗೆ ಎರಡು ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆಬೆಳ್ತಂಗಡಿಯ ಸಂತೆಕಟ್ಟೆಯ ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿರುವ ಅನುಗ್ರಹ ಟ್ರೈನಿಂಗ್ ಕಾಲೇಜು ಮತ್ತು ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಯಾದ ಮೈಫ್ಸ್ ಮಿನರ್ವಾ ಕಾಲೇಜು (MIFSE – Minerva College) ಮೊದಲ ಬಾರಿಗೆ ಜಂಟಿ ಸಹಭಾಗಿತ್ವದಲ್ಲಿ ಹೊಸ ಕಾಲೇಜು ಕ್ಯಾಂಪಸ್ ಅನ್ನು ಸ್ಥಾಪಿಸಿದ್ದು , ಎಲ್ಲಾ ರೀತಿಯ ಆಧುನಿಕ ಅಗತ್ಯತೆ ಇರುವ ಉದ್ಯೋಗಾವಕಾಶಕ್ಕೆ ಬೇಡಿಕೆ ಇರುವ ಪ್ರಮುಖ ಕೋರ್ಸುಗಳನ್ನು ಬೆಳ್ತಂಗಡಿಯಲ್ಲಿ ಪರಿಚಯಿಸಿ ಬಿಡ್ತಂಗಡಿಯಲ್ಲೇ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳನ್ನು ಉದ್ಯೋಗಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಸಂಸ್ಥೆ ಇದೀಗ ಪರಿಚಯಿಸುತ್ತಿದೆ ಆದ್ದರಿಂದ ಈ ಸಂಸ್ಥೆಯ ಅಧಿಕೃತ ಕಚೇರಿಯನ್ನು 2025ರ ಮೇ 5ರಂದು ಬೆಳಿಗ್ಗೆ 10:15ಕ್ಕೆ ಅದ್ಧೂರಿಯಾಗಿ ಉದ್ಘಾಟಿಸಲಾಯಿತು.

ಆರಂಭದಲ್ಲಿ ಸಂಸ್ಥೆಯ ಮುಖ್ಯ ಕಚೇರಿಯನ್ನು ಧಾರ್ಮಿಕವಾಗಿ ಪ್ರಾರ್ಥನೆಗೈದ ಧಾರ್ಮಿಕ ಮುಖಂಡ, ವಿದ್ವಾಂಸರಾಗಿರುವ ಸಬರಬೈಲ್ ತಂಗಲ್ ಎಂದು ಪ್ರಕ್ಯಾತಿ ಪಡೆದ ಸೈಯದ್ ಜಮಲುಲ್ಲೈಲ್ ತಂಗಳ್ ಇವರು ನೆರವೇರಿಸಿದರು. ಇವರೊಂದಿಗೆ ಸಂಸ್ಥೆಯ ಎಲ್ಲಾ ರೀತಿಯ ಮಾರ್ಗದರ್ಶಕರಾದ ಜಿ ಇಸುಬು, ಅಬ್ದುಲ್ ಹಮೀದ್ ಮುಸ್ಲಿಯಾರ್ ಸಾವಣಾಲು, ಹಾಗೂ ಸಾವಣಾಲು ಬದ್ರಿಯಾ ಜುಮಾ ಮಸೀದಿಯ ಖತೀಬ್ ಉಸ್ತಾದ್ ರಿಯಾಝ್ ಸಹದಿ, ಕನ್ನಡಿ ಕಟ್ಟೆ ಜುಮಾ ಮಸೀದಿಯ ಖತೀಬ್ ಉಸ್ತಾದ್ ಅಶ್ರಫ್ ಫೈಝಿ, ಹಾಗೂ ನೌಶಾದ್ ಅಝ್ಹರಿ ಕಕ್ಕಿಂಜೆ, ಉಸ್ಮಾನ್ ಉಸ್ತಾದ್ ಕನ್ನಡಿಕಟ್ಟೆ ಇದ್ದು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಉದ್ಘಾಟನಾ ಸಮಾರಂಭವನ್ನು ಬೆಸ್ಟ್ ಫೌಂಡೇಶನ್ ಸಂಸ್ಥಾಪಕರೂ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಬೆಳ್ತಂಗಡಿ ತಾಲೂಕಿನ ಯುವ ನಾಯಕ ಶ್ರೀ ರಕ್ಷಿತ್ ಶಿವರಾಮ್ ಅವರು ನೆರವೇರಿಸಿದರು.

