Featured, ಇತರೆ, ರಾಜಕೀಯ, ಸ್ಥಳೀಯ

ಕಡಬ: ಪಟ್ಟಣ ಪಂಚಾಯತ್ ಚುನಾವಣೆಗೆ ಆಮ್ ಆದ್ಮಿ ಪಕ್ಷ ಸಜ್ಜು – 13 ವಾರ್ಡ್‌ಗಳಲ್ಲಿ ಸ್ಪರ್ಧೆ ಖಚಿತ!.

ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ  ಇನ್ನೂ ದಿನ ಗಣನೆ. ದೇಶದ ರಾಜಕೀಯ ವಲಯದಲ್ಲಿ ಕ್ರಾಂತಿ ಕಾರಿ ಬದಲಾವಣೆ ಗೆ ಮುನ್ನುಡಿ ಬರೆದ ಆಮ್ ಆದ್ಮಿ ರಾಷ್ಟ್ರೀಯ ಪಕ್ಷ ಇದೀಗ ಕಡಬದತ್ತ ಮುಖ ಮಾಡಿದೆ. ಮುಂದೆ ಬರುವ ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ಸ್ಪರ್ಧೆಗೆ ಆಪ್ ಸಜ್ಜಾಗಿದ್ದು‌ ಈ ಬಾರಿ 13 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಂಡಿದೆ ಜನಪರ‌ ಭ್ರಷ್ಟಾಚಾರ ವಿರೋಧಿ ನಿಲುವಿಗಾಗಿ ಹೆಸರುವಾಸಿಯಾಗಿರುವ ಆಪ್ ಪಕ್ಷ, ಕಡಬದಲ್ಲಿಯೂ ಸಾರ್ವಜನಿಕ ಸೇವೆ ಮತ್ತು ಅಭಿವೃದ್ಧಿಯ ಆಧಾರದ ಮೇಲೆ ಮತ ಗಳಿಸಲು ಸಜ್ಜಾಗಿದೆ.
ಆಮ್ ಆದ್ಮಿ ಪಕ್ಷದ ರಾಜ್ಯ ಮತ್ತು ಜಿಲ್ಲಾ ಸಮಿತಿ ಪದಾಧಿಕಾರಿಗಳು ಹಾಗೂ ಸ್ಥಳೀಯ ಕಾರ್ಯಕರ್ತರ ತಂಡ  ಪ್ರಚಾರ ಕಾರ್ಯದಲ್ಲಿ ಈಗಾಗಲೇ ತೊಡಗಿಸಿಕೊಂಡಿದೆ. ಪಕ್ಷದ ನಿಲುವು ಭವಷ್ಯದ ಯೋಜನೆಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರದ ಗುರಿಗಳನ್ನು ಜನರ ಮಧ್ಯೆ ತಲುಪಿಸುವ ಕಾರ್ಯ ನಡೆಯುತ್ತಿದೆ.
ಪಕ್ಷದ ನಾಯಕರ ಪ್ರಕಾರ, “ಪಾರದರ್ಶಕ ಆಡಳಿತ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಸಾರ್ವಜನಿಕ ಹಣದ ಸರಿಯಾದ ಬಳಕೆ ನಮ್ಮ ಮುಖ್ಯ ಉದ್ದೇಶ. ಕಡಬ ಜನತೆಗೆ ನೈಜ ಪರಿವರ್ತನೆಯತ್ತ ದಾರಿ ತೋರಿಸಲು ಈ ಚುನಾವಣೆಯು ಪ್ರಮುಖ ಹಂತವಾಗಿದೆ.”
ಇದೇ ಮೊದಲ ಬಾರಿಗೆ ಕಡಬದಲ್ಲಿ ಆಪ್ ಪಕ್ಷದಿಂದ ಇಷ್ಟೊಂದು ವ್ಯಾಪಕ ಸ್ಪರ್ಧೆ ನಡೆಯುತ್ತಿರುವುದು ರಾಜಕೀಯವಾಗಿ ಗಮನಾರ್ಹವಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಎಸ್ ಡಿ ಪಿ ಐ ಪಕ್ಷಗಳೊಂದಿಗೆ ಇಲ್ಲಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಹೋರಾಟ ಕುತೂಹಲಕ್ಕೆ ಕಾರಣವಾಗಿದೆ.

ವರದಿ : ರುನೈಸ್ ಇವಾರ್ತೆ ಸುಳ್ಯ

m

Related Posts