Featured, ಅಂಕಣ, ಇತರೆ, ಸ್ಥಳೀಯ

ಕೊಯನಾಡು ಬಂಟೋಡಿ ರಸ್ತೆ ಉದ್ಘಾಟಿಸಿದ ಶ್ರೀ ಎ ಎಸ್ ಪೊನ್ನಣ್ಣ

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ, ಬಂಟೋಡಿಯಲ್ಲಿ ಮಾನ್ಯ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆಯನ್ನು, ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.     

ಈ ಹಿಂದಿನ ಭೇಟಿ ಸಂದರ್ಭದಲ್ಲಿ ಮಾನ್ಯ ಶಾಸಕರು ಈ ರಸ್ತೆಗೆ ಕಾಂಕ್ರೀಟ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಶಾಸಕರ ಅನುದಾನದಲ್ಲಿ ಉತ್ತಮ ಗುಣಮಟ್ಟದೊಂದಿಗೆ ನಿರ್ಮಾಣವಾದ ಈ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.     

ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್, ಪ್ರಮುಖರಾದ ಹನೀಫ್ ಎಸ್ ಪಿ, ರಾಜೇಶ್ವರಿ, ಮೊಯಿದಿನ್ ಕುಂಞಿ, ರಿತಿನ್ ಡೆಮ್ಮಲೆ, ವಿಜಯಕುಮಾರ್ ಕನ್ಯಾನ, ಪುರುಷೋತ್ತಮ ಕಾಡುಮನೆ, ಉಮೇಶ್, ಕುಸುಮಕರ, ಹಾಗೂ  ಸರಕಾರಿ ನಾಮ ನಿರ್ದೇಶಕ ಅಧ್ಯಕ್ಷರುಗಳು/ಸದಸ್ಯರುಗಳು, ಡಿಸಿಸಿ ಪ್ರಮುಖರು, ಬ್ಲಾಕ್ ಕಾಂಗ್ರೆಸ್ ಪ್ರಮುಖರು, ಸ್ಥಳೀಯ ಮುಖಂಡರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

m

Related Posts