ಸೋಲು ನಮಗೆ ಮುಕ್ತಾಯವಲ್ಲ ಅದು ಇನ್ನೊಂದು ಅಧ್ಯಾಯದ ಪ್ರಾರಂಭ,ಹಾಗೂ ಇವತ್ತಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪಾಠಗಳ ಜ್ಞಾನಕ್ಕಿಂತ ಹೆಚ್ಚು ಪ್ರಬಲವಾದದ್ದು ಕೌಶಲ್ಯವಾಗಿದೆ,ಈ ದೇಶದ ಯುವಕರನ್ನು ವಿದ್ಯಾರ್ಥಿಗಳನ್ನು ಕೌಶಲ್ಯತೆ ಹೊಂದಿದ ವ್ಯಕ್ತಿತ್ವ ನಿರ್ಮಾಣ ಮಾಡಿ ಉತ್ತಮವಾದ ಪ್ರಜೆಯನ್ನಾಗಿ ನಿರ್ಮಿಸಿ, ದೇಶಕ್ಕೆ ಒಳ್ಳೆಯ ಉದ್ಯೋಗಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವಿಶೇಷ ಶ್ರಮವಹಿಸುತ್ತಿದೆ ಎಂಬ ಸಂದೇಶವನ್ನು ನೀಡಿದಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್‌ನ ಸಂಸ್ಥಾಪಕ, ಅನುಗ್ರಹ ಟ್ರೈನಿಂಗ್ ಕಾಲೇಜಿನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಪ್ರಾಂಶುಪಾಲರಾದ ಎಲ್ಲರಿಗೂ ಚಿರಪರಿಚಿತ ವ್ಯಕ್ತಿ ತಲ್ಹತ್ ಎಂ.ಜಿ ಸವಣಾಲು ಇಬ್ಬರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ಭಾಗವಹಿಸಿ ತಮ್ಮ ಮಾರ್ಗದರ್ಶನ ಹಾಗೂ ಸಂಸ್ಥೆಯ ಉದ್ಯೋಗ ಆಧಾರಿತ ವಿವಿಧ ಕೋರ್ಸುಗಳ ಬಗ್ಗೆ ವಿವರಣೆಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಪ್ರವೇಶದ ಮೂಲಭೂತ ಮಾಹಿತಿಗಳ ಪರಿಚಯ, ಲಭ್ಯವಿರುವ ಹೊಸ ಕೋರ್ಸ್‌ಗಳ ಪರಿಚಯ, ಶೈಕ್ಷಣಿಕ ಮತ್ತು ವೃತ್ತಿಪರ ತರಬೇತಿಯ ಹೊಸ ಪ್ರಯತ್ನಗಳ ಬಗ್ಗೆ ತಾಲ್ಲೂಕಿನ ಎಲ್ಲಾ ಮುಖಂಡರುಗಳಿಗೆ ಮತ್ತು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿ ಕೊಟ್ಟರು,ಅನುಗ್ರಹ ಟ್ರೈನಿಂಗ್ ಕಾಲೇಜು ಇದರ ನಿರ್ದೇಶಕರಾಗಿರುವ ಮುಹಮ್ಮದ್ ತೌಸೀಪ್ ಇವರು ಸಂಸ್ಥೆಯ ವೆಬ್ಸೈಟ್ ಬಗ್ಗೆ ಸಂಪೂರ್ಣ ವಿವರಣೆಯನ್ನು ಮತ್ತು ಅದರ ಪ್ರಯೋಜನಗಳನ್ನು ನೀಡಿ ಪ್ರಸಕ್ತ ಸನ್ನಿವೇಶದಲ್ಲಿ ವೃತ್ತಿಪರ ತರಬೇತಿಗಳ ಅಗತ್ಯತೆಯನ್ನು ಸಭಿಕರಿಗೆ ತಿಳಿಸಿಕೊಟ್ಟರು.

ಸಂಸ್ಥೆಯ ಇನ್ನೋರ್ವ ನಿರ್ದೇಶಕರಾದ ಅಬ್ದುಲ್ ಖಾದರ್ ಇವರು ಇಡೀ ಕಾರ್ಯಕ್ರಮದ ನಿರೂಪಣೆ ಮಾಡುವುದರೊಂದಿಗೆ ಎಲ್ಲರನ್ನು ಸ್ವಾಗತಿಸಿಕಿಲ್ರ್ ಜುಮಾ ಮಸೀದಿ ಅಧ್ಯಕ್ಷರಾಗಿರುವ ಹಾಗೂ ಬೆಳ್ತಂಗಡಿ ತಾಲೂಕು ಮುಸ್ಲಿಂ ಒಕ್ಕೂಟ ಇದರ ಅಧ್ಯಕ್ಷರಾಗಿರುವ ನಝೀರ್ ಬೆಳ್ತಂಗಡಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು,ಅದೇ ರೀತಿ ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆಪಿಸಿಸಿ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರಾಗಿರುವ ಹನೀಫ್ ಉಜಿರೆ ಇವರು ವೃತ್ತಿಪರ ತರಬೇತಿಗಳ ಪ್ರಾಮುಖ್ಯತೆಯ ಬಗ್ಗೆ ಮತ್ತು ಅಗತ್ಯತೆಯ ಸಂದೇಶವನ್ನು ನೀಡಿ ಸಂಸ್ಥೆಗೆ ಶುಭ ಹಾರೈಸಿದರು ಹಾಗೂ ಇನ್ನೋರ್ವ ಮುಖ್ಯ ಅತಿಥಿಯಾದ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಹಿರಿಯ ಅಧಿಕಾರಿ ಬಿ ಸೇಕುನ್ನಿ ಬೆಳ್ತಂಗಡಿ ಇವರು ಫೈರ್ ಅಂಡ್ ಸೇಫ್ಟಿ ಕೋರ್ಸ್ ಇನ್ನಿತರ ಪ್ರಮುಖ ಬೇಡಿಕೆಗಳುಲ್ಲ ಮಾನ್ಯತೆ ಪಡೆದ ಕೋರ್ಸುಗಳು ಬೆಳ್ತಂಗಡಿಯಲ್ಲಿ ಇಲ್ಲೇ ವಿದ್ಯಾರ್ಥಿಗಳಿಗೆ ಸಿಗುತ್ತಿರುವುದು ಈ ಭಾಗದ ವಿದ್ಯಾರ್ಥಿಗಳ ಭಾಗ್ಯ ಎಂದು ಅಭಿಪ್ರಾಯಪಟ್ಟರು.

ತಕ್ವ ಜುಮಾ ಮಸೀದಿ ಬಳಂಜ ಇದರ ಝಮೀರ್ ಸಹದಿ ಇವರು ಸಂಸ್ಥೆಯ ಬೆಳೆದು ಬಂದ ಹಾದಿಯ ಬಗ್ಗೆ ಸಂತೋಷವನ್ನು ಹಂಚಿಕೊಂಡು ಸಂಸ್ಥೆಗೆ ಶುಭ ಹಾರೈಸಿದರು.

ಅದೇ ರೀತಿ ಮುಸ್ಲಿಂ ಯುವಜನ ಪರಿಷತ್ ಇದರ ತಾಲೂಕ್ ಅಧ್ಯಕ್ಷರಾಗಿರುವ ಹಾಗೂ ಯುವ ವಕೀಲರು ಆಗಿರುವಂತಹ ನವಾಝ್ ಕಕ್ಕಿಂಜೆ ಇವರು ಬೆಳೆಯುತ್ತಿರುವ ಭಾರತ ದೇಶದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣಗಳ ಅಗತ್ಯತೆಯನ್ನು ವಿವರಿಸಿದರು.

ಮುಖ್ಯವಾಗಿ ಮೈಫ್ಸ್ ಮಿನರ್ವ ಕಾಲೇಜು ಮಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಮನೋಜ್ ಇವರು ಸಂಸ್ಥೆಯ ಬೆಳವಣಿಗೆಯ ಬಗ್ಗೆ ಹಾಗೂ NSDC ಮಾನ್ಯತೆಯ ಪ್ರಮಾಣ ಪತ್ರದ ವಿವಿಧ ಪ್ರೊಫೆಷನಲ್ ಕೋರ್ಸ್ಗಳು ಈಗಿನ ಯುವ ಸಮೂಹಕ್ಕೆ ಅತಿ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಮುಂದುವರಿದು ಸಂಸ್ಥೆಯ ಅಧಿಕೃತ ವೆಬ್ ಸೈಟ್ www.anugraheducationtrust.com , ಅನ್ನು ದೇಶ ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯಮವನ್ನು ಪ್ರಾರಂಭಿಸಿ ಯಶಸ್ವಿಯನ್ನು ಕಂಡ ಓರ್ವ ಉದ್ಯಮಿ ಐ ಜಿ ಸಂಶುದ್ದೀನ್ ತುಂಬೆ (ಸುನ್ನತ್ ಕೆರೆ) ಇವರು ಅಧಿಕೃತವಾಗಿ ಚಾಲನೆಯನ್ನು ನೀಡಿ ಸಂಸ್ಥೆಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರ ತಂದೆಯ ಸುಲೈಮಾನ್ ಕಕ್ಕಿಂಜೆ, ಕರೀಮ್ ಗೇರುಕಟ್ಟೆ ಸದಸ್ಯರು ಗ್ರಾಮ ಪಂಚಾಯತ್ ಕಳಿಯ,ಶ್ರೀರಾಮ ಕಾಂಪ್ಲೆಕ್ಸ್ ಕಟ್ಟಡದ ಮಾಲೀಕರಾದ ಮುಕೇಶ್ ಆರ್ ನಾಯಕ್, ಅನುಗ್ರಹ ಸ್ಕೂಲ್ ಬುಕ್ ಕಂಪನಿ ಬೆಳ್ತಂಗಡಿ ಇದರ ಮಾಲಕರಾದ ಮಹಮ್ಮದ್ ಅಶ್ರಫ್ ಫೈಜಿ, ಹಾರೀಶ್ ಮುರ, ಖಾಲಿದ್ ಗಂಡಿ, ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ, ಅಬ್ದುಲ್ ಹಮೀದ್ ಮಾಲಕರು ಎಆರ್ ಗ್ರೂಪ್, ಮೊಹಮ್ಮದ್ ನಾಸಿಕ್ ಮಲೆಬೆಟ್ಟು, ಮಹಮ್ಮದ್ ಆಶೀರ್ ಸವಣಾಲು ಪಾಲ್ಗೊಂಡಿದ್ದರು ಸಂಸ್ಥೆಗೆ ಶುಭ ಹಾರೈಸಿದರು.

ಇದೇ ಕಾರ್ಯಕ್ರಮದಲ್ಲಿ ಶ್ರೀರಾಮ ಕಾಂಪ್ಲೆಕ್ಸ್ ಇದರ ವಿವಿಧ ಬ್ಯಾಂಕ್, ಅಂಗಡಿ, ಮತ್ತು ವಿವಿಧ ಸಂಸ್ಥೆಗಳ ಮ್ಯಾನೇಜರ್ ಸಿಬ್ಬಂದಿಗಳು ಮಾಲಕರು ಅದೇ ರೀತಿ ಈಗಾಗಲೇ ದಾಖಲಾತಿಯನ್ನು ಪಡೆದ ವಿದ್ಯಾರ್ಥಿಗಳು ಮತ್ತು ಪೋಷಕರು ಮಾತ್ರವಲ್ಲ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲಾ ಮುಖ್ಯಸ್ಥರ ಕುಟುಂಬಸ್ಥರು ಮತ್ತು ಹಿತೈಷಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಸ್ಥೆಗೆ ಶುಭ ಹಾರೈಸಿದರು.

m

Related Posts